Please assign a menu to the primary menu location under menu

CrimeNEWSನಮ್ಮಜಿಲ್ಲೆ

ಹನಿಟ್ರ್ಯಾಪ್ ಆರೋಪ- ಕನ್ನಡ ಚಿತ್ರರಂಗದ ಉದಯೋನ್ಮುಖ ನಟನ ಬಂಧನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಉದ್ಯಮಿಯೊಬ್ಬರ ಪೀಡಿಸುತ್ತಿದ್ದ ಆರೋಪದ ಮೇರೆಗೆ ಕನ್ನಡ ಚಿತ್ರರಂಗದ ಉದಯೋನ್ಮುಖ ನಟನನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಜೆಪಿ ನಗರ ನಿವಾಸಿ ಯುವರಾಜ್ ಬಂಧಿತ ಆರೋಪಿ. ಈತನನ್ನು ಹನಿಟ್ರ್ಯಾಪ್ ಆರೋಪದಡಿ ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಉದ್ಯಮಿ ಇತ್ತೀಚೆಗೆ ಪರಿಚಯ ಆಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಸಂದೇಶ ಕಳುಹಿಸಿದ್ದರು. ನಂತರ ಉದ್ಯಮಿಗೆ ಯುವರಾಜ್ ಭೇಟಿಯಾಗಿ ನಾವು ಪೊಲೀಸರು ಎಂದು ಹೇಳಿ ಹೆದರಿಸಿದ್ದರು.

ಅಲ್ಲದೆ ಯುವತಿಯರ ಜೊತೆಗೆ ಅಶ್ಲೀಲ ಸಂದೇಶ ಕುರಿತು ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಮುಂದುವರೆಸದಿರಲು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.

ಉದ್ಯಮಿಯಿಂದ ಮೊದಲು 50 ಸಾವಿರ ರೂ. ಪಡೆದ ಆರೋಪಿ, ನಂತರ ಬ್ಯಾಂಕ್‍ನಲ್ಲಿ 3 ಲಕ್ಷ ರೂ. ಡ್ರಾ ಮಾಡಿಸಿಕೊಂಡಿದ್ದ. ಹಂತಹಂತವಾಗಿ ಆರೋಪಿ ಯುವರಾಜ್‍ ಒಟ್ಟು 14 ಲಕ್ಷ ರೂ.ಗೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾನೆ.

ಇದಿಷ್ಟೇ ಅಲ್ಲದೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸತ್ತ ಸಂತ್ರಸ್ತ ಉದ್ಯಮಿ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದ. ದೂರಿನನ್ವಯ ಆರೋಪಿ ಯುವರಾಜ್‍ನನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ- ಇಂದಿನಿಂದಲೇ ಜಾರಿ- ಎಂಡಿ ಆದೇಶ KSRTC: ಶೇ.15ರಷ್ಟು ಬಸ್‌ ಟಿಕೆಟ್‌ ದರ ಹೆಚ್ಚಳ- ಜ.5ರಿಂದ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು ದಲೈವಾಲ ಜೀವಕ್ಕೆ ಅಪಾಯವಾದರೆ ದೇಶದಲ್ಲಿ ರೈತದಂಗೆ ಆಗಲಿದೆ: ಕುರುಬೂರು ಶಾಂತಕುಮಾರ್‌ ಎಚ್ಚರಿಕೆ KSRTCಗೆ ರಾಷ್ಟ್ರದ ಮಟ್ಟದ ಒಂಬತ್ತು ಪ್ರಶಸ್ತಿಗಳು- 3ರಾಜ್ಯಗಳಲ್ಲಿ ಪ್ರದಾನ KSRTC 4 ನಿಗಮಗಳ ನಷ್ಟ ಪರಿಹಾರಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KSRTC: ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಜ.6ರಂದು ಸಿಎಂ ಚಾಲನೆ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ 32 ಪತ್ರಕರ್ತರಿಗೆ ಪ್ರಶಸ್ತಿ ಕ್ಯಾನ್ಸರ್ ಗೆದ್ದ ಶಿವಣ್ಣ: ಡಬಲ್‌ ಪವರ್‌ನೊಂದಿಗೆ ಬರುತ್ತೇನೆ ಅಂದ ನಟ  ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಿಯಕರನಿಗೆ ಇರಿದ ಪ್ರೇಯಸಿ -ಅಷ್ಟಕ್ಕೂ ಆಗಿದ್ದೇನು? ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು