Please assign a menu to the primary menu location under menu

CrimeNEWSಕ್ರೀಡೆದೇಶ-ವಿದೇಶ

ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ನಿಶಾ ದಾಹಿಯಾ ಸೇರಿ ಇಬ್ಬರ ಹತ್ಯೆ : ಆಗಂತುಕರ ಕೃತ್ಯಕ್ಕೆ ಬೆಚ್ಚಿದ ಹರಿಯಾಣ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಇತ್ತೀಚೆಗಷ್ಟೆ ಪದಕ ಗೆದ್ದು ಹೆಸರು ಮಾಡಿದ್ದ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ನಿಶಾ ದಾಹಿಯಾ ಹಾಗೂ ಆಕೆಯ ಒಬ್ಬ ಸಹೋದರನನ್ನು ಆಗಂತುಕರು ಇಂದು (ನ.10) ಗುಂಡಿಟ್ಟು ಹತ್ಯೆಗೈದ ಘಟನೆ ಹರಿಯಾಣದಲ್ಲಿ ನಡೆದಿದೆ.

ಸೋನೆಪತ್​ನ ಹಲಾಲ್​ಪುರ್​ನಲ್ಲಿರುವ ಸುಶೀಲ್ ಕುಮಾರ್ ಅಕಾಡೆಮಿಯಲ್ಲೇ ಈ ಕೃತ್ಯ ನಡೆದಿದೆ. ಈ ಘಗಟನೆಯಲ್ಲಿ ನಿಶಾ ದಾಹಿಯ ತಾಯಿಯ ಮೇಲೂ ಅಪರಿಚಿತರು ಗುಂಡು ಹೊಡೆದಿದ್ದರು.

ಧನ್​ಪತಿ ಅವರು ಗಂಭೀರವಾಗಿ ಗಾಯಗೊಂಡಿದ್ಧಾರೆ. ಅವರನ್ನು ರೋಹ್ಟಕ್​ನಲ್ಲಿರುವ ಪಿಜಿಐ ಆಸ್ಪತ್ರೆಗೆ ದಾಖಲಿಲಾಗಿದೆ.

ಕಳೆದ ಶುಕ್ರವಾರವಷ್ಟೇ ನಿಶಾ ದಾಹಿಯಾ ಅವರು ಸರ್ಬಿಯಾ ದೇಶದ ಬೆಲ್​ಗ್ರೇಡ್​ನಲ್ಲಿ ನಡೆದ ಅಂಡರ್-23 ವರ್ಲ್ಡ್ ಚಾಂಪಿಯನ್​ಶಿಪ್​ನಲ್ಲಿ 65 ಕಿಲೋ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.

ಆ ಟೂರ್ನಿಯಲ್ಲಿ ಭಾರತದ ಇತರ ಕೆಲ ಕುಸ್ತಿಪಟುಗಳೂ ಮಿಂಚಿ ಪದಕ ಜಯಿಸಿದ್ದರು. ಪ್ರಧಾನಿ ಮೋದಿ ಅವರು ನಿಶಾ ಸೇರಿದಂತೆ ಎಲ್ಲಾ ಕುಸ್ತಿಪಟುಗಳನ್ನ ಅಭಿನಂದಿಸಿದ್ದರು.

ಆದರೆ ಇಂದು ಕಿಡಿಕೇಡಿಗ ಕೃತ್ಯಕ್ಕೆ ಒಬ್ಬ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ನಿಶಾ ದಾಹಿಯಾ ಅವರನ್ನು ದೇಶ ಕಳೆದುಕೊಂಡಿದೆ.

Leave a Reply

error: Content is protected !!
LATEST
ದೇಶದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ 2024ರ ಜನವರಿಯಿಂದ ಈವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು: ಅಪರ ಜಿಲ್ಲಾಧಿಕಾರಿ ಅಮರೇಶ್ KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!?