Please assign a menu to the primary menu location under menu

NEWSದೇಶ-ವಿದೇಶನಮ್ಮರಾಜ್ಯ

37ದಿನ ಕಳೆದರೂ ನಿಲ್ಲದ MSRTC ನೌಕರರ ಮುಷ್ಕರ: ಧರಣಿ ನಿರತರ ವಿರುದ್ಧ ಮೆಸ್ಮಾ ಜಾರಿ ಎಚ್ಚರಿಕೆ ಕೊಟ್ಟ ಸಚಿವ ಅನಿಲ್ ಪರಬ್

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಕಳೆದ 37ದಿನಗಳಿಂದ ಸಾರಿಗೆ ನಿಗಮವನ್ನು ಸರ್ಕಾರದೊಂದಿಗೆ ವಿಲೀನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಈಗ ಮುಷ್ಕರ ನಿರತ ಕಾರ್ಮಿಕರಿಗೆ ಮಹಾರಾಷ್ಟ್ರ ಸರ್ಕಾರವು ಕೊನೆಯ ಅಸ್ತ್ರವಾಗಿ ಅಗತ್ಯಬಿದ್ದರೆ ಮಹಾರಾಷ್ಟ್ರ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (ಮೆಸ್ಮಾ) ಜಾರಿ ಮಾಡಲಾಗುವುದು ಎಂದು ಸಾರಿಗೆ ಸಚಿವ ಮತ್ತು ಎಂಎಸ್‌ಆರ್‌ಟಿಸಿ ಅಧ್ಯಕ್ಷ ಅನಿಲ್ ಪರಬ್ ಎಚ್ಚರಿಕೆ ನೀಡಿದ್ದಾರೆ.

ಮುಷ್ಕರದಿಂದಾಗಿ ಕಳೆದ ಒಂದು ತಿಂಗಳಲ್ಲಿ ಸಾರಿಗೆ ಸಂಸ್ಥೆಯು 450 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆದರೂ ನೌಕರರು ಮುಷ್ಕರ ನಿಲ್ಲಿಸಿ ಸೇವೆಗೆ ಮರಳುತ್ತಿಲ್ಲ. ಅವರಿಗೆ ವೇತನವನ್ನು ಹೆಚ್ಚಳಮಾಡಿದ್ದರೂ ಈ ರೀತಿ ಪಟ್ಟು ಹಿಡಿದು ಕುಳಿತಿರುವುದು ಸರಿಯಲ್ಲ. ಹೀಗಾಗಿ ನಾವು ಅಂತಿಮ ಅಸ್ತ್ರ ಮೆಸ್ಮಾ ಜಾರಿ ಮಾಡುವುದು ಅನಿರ್ವಾಯವಾಗಬಹುದು ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.

ನಾವು ನಿಗಮವನ್ನು ವಿಲೀನ ಮಾಡಲು ಸಾಧ್ಯವಿಲ್ಲ ಎಂಬ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಜತೆಗೆ ನೌಕರರ ವೇತನವನ್ನು ಹೆಚ್ಚಿಸಿದ್ದೇವೆ ಅಲ್ಲದೆ ಸಮಸ್ಯೆಗಳ ಪರಿಹಾರಕ್ಕಾಗಿ ಈಗಾಗಲೇ ಸಮಿತಿ ರಚಿಸಿದ್ದೇವೆ. ಆದರೆ ನೌಕರರು ವಿಲೀನ ಆಗಲೇಬೇಕು ಎಂದು ಹೋರಾಟ ಮುಂದುವರಿಸಿದ್ದಾರೆ. ಅದನ್ನು ಬಿಟ್ಟು ಮತ್ತೆ ಕೆಲಸ ಮರಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಸರ್ಕಾರವಾಗಿ ನಾವು ಕೇವಲ ನೌಕರರ ಬಗ್ಗೆಯೇ ಯೋಚಿಸಲು ಸಾಧ್ಯವಿಲ್ಲ. ಆದರೆ ಬಸ್‌ಗಳು ಕಾರ್ಯನಿರ್ವಹಿಸದ ಕಾರಣ ಜನಸಾಮಾನ್ಯರ ಸಂಕಷ್ಟದ ಬಗ್ಗೆಯೂ ಯೋಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಪ್ರಯತ್ನವಾಗಿ ಮೆಸ್ಮಾ ಜಾರಿಗೊಳಿಸುವುದೊಂದೆ ದಾರಿ. ಈ ಮುನ್ನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಚರ್ಚೆ ಮಾಡಿದ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈಗ ಮಾಡಲಾಗಿರುವ ವೇತನ ಹೆಚ್ಚಳವು ತಾತ್ಕಾಲಿಕವಾಗಿದೆ ಎಂಬ ವದಂತಿಗಳು ಹಬ್ಬಿವೆ. ಆದರೆ ಯಾವುದೇ ಉದ್ಯೋಗಿ ತಮ್ಮ ಅಕ್ಟೋಬರ್ 2021 ಮತ್ತು ಡಿಸೆಂಬರ್ 2021 ರ ಸಂಬಳದ ಸ್ಲಿಪ್‌ಗಳನ್ನು ಪರಿಶೀಲಿಸಿದರೆ, ಅದು ಹಾಗಲ್ಲ ಎಂದು ಸಾಬೀತುಪಡಿಸುತ್ತದೆ ಮತ್ತು ಹೆಚ್ಚಳವಾಗಿರುವುದನ್ನು ವಾಪಸ್‌ ಪಡೆಯಲು ಸಾಧ್ಯವಿಲ್ಲ ಎಂದು ಪರಬ್ ಹೇಳಿದ್ದಾರೆ.

ನಿಗಮದ 92,266 ಉದ್ಯೋಗಿಗಳಲ್ಲಿ 18,828 ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ ಮತ್ತು 73,438 ಇನ್ನೂ ಕರ್ತವ್ಯಕ್ಕೆ ಮರಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ, 192 ನೌಕರರನ್ನು ಅಮಾನತುಗೊಳಿಸಲಾಗಿದ್ದು, ಒಟ್ಟು ಅಮಾನತುಗೊಂಡವರ ಸಂಖ್ಯೆ 9,384ಕ್ಕೆ ಮತ್ತು 61 ನೌಕರರನ್ನು ವಜಾಗೊಳಿಸಲಾಗಿದ್ದು, ಒಟ್ಟು ವಜಾಗೊಂಡವರ ಸಂಖ್ಯೆ 1,980 ತಲುಪಿದೆ.

Leave a Reply

error: Content is protected !!
LATEST
KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್ ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ