ಬೆಂಗಳೂರು: ಮಕ್ಕಳನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ ಪೋಷಕರ ಪೂರ್ವಾಪರ ವಿಚಾರಣೆ ನಡೆಸುವ ನಿಟ್ಟಿ ನಲ್ಲಿ ನ್ಯಾ ಯಾಲಯ ನೀಡಿರುವ ನಿರ್ದೇಶನದಂತೆ ಕರಡು ನಿಯಮಗಳನ್ನು ಸಿದ್ಧ ಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಕುರಿತಂತೆ ‘ಲೆಟ್ಸ್‌ಕಿಟ್’ ಪ್ರ ತಿಷ್ಠಾನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವ ದ ವಿಭಾಗೀಯ ನ್ಯಾ ಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲೆ ಎಚ್.ವೀಣಾ, ಮಕ್ಕ ಳನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 2021ರ ಆಗಸ್ಟ್ 19ರಂದು ಹಲವು ನಿರ್ದೇಶನಗಳನ್ನು ನೀಡಿತ್ತು. ಅದರಲ್ಲಿ ಬಾಲ ನ್ಯಾಯ ಕಾಯ್ದೆಯ ಕಲಂ 11ರ ಅಡಿ ನಿಯಮಗಳನ್ನು ರೂಪಿಸುವಂತೆ ಆದೇಶಿಸಲಾಗಿತ್ತು.
ಈ ಆದೇಶದನ್ವಯ ಕರಡು ನಿಯಮಗಳನ್ನು ಸಿದ್ಧಪಡಿಸಲಾಗಿದ್ದು ಅವುಗಳನ್ನು ಅಂತಿಮಗೊಳಿಸಿ ಸಚಿವ ಸಂಪುಟದ ಅನುಮೋದನೆ ಪಡೆಯಲಾಗುವುದು ಎಂದರು.
ಇದಕ್ಕೆ ಪ್ರತಿಷ್ಠಾನದ ಪರ ವಕೀಲ ರಮೇಶ್ ಪುತ್ತಿಗೆ, ಕರಡು ನಿಯಮಗಳನ್ನು ಅರ್ಜಿದಾರರಿಗೆ ಮತ್ತು ಬಾಲ ನ್ಯಾಯಮಂಡಳಿಗಳಿಗೆ ನೀಡಿದರೆ ಏನಾದರೂ ತಿದ್ದು ಪಡಿಗಳಿದ್ದರೆ ಸೂಚಿಸಬಹುದು ಎಂದರು.
ಇದನ್ನು ದಾಖಲಿಸಿಕೊಂಡ ನ್ಯಾ ಯಪೀಠ, ‘ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದೆಯಲ್ಲಾ ಅಲ್ಲಿ ಒಪ್ಪಿಗೆ ಪಡೆದುಕೊಳ್ಳಿ ಎಂದು ಸೂಚಿಸಿತು.
ಇದೇ ವೇಳೆ ಸರ್ಕಾರಿ ವಕೀಲೆ ವೀಣಾ ಅವರು, ಮೈಸೂರಿನ ಜೀವನ್ಜ್ಯೋ ತಿ ಟ್ರಸ್ಟ್ನಲ್ಲಿ 12 ದಿನದ ಹೆಣ್ಣು ಶಿಶುವನ್ನು ಪೋಷಕರು ಬಿಟ್ಟು ಹೋದ ಪ್ರ ಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯಾಲಯದ ಆದೇಶದಂತೆ ಮುಚ್ಚಿ ದ ಲಕೋಟೆಯಲ್ಲಿ ವರದಿ ಸಲ್ಲಿ ಸಲಾಗಿದೆ ಎಂದು ನ್ಯಾ ಯಪೀಠಕ್ಕೆ ತಿಳಿಸಿದರು.