ಸಹೋದ್ಯೋಗಿಗಳಿಗೆ….
ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಹಲವು ಕಾರಣಗಳ ಪೈಕಿ ಈ ಒಂದು ಕಾರಣವು ಬಹುಮುಖ್ಯವಾಗಿದೆ. ಅದು “ಬಾರ್ ಶೇಡೂಲ್ಡ್ ಗಳು”(ಬಾರ್ ಡ್ಯೂಟಿ) ಇವುಗಳಿಂದ ನಮ್ಮ ಚಾಲನಾ ಸಿಬ್ಬಂದಿಗಳ ಮೇಲೆ ಕರ್ತವ್ಯದ ಹೊರೆ ಅತಿಯಾಗುತ್ತಿದೆ. ಇದರಿಂದ ನಮ್ಮ ಆರೋಗ್ಯ ಹಾಳಾಗುತಿದೆ. ನಮ್ಮ ಚಾಲನಾ ಸಿಬ್ಬಂದಿಗಳ ಪೈಕಿ ಶೇ.80 ಜನ ತಮ್ಮ ಸ್ವಂತ ಊರು ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವುದರಿಂದ ಊರುಗಳಿಗೆ ಹೋಗಿ ಬರಲು ಕಷ್ಟವಾಗುತಿದೆ.
ಹಳ್ಳಿಗಳಲ್ಲಿ ನೈಟ್ ಹಾಲ್ಟ್ ಗಳಲ್ಲಿ ರಾತ್ರಿ ಮಲಗುವ ವ್ಯವಸ್ಥೆ ಶೇ.90 ಸೂಕ್ತವಾಗಿ ಇಲ್ಲ. ಮಳೆಗಾಲದಲ್ಲಿ, ಮತ್ತು ಬೇಸಿಗೆಯಲ್ಲಿ ನರಕಕ್ಕೆ. ಸರಿಯಾಗಿರುತ್ತದೆ. ಇದರಿಂದಾಗಿ ಸರಿಯಾಗಿ ನಿದ್ರೆ ಆಗದೆ ಆರೋಗ್ಯ ಹಾಳಾಗುತಿದೆ.
ಹಳ್ಳಿಗಳ ಕಡೆ ಮತ್ತು ಕಲ್ಯಾಣ ಕರ್ನಾಟಕದ ಹಲವು ಕಡೆಗಳಲ್ಲಿ ಮದ್ಯಾಹ್ನ ದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆ ಇರುತ್ತದೆ. ಆ ಸಮಯದಲ್ಲಿ ನಾವು ಆಯಾ ದಿನದ ಸರಾಸರಿ ಕಿ.ಮಿ. ಗುರಿ ಮುಟ್ಟುವ ಮೇಲಧಿಕಾರಿಗಳ ಒತ್ತಡದಲ್ಲಿ ಬಸ್ಗಳನ್ನು ಖಾಲಿಯಾಗಿ ಓಡಿಸುತ್ತೇವೆ. ಇದರಿಂದಾಗಿ ಸಂಸ್ಥೆಗೆ ಭಾರಿ ನಷ್ಟವಾಗುತ್ತದೆ. ಈ ಆರ್ಡಿನರಿ ಬಾರ್ ರೂಟ್ ಗಳು ನಮ್ಮ ಸಂಸ್ಥೆಗಳಿಗೆ ಒಂದು ಕೆಟ್ಟ ವೈರಸ್ ಇದ್ದಹಾಗೆ.
ಘಟಕಗಳಲ್ಲಿ ನಡೆಯುತ್ತಿವೆ ಕಾರ್ಮಿಕರ ಕುಂದುಕೊರತೆಗಳ ಸಭೆಗಳು: 4 ನಿಗಮಗಳ ಎಲ್ಲ ಘಟಕಗಳಲ್ಲಿ ವಿಭಾಗೀಯಾ ಮೇಲಧಿಕಾರಿಗಳಿಂದ ಕಾರ್ಮಿಕರ ಕುಂದುಕೊರತೆಗಳ ಸಭೆಗಳು ನಡೆಯುತ್ತಿವೆ.
ಈ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲನಾ ಸಿಬ್ಬಂದಿಗಳು ಭಾಗವಹಿಸಿ ತಮ್ಮ ತಮ್ಮ ಘಟಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ B.A.ರೂಟ್ ಗಳನ್ನು ಸುಮಾರು 15-20 ವರ್ಷಗಳ ಹಿಂದೆ ಇರುವ ರೀತಿ ಬಗ್ಗೆ ಮನವಿ ಪತ್ರಗಳನ್ನು ಸಲ್ಲಿಸಿ. ಇಂದಿನ ಸ್ಥಿತಿಯನ್ನು ವಿವರಿಸಬೇಕಿದೆ.
ನಮಗೆ ಅವಶ್ಯಕತೆಗೆ ಅನುಗುಣವಾಗಿ ರಜೆಗಳು ಸಿಗುವುದಿಲ್ಲ. ಚಿಕ್ಕ ಪುಟ್ಟತುರ್ತು ಕೆಲಸಗಳಿಗೂ ಗೈರು ಹಾಜರಿಯಾಗಬೇಕಿರುತ್ತದೆ. ಘಟಕಗಳಲ್ಲಿ B. A. ರೂಟ್ ಗಳು ಜಾಸ್ತಿ ಇದ್ರೆ ಕರ್ತವ್ಯ ನಿರ್ವಹಣೆ ಎಲ್ಲರಿಗೂ ಸುಲಭವಾಗುತ್ತದೆ.
ಆದ್ದರಿಂದ ಎಲ್ಲ ಘಟಕಗಳ ಚಾಲನಾ ಸಿಬ್ಬಂದಿಗಳು B. A ರೂಟ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಿಸಲು ಎಲ್ಲರೂ ತಪ್ಪದೆ ಮನವಿಗಳನ್ನು ತಮ್ಮ ತಮ್ಮ ವಿಭಾಗೀಯಾ ಕಚೇರಿಗಳಿಗೆ ಕಳುಹಿಸಲು ಮನವಿ.
ಇಂತಿ ಸಾರಿಗೆ ನೌಕರರು