CrimeNEWSಸಿನಿಪಥ

ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಸೈಯದ್ ನಿಜಾಮುದ್ದೀನ್ ಸತ್ಯ ಜಿತ್ ಆಗಿದ್ದು ಹೀಗೆ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟ ಸತ್ಯಜಿತ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಸೇರಿದಂತೆ ಅನೇಕರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸತ್ಯ ಜಿತ್ ಅವರಮೂಲ ಹೆಸರು ಬಹುತೇಕರಿಗೆ ಗೊತ್ತಿಲ್ಲ. ಹುಬ್ಬ ಳ್ಳಿ ಮೂಲದ ಸತ್ಯ ಜಿತ್ ಅವರ ಮೂಲ ಹೆಸರು ಸೈಯದ್ ನಿಜಾಮುದ್ದೀನ್.

ಸೈಯದ್ ನಿಜಾಮುದ್ದೀ ನ್ ಅವರು 1986 ರಲ್ಲಿ ಬಿಡುಗಡೆಯಾಗಿದ್ದ ‘ಅಂಕುಶ್’ ಸಿನಿಮಾದಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿ ದ್ದ ರು. ಮುಂದೆ ಅವರು ಕೆಲ ಚಿತ್ರ ಗಳಲ್ಲಿ ಅಭಿನಯಿಸಿದ ನಂತರ ತಮ್ಮ ಹೆಸರನ್ನು ಸತ್ಯ ಜಿತ್ ಎಂದು ಬದಲಾಯಿಸಿಕೊಂಡರು. ಬಳಿಕ ಅವರು ಅದೇ ಹೆಸರಿನಿಂದ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದರು.

ಖಳ ಪಾತ್ರದಲ್ಲೂ ತಮ್ಮ ಗಮ್ಮತ್ತು ತೋರಿಸಿದ್ದ ಅವರು ಹಾಸ್ಯ ಪಾತ್ರದಲ್ಲಿ ಹಾಗೂ ಪೋಷಕ ಪಾತ್ರದಲ್ಲೂ ನಟಿಸಿ ಸೈ ಎನಿಸಿಕೊಂಡರು. ನಟ ನಾನಾ ಪಾಟೇಕರ್ ಅವರ ಸಂಪರ್ಕಕ್ಕೆ ಬಂದು ಹಿಂದಿಯ ಕೆಲ ಚಿತ್ರ ಗಳಲ್ಲಿಯೂ ಅಭಿನಯಿಸಿದ್ದರು.

ನಗರದ ಬೌರಿಂಗ್ ಆಸ್ಪ ತ್ರೆಯಲ್ಲಿ ನಿಧನರಾದ ಸತ್ಯ ಜಿತ್ ಅವರ ಮೃತದೇಹವನ್ನು ಅವರ ಹೆಗಡೆನಗರದ ನಿವಾಸಕ್ಕೆ ಕೊಂಡೊಯ್ಯ ಲಾಗಿದ್ದು , ಅಲ್ಲಿನ ಖಬರಸ್ತಾನದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಬೆಳ್ಳಿತೆರೆಯ ಮೇಲೆ ಖಳ, ಪೊಲೀಸ್, ಪೋಷಕ ನಟನಾಗಿ ಸತ್ಯ ಜಿತ್ ಅವರನ್ನು ಕಾಣದವರು ಅಪರೂಪ. 1986ರಲ್ಲಿ ಬಿಡುಗಡೆಯಾದ ‘ಅಂಕುಶ್’ ಚಿತ್ರ ದಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ರು. ಮುಂದೆ ಮೈಸೂರು ಜಾಣ (1992) ಅವರಿಗೆಚಂದನವನದಲ್ಲಿ ನೆಲೆಯೂರಲು ಬ್ರೇ ಕ್ ಕೊಟ್ಟ ಸಿನಿಮಾ.

‘ಪುಟ್ನಂಜ’, ‘ಶಿವಮೆಚ್ಚಿದ ಕಣ್ಣಪ್ಪ ’, ‘ಚೈತ್ರ ದ ಪ್ರೇ ಮಾಂಜಲಿ’, ‘ಆಪ್ತಮಿತ್ರ ’ ಚಿತ್ರದ ಪಾತ್ರಗಳು ಜನಮಾನಸದಲ್ಲಿ ಇನ್ನೂ ನೆನಪಿವೆ. 600ಕ್ಕೂ ಅಧಿಕ ಸಿನಿಮಾಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ