Please assign a menu to the primary menu location under menu

NEWSಆರೋಗ್ಯನಮ್ಮರಾಜ್ಯ

ಬಿಎಂಟಿಸಿ, ಪೊಲೀಸ್‌ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ನೀಡುವ ತರಬೇತಿ ಯಶಸ್ವಿ

ಫಸ್ಟ್ ರೆಸ್ಪೊಂಡರ್ಸ್ ಶಾರ್ಟ್ ಟರ್ಮ ಸ್ಕಿಲ್ ಡೆವಲಪ್ಮೆಂಟ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಕಸ್ಮಿಕವಾಗಿ ಸಂಭವಿಸುವ ಅವಘಡದ ವೇಳೆ ಪ್ರಥಮ ಚಿಕಿತ್ಸೆ ನೀಡುವ ಕುರಿತಂತೆ ಪೊಲೀಸ್‌, ಬಸ್‌ ಚಾಲನಾ ಸಿಬ್ಬಂದಿ, ಎನ್‌ಜಿಒಗಳು ಸೇರಿದಂತೆ ಸಾರ್ವಜನಿಕ ಸೇವೆ ನಿರತರಿಗೆ ಎರಡು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿಲಾಗಿತ್ತು.

ಈ First responder short term skill development ವಿಷಯ ಕುರಿತ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಮತ್ತು ಬುಧವಾರ ನಗರದ ಸ್ಕಿಲ್‌ಲ್ಯಾಬ್ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಆರೋಗ್ಯ ಸೌಧ ಕ್ಯಾಂಪಸ್, ಒಂದನೇ ಅಡ್ಡರಸ್ತೆ ಹುಣಸೆಮರ ಬಸ್ ನಿಲ್ದಾಣದ ಹತ್ತಿರ, ಮಾಗಡಿ ರಸ್ತೆಯಲ್ಲಿ ಆಯೋಜಿಸಲಾಗಿತ್ತು.

ಈ ತರಬೇತಿ ಕಾರ್ಯಕ್ರಮಕ್ಕೆ ಪೊಲೀಸ್‌ ಇಲಾಖೆ ಸಿಬ್ಬಂದಿ, ಬಿಎಂಟಿಸಿ, ಎಸ್‌ಆರ್‌ಎಸ್‌, ವಿವಿಧ ಎನ್‌ಜಿಒ ಸಂಸ್ಥೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ವೇಳೆ ತರಬೇತುದಾರರಾದ ಡಾ.ಪೂರ್ಣಿಮಾ. ಡಾ.ದಿವ್ಯ, ಡಾ. ಜೋಸ್ನ ಇತರರು ತರಬೇತಿ ನೀಡಿದರು.

ಹಾವು ಕಚ್ಚಿದರೆ, ವಾಹನ ಅಪಘಾತ, ಆಕಸ್ಮಿಕ ಬೆಂಕಿ ಸಂಭವಿಸಿದರೆ, ನೇಣು ಬಿಗಿದುಕೊಂಡ ವೇಳೆ, ನೀರಿನಲ್ಲಿ ಮುಳುಗುತ್ತಿದ್ದರೆ, ಪಾರ್ಶ್ವವಾಯು (ಲಕ್ವ) ಆದಾಗ, ಫಿಟ್ಸ್‌ ಬಂದಾಗ, ಉಸಿರಾಟ ನಿಂತಾಗ, ಹೃದಯಾಘಾತವಾದಾಗ, ಮೂಳೆ ಮುರಿತಕ್ಕೊಳಗಾದಾಗ, ವಿದ್ಯುತ್‌ ಶಾಕ್‌ ಹೊಡೆದಾಗ ಯಾವರೀತಿ ಪ್ರಥಮ ಚಿಕಿತ್ಸೆ ಕೊಡಬೇಕು ಎಂಬುದರ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ತರಬೇತಿ ಪಡೆದವರಿಗೆ ಕಾರ್ಯಕ್ರಮದಲ್ಲಿ ಸರ್ಟಿಫಿಕೆಟ್‌ ಕೊಡಲಾಯಿತು. ಜತೆಗೆ ಐಡಿ ಕಾರ್ಡ್‌ ಕೂಡ ನೀಡಲಾಗಿದ್ದು, ತಮ್ಮ ಮನೆಯ ಸುತ್ತಮುತ್ತ ಅಥವಾ ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಇಂಥ ಅವಘಡಗಳು ಸಂಭವಿಸಿದರೆ ಪ್ರಥಮ ಚಿಕಿತ್ಸೆ ಕೊಡುವುದಕ್ಕೆ ಅರ್ಹರಿದ್ದಾರೆ ಎಂದು ಪರಿಗಣಿಸಿ First responder ಐಡಿ ಕಾರ್ಡ್ಅನ್ನು ನೀಡಲಾಗಿದೆ.

ಈ ಮೂಲಕ ಅಸ್ತಿತ್ವದಲ್ಲಿರುವ ವೃತ್ತಿಪರರ ನಿರ್ದಿಷ್ಟ ಕೌಶಲ್ಯಗಳನ್ನು ಹೆಚ್ಚಿಸಲು ಕೌಶಲ್ಯ ಆಧಾರಿತ ತರಬೇತಿ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಯಾವುದೇ ಔಪಚಾರಿಕ ಅರ್ಹತೆ ಇಲ್ಲದ ಅಭ್ಯರ್ಥಿಗಳಿಗೆ ಕೌಶಲ್ಯಗಳನ್ನು ನೀಡಲು ವೇದಿಕೆಯನ್ನು ಒದಗಿದೆ.

ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಕೈಗೊಳ್ಳಲು ಅಭ್ಯರ್ಥಿಯು ಕೆಲವು ಪ್ರವೇಶ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ತರಬೇತಿ ಮತ್ತು ಮೌಲ್ಯಮಾಪನವು ಅಭ್ಯರ್ಥಿಯು ನಿರ್ದಿಷ್ಟ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಮಾಣೀಕರಿಸುತ್ತದೆ.

ತುರ್ತು ವೈದ್ಯಕೀಯ ಸೇವೆಗಳ ಪೂರೈಕೆದಾರರು ಆಗಮಿಸುವವರೆಗೆ ತುರ್ತುಸ್ಥಿತಿಯನ್ನು ಗುರುತಿಸಲು, ತುರ್ತು ವೈದ್ಯಕೀಯ ಸೇವೆಗಳ ವ್ಯವಸ್ಥೆಯನ್ನು (EMS) ಸಕ್ರಿಯಗೊಳಿಸಲು ಮತ್ತು ಕನಿಷ್ಠ ಸಾಧನಗಳೊಂದಿಗೆ ಜೀವ ಉಳಿಸುವ ಪ್ರಥಮ ಚಿಕಿತ್ಸೆ ಒದಗಿಸುವ ಘಟನೆಯ ದೃಶ್ಯದಲ್ಲಿ ಮೊದಲ ಪ್ರತಿಸ್ಪಂದಕ ಮೊದಲ ವ್ಯಕ್ತಿಯಾಗಿದ್ದಾರೆ ಇಲ್ಲಿ ತರಬೇತಿ ಪಡೆದವರು.

ಈ ತರಬೇತಿಯಲ್ಲಿ ಬಿಎಂಟಿಸಿಯ ಬನಶಂಕರಿ 20ನೇ ಘಟಕದ ನಿರ್ವಾಹಕಿ ಸುಮ, 4ನೇ ಘಟಕದ ನಿರ್ವಾಹಕ ಎಂ.ಕೆ. ಸುನೀಲ್‌, 26ನೇ ಘಟಕದ ನಿರ್ವಾಹಕಿ ಆರ್‌.ಪಾರ್ವತಿ, 35ನೇ ಘಟಕದ ಸುನೀಲ್‌ ಕುಮಾರ್‌, 33ನೇ ಘಟಕದ ಚಾಲಕ ಕೃಷ್ಣಮೂರ್ತಿ ಸೇರಿದಂತೆ ಕಳೆದ ಎರಡು ದಿನಗಳಲ್ಲಿ 100 ಮಂದಿಗೆ ತರಬೇತಿ ನೀಡಲಾಯಿತು.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್