Please assign a menu to the primary menu location under menu

NEWSನಮ್ಮರಾಜ್ಯಶಿಕ್ಷಣ-

ಬೆಂಗಳೂರು ವಿವಿಯಲ್ಲಿ ಅಧಿಕಾರಕ್ಕಾಗಿ ಹೈಡ್ರಾಮಾ : ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಲಸಚಿವೆ ಜ್ಯೋತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಸಚಿವರ ಕುರ್ಚಿಗಾಗಿ ಕುಸ್ತಿ ಶುರುವಾಗಿದೆ. ಅಧಿಕಾರ ಸ್ವೀಕಾರಕ್ಕಾಗಿ ಹೈಡ್ರಾಮಾ ನಡೆಯುತ್ತಿದೆ. ಹಾಲಿ ಕುಲಸಚಿವರ ನಿರ್ಗಮನಕ್ಕೂ ಮುನ್ನ ಪ್ರೊ.ಕೊಟ್ರೇಶ್ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು ಕುಲಸಚಿವ ಸ್ಥಾನಕ್ಕೆ ಪ್ರೊ.ಕೊಟ್ರೇಶ್ ನೇಮಕಗೊಂಡಿದ್ದಾರೆ. ನ.26ರಂದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿತ್ತು. ಆದರೆ ಹಾಲಿ ಕುಲಸಚಿವರಾದ ಕೆ.ಜ್ಯೋತಿ ಬೇರೆ ಯಾವುದೇ ಇಲಾಖೆಗೆ ಇನ್ನೂ ವರ್ಗಾವಣೆ ಆಗಿಲ್ಲ.

ಹೀಗಾಗಿ ಈಗಲೂ ಹಾಲಿ ಕುಲಸಚಿವೆ ಕೆ.ಜ್ಯೋತಿ ಅವರ ಅಧಿಕಾರವಿದೆ. ಇದು ತಿಳಿದಿದ್ದರೂ ಹಾಲಿ ಕುಲಸಚಿವರು ಇಲ್ಲದ ಸಮಯದಲ್ಲಿ ಪ್ರೊ.ಕೊಟ್ರೇಶ್ ಕಡತಗಳಿಗೆ ಸಹಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ನ.2ರಂದು ಕುಲಸಚಿವರ ಕಚೇರಿಗೆ ಬಂದಿದ್ದ ಪ್ರೊ.ಕೊಟ್ರೇಶ್, ಅನುಮತಿ ಇಲ್ಲದೆ ಅನಧಿಕೃತವಾಗಿ ಕಡತ, ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಐಎಎಸ್ ಅಧಿಕಾರಿ, ಹಾಲಿ ಕುಲಸಚಿವೆ ಕೆ.ಜ್ಯೋತಿ ದೂರು ನೀಡಿದ್ದಾರೆ.

ಈ ಮೂಲಕ ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ನೂತನ ಕುಲಸಚಿವ ಪ್ರೊ‌.ಕೊಟ್ರೇಶ್ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.

ಸದ್ಯ ಕುಲಪತಿ ಬಳಿ ರಿಪೋರ್ಟ್ ಮಾಡಿಕೊಂಡು ಡಿ.1ರಿಂದ ಪ್ರೊ.ಕೊಟ್ರೇಶ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆ.ಜ್ಯೋತಿ‌ ಅಧಿಕಾರ ಹಸ್ತಾಂತರಕ್ಕೂ ಮೊದಲೇ ಕುಲಸಚಿವ ಸ್ಥಾನದಲ್ಲಿ ಪ್ರೊ.ಕೊಟ್ರೇಶ್ ಆಸೀನರಾಗಿದ್ದಾರೆ. ಅಲ್ಲದೆ ನಿನ್ನೆ ವಿವಿ ಸಿಬ್ಬಂದಿಯ ಜೊತೆಗೆ ದಿಢೀರ್ ಸಭೆ ನಡೆಸಿದ್ದಾರೆ. ಈ ವಿಚಾರವಾಗಿಯೂ ಕೆ.ಜ್ಯೋತಿ ದೂರು ನೀಡಿದ್ದಾರೆ.

ಪ್ರೊ.ಕೊಟ್ರೇಶ್ ಈ ಹಿಂದೆ ಸಂಸ್ಕೃತ ವಿವಿ ಕುಲಸಚಿವರಾಗಿದ್ದರು. ಈಗ ಮತ್ತೊಂದು ಬೆಳವಣಿಗೆಯೆಂಬಂತೆ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರು ಕೂಡ. ಇವರ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ದೂರು ನೀಡಿದ್ದಾರೆ.

ಕುಲಸಚಿವರ ಸ್ಥಾನಕ್ಕೆ ಕಾನೂನು ಬಾಹಿರವಾಗಿ ನೇಮಕವಾಗಿದೆ. ಕೂಡಲೇ ಕುಲಸಚಿವ ಸ್ಥಾನದಿಂದ ಕೈಬಿಡುವಂತೆ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಗೋವಿಂದರಾಜು ಸಿಎಂ ಬೊಮ್ಮಾಯಿಗೆ ದೂರು ನೀಡಿದ್ದಾರೆ.

ಈ ಮೂಲಕ ಒಂದು ಮೂಳೆ ಬಿಸಾಕಿ ಎರಡು ….. ಬಿಟ್ಟಂತೆ ವಿಶ್ವವಿದ್ಯಾಲಯದಲ್ಲಿ ಇರುವ ಒಂದು ಸ್ಥಾನಕ್ಕೆ ಇಬ್ಬರನ್ನು ಹಾಕಿ ಜಗಳಕ್ಕೆ ದಾರಿಯಾಗುವಂತೆ ಮಾಡಲಾಗುತ್ತಿದೆ ಎಂಬ ಆರೋಪ ಈಗ ವಿದ್ಯಾರ್ಥಿಗಳ ಮಧ್ಯೆ ಕೇಳಿ ಬರುತ್ತಿದೆ.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್