ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶೃಂಗೇರಿ ಶಾರದಾ ಪೀಠದೊಂದಿಗಿನ ತಮ್ಮ ಒಡಾನಾಟವನ್ನು ಉಲ್ಲೇಖಿಸಿ ದೇವೇಗೌಡರು ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.
ದೇವೇಗೌಡರು ಬರೆದಿರುವ ಪತ್ರದಲ್ಲೇನಿದೆ?: ಕೇದಾರನಾಥದಲ್ಲಿ ನವೆಂಬರ್ 5 ರಂದು ನಿಮ್ಮಿಂ ದ ಅನಾವರಣಗೊಂಡ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ನೋಡಿ ನಾನು ಭಾವುಕನಾದೆ.
ಕರ್ನಾಟಕದ ಚಿಕ್ಕಮಗಳೂರಿನ ಶೃಂಗೇರಿಯ ಶಾರದಾ ಪೀಠದ ಅನುಯಾಯಿ ನಾನು. ನಿಮಗೆ ತಿಳಿದಿರುವಂತೆ, ಮಹಾನ್ ಸಂತ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಶಕ್ತಿಕೇಂದ್ರಗಳಲ್ಲಿ ಇದೂ ಕೂಡ ಒಂದು.
ಶೃಂಗೇರಿ ಮಠ ನನ್ನ ನ್ನು ವಿಶೇಷವಾಗಿ ಆಕರ್ಷಿಸಿದ್ದು ಅದರ ಸಾಮರಸ್ಯ ದಿಂದ. ಇದು ಶತಮಾನಗಳಿಂದಲೂ ಅನೇಕ ರಾಜರು, ಆಡಳಿತಗಾರರಿಗೆ ಆಧ್ಯಾ ತ್ಮಿ ಕಮಾರ್ಗದರ್ಶನ ನೀಡಿದೆ.
ಒಡೆಯರು, ಪೇಶ್ವೆಗಳು, ಕೆಳದಿ ಮತ್ತು ತಿರುವಾಂಕೂರುದೊರೆಗಳು ಮಠದಿಂದ ಪ್ರಯೋಜನ ಪಡೆದಿದ್ದಾರೆ. ಮೈಸೂರು ರಾಜರುಗಳಾದ ಹೈದರ್ ಅಲಿ, ಟಿಪ್ಪು ಸುಲ್ತಾನ್ ಹಾಗೂ ಹೈದರಾಬಾದ್ನ ನಿಜಾಮರು ಮಠಕ್ಕೆ ಭಕ್ತಿ ಪ್ರ ದರ್ಶಿಸಿದ್ದಾರೆ, ಮಾರ್ಗದರ್ಶನ ಪಡೆದಿದ್ದಾರೆ.
ಮಠದಮಾರ್ಗದರ್ಶನದ ಶ್ರೀ ಮಂತ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ನನಗೆ ವೈಯಕ್ತಿಕವಾಗಿ ಶೃಂಗೇರಿ ಮಠವು ಸರ್ವಧರ್ಮ ಸಮನ್ವ ಯದ ಸಂಕೇತವಾಗಿದೆ. ಅತ್ಯಂ ತ ಪವಿತ್ರವಾದ ದೇವರ ಪೀಠದಿಂದ ನಾನು ನನ್ನ ಜೀವನದುದ್ದಕ್ಕೂ ಪಡೆದ ಆಶೀರ್ವಾದಗಳಿಗೆ ಸದಾ ಋಣಿಯಾಗಿರುತ್ತೇನೆ.
ಮಹಾನ್ ಸಂತ ಶಂಕರಾಚಾರ್ಯರ ಪ್ರತಿಮೆಯನ್ನು ನೋಡಲು ನಾನು ಶೀಘ್ರದಲ್ಲೇ ಕೇದಾರನಾಥಕ್ಕೆ ಭೇಟಿ ನೀಡಲು ಬಯಸುತ್ತೇನೆ. ಈ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರೂಪಿಸಿರುವುದು ತುಂಬಾ ಸಂತೋಷದ ವಿಷಯ.
ಕರ್ನಾಟಕದ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯಿಂದ ಕಪ್ಪು ಶಿಲೆಯನ್ನು ಪ್ರತಿಮೆಗಾಗಿ ಬಳಸಲಾಗಿದೆ ಎಂದು ನಾನು ಕೇಳಲ್ಪಟ್ಟೆ. ಶಂಕರಾಚಾರ್ಯರ ಪ್ರತಿಮೆ ರೂಪುಗೊಳ್ಳುವಲ್ಲಿ ಕರ್ನಾಟಕದ ಪಾತ್ರ ತುಂಬಾ ಇದೆ. ಎಲ್ಲವೂ ದೈವಿಕವಾಗಿ ಕೂಡಿಬಂದಿದೆ.
ಪರಮಾತ್ಮನ ಕೃಪೆ ನಿಮ್ಮ ಮೇಲಿರಲಿ ಎಂದು ಶೃಂಗೇರಿ ಶಾರದ ಪೀಠ, ಶಂಕರಾಚಾರ್ಯ ಅವರನ್ನು ಗೌಡರು ಸ್ಮರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ್ದಾರೆ.
I wrote to Prime Minister Shri @narendramodi on the new #Shankaracharya statue in #Kedarnath, and how the Sringeri Sharada Peetham in Karnataka, established by the great saint, has to me always been a refined symbol of interfaith harmony. pic.twitter.com/f9D3COj7yq
— H D Devegowda (@H_D_Devegowda) November 6, 2021