- ಚನ್ನಗಿರಿ ಹತ್ತಿರದ ದೋಣಿಹಳ್ಳಿಯಿಂದ ಸಂತೇಬೆನ್ನೂರಿನ ತಮ್ಮ ತೋಟಕ್ಕೆ ಅಡಕೆ ಗಿಡಗಳನ್ನು ಸಾಗಿಸಿರುವುದು
- ಆರೇಳು ಟ್ರಿಪ್ ಸಾಗಿಸಿರುವುದು , ಸಾರಿಗೆ ನೌಕರರನ್ನೂ ವೈಯುಕ್ತಿಕ ಕೆಲಸಕ್ಕೆ ಬಳಸಿಕೊಂಡ ಅಧಿಕಾರಿ
- ವಿಡಿಯೋದಲ್ಲಿ ಕಾಣುವ ಕೆಂಪು ಟೀ ಶರ್ಟ್ ಹಾಕಿಕೊಂಡಿರುವ ವ್ಯಕ್ತಿಯೆ ಡಿಟಿಒ
ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದ ವಿಭಾಗೀಯ ಸಂಚಾರಿ ಅಧಿಕಾರಿ (ಡಿಟಿಒ) ಸಾರಿಗೆ ವಾಹನವನ್ನು ದುರುಪಯೋಗ ಪಡಿಸಿಕೊಂಡು ತನ್ನ ತೋಟಕ್ಕೆ ಬೇಕಾದ ಅಡಕೆ ಸಸ್ಯಗಳನ್ನು ತರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇನ್ನು ಸಾರಿಗೆ ನೌಕರರು ಮುಷ್ಕರ ಮಾಡಿದರು ಎಂಬ ಕಾರಣಕ್ಕೆ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಇನ್ನಿಲ್ಲದ ಹಿಂಸೆ ನೀಡುತ್ತಿರುವ ಸಾರಿಗೆ ಆಡಳಿತ ವರ್ಗ ಈ ರೀತಿ ಸಾರಿಗೆ ವಾಹನ ಮತ್ತು ಸಾರಿಗೆ ನೌಕರರನ್ನು ತನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಈ ಅಧಿಕಾರಿಯ ವಿರುದ್ಧ ಇನ್ನೂ ಏಕೆ ಕಾನೂನು ಕ್ರಮ ಜರುಗಿಸಿಲ್ಲ ಎಂಬುದುವುದು ಪ್ರಶ್ನೆಯಾಗಿಯೇ ಉಳಿದಿದೆ.
ಹೌದು! ಇಲ್ಲಿ ಅಧಿಕಾರಿಗಳಿಗೆ ಒಂದು ನ್ಯಾಯ ನೌಕರರಿಗೆ ಒಂದು ನ್ಯಾಯ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಆದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸಂಸ್ಥೆಯ ವಾಹನ ಮತ್ತು ನೌಕರರನ್ನು ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳನ್ನು ಶಿಕ್ಷಿಸುವ ಬದಲಿಗೆ ಮತ್ತೆ ನೌಕರರನ್ನು ಶಿಕ್ಷಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಅಲ್ಲದೆ ಸಂಸ್ಥೆ ಲಾಭದಲ್ಲಿದ್ದರು ಇಂಥ ಅಧಿಕಾರಿಗಳಿಂದ ನಷ್ಟವನ್ನು ಅನುಭವಿಸುವಂತಾಗಿದೆ.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಕಚೇರಿ ವಾಹನದಲ್ಲಿ ಮಂಗಳೂರು ಡಿಸಿ ಅರುಣ್ ಕುಮಾರ್ ಕುಟುಂಬದ ದರ್ಬಾರ್: ಸಾಥ್ ನೀಡಿದ ಎಡಬ್ಲ್ಯುಎಸ್
ಡಿಸಿ ಸಿದ್ದೇಶ್ ಅವರು ಪರೋಕ್ಷವಾಗಿ ಕಾರಣ: ಇನ್ನು ಈ ವಿಷಯ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಅವರ ಗಮನಕ್ಕೂ ಬಂದಿದೆ. ಆದರೆ ಅವರು ಈ ಬಗ್ಗೆ ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿಸಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರುವ ಬದಲಿಗೆ ಕೃತ್ಯವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ಅಂದರೆ ಈ ರೀತಿ ವಾಹನ ದುರುಪಯೋಗ ಪಡಿಸಿಕೊಳ್ಳುವಲ್ಲಿ ಡಿಸಿ ಸಿದ್ದೇಶ್ ಅವರು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಇಲ್ಲಿ ನೋಡಿ ದಾವಣಗೆರೆ ಡಿಟಿಒ ಮಂಜುನಾಥ ಸಂಸ್ಥೆಯ ವಾಹನದಲ್ಲಿ ಚನ್ನಗಿರಿ ಹತ್ತಿರದ ದೋಣಿಹಳ್ಳಿಯಿಂದ ಸಂತೇಬೆನ್ನೂರಿನಲ್ಲಿರುವ ಅವರ ತೋಟಕ್ಕೆ ಅಡಕೆ ಗಿಡಗಳನ್ನು ಇಲಾಖೆ ವಾಹನದಲ್ಲಿ ಸಾಗಿಸಿದ್ದಾರೆ. ಅದೂ ಒಂದು ಬಾರಿ ಅಲ್ಲ ಆರೇಳು ಟ್ರಿಪ್ ಓಡಾಡಿರುವುದು ಖಚಿತವಾಗಿದೆ.
ತನ್ನ ತೋಟಕ್ಕೆ ಅಡಕೆ ಗಿಡಗಳನ್ನು ಸಾಗಿಸಲು ಬೇರೆ ಕೂಲಿಗಾರರನ್ನೂ ಬಳಸಿಕೊಂಡಿಲ್ಲ ಬದಲಿಗೆ ಇವರು ಸಾರಿಗೆ ನೌಕರರನ್ನೇ ಬಳಸಿಕೊಂಡು ತನ್ನ ವೈಯಕ್ತಿಕ ಕೆಲಸ ಮಾಡಿಸಿಕೊಂಡಿದ್ದಾರೆ. ಇವರ ಈ ನಡೆಯಿಂದ ಸಂಸ್ಥೆಗೆ ಅಂದಾಜು 15 ಸಾವಿರ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ. ಜತೆಗೆ ಇವರು ಅಂದು ಕರ್ತವ್ಯಕ್ಕೆ ಹಾಜರಾಗಿಲ್ಲ ಅಂದರೆ ಅವರ ವೇತನ ಸೇರಿಸಿದರೆ ಕನಿಷ್ಠ 20 ಸಾವಿರ ರೂ.ವರೆಗೆ ಸಂಸ್ಥೆಗೆ ನಷ್ಟವಾಗಿದೆ.
ಅಂದರೆ, ಅಧಿಕಾರಿಯ ವೈಯಕ್ತಿಕ ಕೆಲಸಕ್ಕೆ ಸಾರಿಗೆ ವಾಹನ ಮತ್ತು ನೌಕರರನ್ನು ಬಳಸಿಕೊಂಡಿರುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೂ ಈ ಕೃತ್ಯವನ್ನು ಅಧಿಕಾರಿ ಮಂಜುನಾಥ್ ಎಸಗಿ ಒಂದು ತಿಂಗಳು ಕಳೆಯುತ್ತಿದ್ದರೂ ಈವರೆಗೂ ಈತನ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಇರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ.
ಇನ್ನು ಅವರು ಸಾರಿಗೆ ವಾಹನವನ್ನು ಮತ್ತು ಸಿಬ್ಬಂದಿಯನ್ನು ದುರುಪಯೋಗ ಪಡಿಸಿಕೊಂಡಿರುವ ವಿಡಿಯೋ ವಿಜಯಪಥಕ್ಕೆ ಲಭ್ಯವಾಗಿದ್ದು ಅವರ ದುರ್ನಡತೆಯನ್ನು ಬಿಚ್ಚಿಡುತ್ತಿದೆ. ಇನ್ನು ಈ ಅಧಿಕಾರಿಯ ವಿರುದ್ಧ ಸಂಸ್ಥೆಯ ಎಂಡಿ ಮತ್ತು ಸಾರಿಗೆ ಸಚಿವರು ಸೇರಿದಂತೆ ಸರ್ಕಾರ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಏನು ತಪ್ಪನ್ನು ಮಾಡದ ಅಮಾಯಕ ಕಾರ್ಮಿಕರನ್ನು ವಜಾ ಮಾಡಿರುವ ಸಂಸ್ಥೆಯ ಆಡಳಿತ ವರ್ಗ ಇಂಥ ಅಧಿಕಾರಿಗಳ ಬಗ್ಗೆ ಸೂಕ್ತ ದಾಖಲೆಗಳಿದ್ದರೂ ಏನೂ ಕಾಣದಂತೆ ವರ್ತಿಸುತ್ತಿರುವುದು ಏಕೆ? ಈ ಆಡಳಿತ ವರ್ಗಕ್ಕೆ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ದಮ್ ಇಲ್ಲದಷ್ಟು ನಿಸ್ಪ್ರಯೋಜಕವಾಗಿದೆಯೆ?.
ಅದೇ ಒಬ್ಬ ನೌಕರ ಏನೊಂದು ತಪ್ಪು ಮಾಡದಿದ್ದರೂ ಕೂಡಲೇ ಅಮಾನತು, ವಜಾ ಮಾಡುತ್ತೀರಿ ಅದಕ್ಕೆ ನೌಕರರ ಹೇಳಿಕೆಯನ್ನು ಪಡೆಯುವುದಿಲ್ಲ. ಈಗ ಮಾತ್ರ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನಿಮಗೆ ಬೇಕಾದ ಸಾಕ್ಷಿ ಸಹಿತ ದಾಖಲೆಗಳು ಕಣ್ಣಮುಂದೆ ಇದ್ದರೂ ಅವುಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ಅಲ್ಲ.
ಏಕೆ ಈ ರೀತಿಯ ಮಲತಾಯಿ ಧೋರಣೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು. ಅದನ್ನು ಮೊದಲು ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಚಿವರು ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
Diss miss maadi intha nanmaklanna samste haalgbekandre ivare nera hone
ಈ ಸಂಸ್ಥೆಯಲ್ಲಿ ಕಾರ್ಮಿಕರಿಗೆ ಒಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯ