ಬಾಗಲಕೋಟೆ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಅಂತರ್ ಮಹಾವಿದ್ಯಾಲಯ ಕ್ರೀಡಾಕೂಟವನ್ನು ನವೆಂಬರ 11 ಮತ್ತು 12 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಕೂಟದ ಸಂಘಟನಾ ಅಧ್ಯಕ್ಷರು ಹಾಗೂ ತೋವಿವಿಯ ಡೀನ್ ಡಾ.ಬಾಲಾಜಿ ಕುಲಕರ್ಣಿ ತಿಳಿಸಿದ್ದಾರೆ.
ತೋವಿವಿಯ ಅಡಿಯಲ್ಲಿ ಬರುವ 9 ಮಹಾವಿದ್ಯಾಲಯಗಳಾದ, ಬಾಗಲಕೋಟೆ, ಮೈಸೂರು, ಬೆಂಗಳೂರು, ಕೋಲಾರ, ಬೀದರ್, ಕೊಪ್ಪಳ, ಶಿರಶಿ, ಅರಭಾವಿ ಮತ್ತು ದೇವಿಹೊಸೂರು, ಹಾವೇರಿ ಮಹಾವಿದ್ಯಾಲಯಗಳ ಒಟ್ಟು 350ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ವಿವಿಧ ಸ್ಪರ್ಧೆಗಳಾದ 100 ಮೀ, 200 ಮೀ, 400 ಮೀ, 800 ಮೀ ಓಟದ ಸ್ಪರ್ಧೆಗಳು, ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ, ಭರ್ಜಿ ಎಸೆತ, ತ್ರಿವಿಧ ಜಿಗಿತ, 4 x 100 ಮೀ ರಿಲೇ ಮತ್ತು 4 x 400 ಮೀ ರಿಲೇ ಸ್ಪರ್ಧೆಗಳನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಲಾಗಿದೆ.
ನವೆಂಬರ 11 ರಂದು ಬೆಳಿಗ್ಗೆ 10 ಗಂಟೆಗೆ ಶಾಸಕ ವೀರಣ್ಣ ಚರಂತಿಮಠ ಕ್ರೀಡಾಕೂಟಗಳಿಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಅಧ್ಯಕ್ಷತೆಯನ್ನು ಶಿಕ್ಷಣ ನಿರ್ದೇಶಕರು ಹಾಗೂ ತೋವಿವಿಯ ಪ್ರಭಾರ ಕುಲಪತಿ ಡಾ. ಎಮ್.ಎಸ್. ಕುಲಕರ್ಣಿ, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಟಿ.ಬಿ.ಅಳ್ಳೋಳ್ಳಿ, ಸಂಶೋಧನಾ ನಿರ್ದೇಶಕ ಡಾ.ಮಹೇಶ್ವರಪ್ಪ ಎಚ್.ಪಿ. ವಿಸ್ತರಣಾ ನಿರ್ದೇಶಕ ಡಾ.ಎಸ್.ಐ.ಅಥಣಿ, ಡೀನ್ ಸ್ನಾತಕೋತ್ತರ, ಡಾ. ರವಿಂದ್ರ ಮುಲಗೆ, ಡೀನ್ ಡಾ.ರಾಮಚಂದ್ರ ನಾಯಕ್ ಕೆ. ಗ್ರಂಥಪಾಲಕ ಡಾ.ತಮ್ಮಯ್ಯ, ಹಣಕಾಸು ನಿಯಂತ್ರಣಾಧಿಕಾರಿಗಳು ಡಿ.ಎಲ್.ಸುತಗಟ್ಟಿ, ವಿಜಯಭಾಸ್ಕರ್.ಎಮ್.ಭಜಂತ್ರಿ ಉಪಸ್ಥಿತರಿರುವರು.
ಕ್ರೀಡಾಕೂಟದ ಸಮಾರೋಪ ಸಮಾರಂಭ ನವೆಂಬರ 12 ರಂದು ಸಂಜೆ ಗಂಟೆಗೆ ನಡೆಯಲಿದ್ದು, ಸಮಾರಂಭದ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ, ಅಧ್ಯಕ್ಷತೆಯನ್ನು ಶಿಕ್ಷಣ ನಿರ್ದೇಶಕ ಡಾ.ಎಮ್.ಎಸ್. ಕುಲಕರ್ಣಿ, ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ.ರಾಮಚಂದ್ರ ನಾಯಕ್ ಕೆ., ಡಾ.ಬಿ.ಜಿ.ಪ್ರಕಾಶ್, ಡಾ.ಎನ್.ಕೆ.ಹೆಗಡೆ, ಡಾ.ಲಕ್ಷ್ಮೀನಾರಾಯಣ ಹೆಗಡೆ, ಡಾ.ಎಮ್.ಜಿ. ಕೆರುಟಗಿ, ಡಾ.ವಿಷ್ಣುವರ್ಧನ, ಡಾ.ಹೆಚ್.ಎಸ್.ಶಿವರಾಮು, ಡಾ.ವಾಯ್.ಎ.ನಂಜಾರೆಡ್ಡಿ, ಡಾ.ಎಸ್.ವಿ.ಪಾಟೀಲ, ಉಪಸ್ಥಿತರಿರುವರೆಂದು ಕುಲಕರ್ಣಿ ತಿಳಿಸಿದ್ದಾರೆ.