ಹಾವೇರಿ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಡಿ ಕೆನರಾ ಬ್ಯಾಂಕ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಬಿ.ಪಿಎಲ್. ಕಾರ್ಡ್ ಹೊಂದಿದ ನಿರುದ್ಯೋಗ ಯುವಕರಿಗೆ ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ಕುರಿತಂತೆ ಹತ್ತು ದಿನಗಳ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ.
ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು, ಕನ್ನಡ ಓದಲು ಬರೆಯಲು ಬರುವ ನಿರುದ್ಯೋಗ ಯುವಕರು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿಯಲ್ಲಿ ಸಾಫ್ಟ್ ಸ್ಕೀಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿಂಗ್, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಉದ್ಯಮಶೀಲತಾ ಅಭಿವೃದ್ಧಿಯ ಮಾಹಿತಿ ನೀಡಲಾಗುವುದು.
ಆಸಕ್ತರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಸ್ವ-ಉದ್ಯೋಗ ತರಬೇತಿ ಸಂಸ್ಥೆಗೆ ದಿನಾಂಕ 27-09-2021 ರೊಳಗಾಗಿ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9483485489, 9482188780, 9743321062, 8197022501 ಹಾಗೂ ದೂರವಾಣಿ ಸಂಖ್ಯೆ 08284-295307 ಗೆ ಸಂಪರ್ಕಿಸಬಹುದು.