NEWSಆರೋಗ್ಯನಮ್ಮಜಿಲ್ಲೆ

ಅಪಾಯದಲ್ಲಿರುವ ಮಕ್ಕಳಿಗೆ ತಪ್ಪದೇ ಪಿಸಿವಿ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾವೇರಿ:  ನ್ಯುಮೋಕಾಕಲ್ ನ್ಯುಮೋನಿಯಾ ಮತ್ತು  ಮೆನಿಂಜೈಟಿಸ್ ವಿರುದ್ಧ ರಕ್ಷಣೆ ನೀಡಲು ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ)ಯನ್ನು ಹೆಚ್ಚು ಅಪಾಯದಲ್ಲಿರುವ 6 ವಾರಗಳ ಶಿಶುಗಳಿಗೆ ತಪ್ಪದೇ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಲಸಿಕಾ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿದರು.

ಈ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚದಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಈಗ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ ಲಭ್ಯವಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ವ್ಯಾಕ್ಸಿನ್‍ಯಿಂದ ನ್ಯುಮೋನಿಯಾ ಖಾಯಿಲೆಯಿಂದ ರಕ್ಷಣೆ ಸಿಗುತ್ತದೆ. ಮಕ್ಕಳಿಗೆ ಹೆಚ್ಚು ಸುರಕ್ಷಿತವಾದ ಲಸಿಕೆಯಾಗಿದೆ ಹಾಗೂ ಯಾವುದೇ ಅಡ್ಡಿಪರಿಣಾಮ ಬೀರುವುದಿಲ್ಲ್ಲ. ತಾಯಂದಿರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ ಮಾತನಾಡಿ, ರಾಜ್ಯದಿಂದ ಹಾವೇರಿ ಜಿಲ್ಲೆಗೆ ಪ್ರಸ್ತುತ 2,250 ಡೋಸ್ ಪಿ.ಸಿ.ವಿ ಲಸಿಕೆ ಸರಬರಾಜಾಗಿದ್ದು, ಬ್ಯಾಡಗಿ ತಾಲೂಕಿಗೆ 200 ಡೋಸ್, ಹಾನಗಲ್-350 ಡೋಸ್, ಹಾವೇರಿ-400 ಡೋಸ್, ಹಿರೇಕೇರೂರು-300 ಡೋಸ್, ರಾಣೇಬೆನ್ನೂರು-500 ಡೋಸ್, ಸವಣೂರು-200 ಡೋಸ್  ಹಾಗೂ ಶಿಗ್ಗಾಂವ್ ತಾಲೂಕಿಗೆ-300 ಡೋಸ್ ಸರಬರಾಜು ಮಾಡಲಾಗಿದೆ. ಆರು ವಾರದ ಮಕ್ಕಳಿಂದ ಲಸಿಕೆ ಆರಂಭಿಸಲಾಗುವುದು. ಲಸಿಕೆ ನೀಡಿಕೆ ಕುರಿತು ವೈದ್ಯಾಧಿಕಾರಿಗಳಿಗೆ ಕ್ಷೇತ್ರ ಮಟ್ಟದ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದರು.

Pneumococcal Conjugate Vaccine (PCV) 35 Pneumococcal ಖಾಯಿಲೆಯಿಂದ ರಕ್ಷಿಸುತ್ತದೆ ಎಂದರೆ Streptococcus Pneumonia  ಎಂದು ಕರೆಯಲ್ಪಡುವ ಬ್ಯಾಕ್ಟಿರಿಯಾದಿಂದ ಉಂಟಾಗುವ ರೋಗಗಳ ಒಂದು ಗುಂಪು. ಇದು ಅತೀ ಹೆಚ್ಚು ಅಪಾಯದಲ್ಲಿರುವ ಆರುವಾರದ ಶಿಶುಗಳನ್ನು ರಕ್ಷಿಸುತ್ತದೆ. ಪಿ.ಸಿ.ವಿ ಲಸಿಕೆಯು ಒಂದು ವೈಲ್‍ನಲ್ಲಿ 5 ಡೋಸ್ ಇರುತ್ತದೆ. ಅಪೌಷ್ಟಿಕತೆಯಿಂದ ಬಳಲುವ ರೋಗ ನಿರೋಧಕ ಶಕ್ತಿ ಕಡಿಮೆಯುಳ್ಳ ಅಥವಾ ಅವಧಿ ಪೂರ್ವ ಜನನ ಹೊಂದಿರುವ ಯಾವುದೇ ಮಕ್ಕಳು ಇತರ ಸಾಧಾರಣ ಮಕ್ಕಳಂತೆ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಆರು ವಾರದ ಮಗು ಪಿ.ಸಿ.ವಿ, ಲಸಿಕೆಯನ್ನು ಪಡೆಯಬಹುದಾಗಿದೆ ಅಥವಾ ಒಪಿವಿ ಒಂದು ಮತ್ತು ಪೆಂಟಾ 2 ಮೊದಲ ಡೋಸ್‍ಗಾಗಿ ಬರುವ ಮಗು ಪಿ.ಸಿ.ವಿ ಒಂದು ಮತ್ತು ಇತರೆ ನಿಗಧಿತ ಲಸಿಕೆಗಳನ್ನು ಪಡೆಯಲು ಅರ್ಹವಾಗಿದೆ. ಪಿಸಿವಿ ಪಡೆದ ಮಗು ಪಿ.ಸಿ.ವಿ.  ಒಂದು ಪಡೆದ ಮಗು 14 ವಾರಗಳಲ್ಲಿ ಪಿ.ಸಿ.ವಿ ಎರಡನ್ನು ಪಡೆಯಲು ಅರ್ಹವಾಗಿರುತ್ತದೆ.

ಪಿ.ಸಿ.ವಿ 2 ಡೋಸ್ ಪಡೆದ ಮಗು 9 ತಿಂಗಳ ವಯಸ್ಸಿನಲ್ಲಿ ಪಿ.ಸಿ.ವಿ. ಟೂಸ್ಟರ್ ಡೋಸ್ ಪಡೆಯಬಹುದಾಗಿದೆ. ಪಿಸಿವಿ ಲಸಿಕೆಯು ಖಾಸಗಿ ವಲಯಗಳಲ್ಲಿ ದುಬಾರಿಯಾಗಿರುತ್ತದೆ. ಈಗ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಸಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪಿಸಿಎವಿ ಅನ್ನು ಮೂರು ಡೋಸ್‍ಗಳಲ್ಲಿ (2 ಪ್ರಾಥಮಿಕ ಡೋಸ್‍ಗಳು ಮತ್ತು 1 ಬೂಸ್ಟರ್ ಡೋಸ್ ಕೊಡಲಾಗುವುದು. 6ನೇ ವಾರದಲ್ಲಿ, 14ನೇ ವಾರದಲ್ಲಿ ಮತ್ತು 9ನೇ ತಿಂಗಳಲ್ಲಿ) 3 ಡೋಸ್  ಕೊಡಲಾಗುವುದು. ಒಂದು ವರ್ಷದೊಳಗಿನ ಮಕ್ಕಳಿಗೆ ಪಿಸಿವಿ ಡೋಸ್ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಆರ್.ಎನ್.ಹಾವನೂರ, ಡಾ.ಜಗದೀಶ ಪಾಟೀಲ ಉಪಸ್ಥಿತರಿದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ