ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳ ನೌಕರರು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವ ಚಳವಳಿ ಆರಂಬಿಸಿದ್ದಾರೆ. ಅಲ್ಲದೆ ಸಾರಿಗೆ ನೌಕರರ ಪರವಾಗಿ ಇರಬೇಕಾದ ಸಂಘಟನೆಗಳು ನೌಕರರಿಗೆ ಸಮಸ್ಯೆ ಹೆಚ್ಚಿಸುವ ಕೆಲಸದಲ್ಲಿ ತೊಡಗಿವೆ.
ಹೀಗಾಗಿ ಈ ಸಂಘಟನೆಗಳು ಇಟ್ಟಿರುವ ಬೇಡಿಕೆಗಳನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ವಿಷಯವಾಗಿ ಪ್ರತಿಯೊಬ್ಬ ನೌಕರನೂ (ನಾನು) ತಿಳಿಸುವುದೇನೆಂದರೆ ಪ್ರಸ್ತುತ ನಮ್ಮ ಸಾರಿಗೆ ಸಂಸ್ಥೆಯಲ್ಲಿ 6-7 ಕಾರ್ಮಿಕ ಸಂಘಟನೆಗಳು ಇದ್ದಾವೆ. ಆದರೆ ಯಾವುದೇ ಸಂಘಟನೆಗಳ ಮೂಲ ಉದ್ದೇಶ ನೌಕರರ ಬೇಕು-ಬೇಡಾಗಳನ್ನು ಅರಿತು ನೌಕರರ ಶ್ರೇಯೋಭಿವೃದ್ದಿಗೆ ಶ್ರಮಿಸುವುದಾಗಿದೆ.
ಆದರೆ ಮೊನ್ನೆ 08/08/2022 ರಂದು ನಡೆದ ಕಾರ್ಮಿಕ ಸಂಘಟನೆಯ ಜಂಟಿ ಕ್ರಿಯಾ ಸಮಿತಿಯ ವರದಿಯಲ್ಲಿ ಕೂಟ ಸಂಘಟನೆಯ ಬೇಡಿಕೆಗಳಿಗೆ ಒಂದು ಅಂಶಕ್ಕೂ ಪ್ರಾಮುಖ್ಯತೆ ನೀಡಿರುವುದಿಲ್ಲ. ಸಾರಿಗೆ ಸಂಸ್ಥೆಯ ಬಹುಪಾಲು 90%ಪ್ರತಿಶತ ಸಿಬ್ಬಂದಿಗಳು ಕೂಟ ಸಂಘಟನೆಯ ಬೇಡಿಕೆಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ.
ಜಂಟಿ ಕ್ರೀಯಾ ಸಮಿತಿಯ ಉದ್ದೇಶಗಳು:
▪️ವೇತನ ತಾರತಮ್ಯಕ್ಕೆ ಶಾಶ್ವತ ಪರಿಹಾರವನ್ನು ನೀಡುವ ಮನೋಭಾವವನ್ನು ಹೊಂದಿರುವುದಿಲ್ಲ. ▪️ಸಾರಿಗೆ ನೌಕರರ ಯಾವ ಸಮಸ್ಯೆಗಳು ಬಗೆಹರಿಯಬಾರದು. ▪️ಪ್ರತಿ ನಾಲ್ಕು ವರ್ಷಕೊಮ್ಮೆ ಮುಷ್ಕರ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ. ▪️ಮುಖ್ಯವಾಗಿ ಎಲ್ಲ ಸಂಘಟನೆಗಳು ತಮ್ಮ ಅಸ್ತಿತ್ವಕ್ಕಾಗಿ ಕೇವಲ ನೌಕರರ ಕಣ್ಣೀರು ಒರೆಸುವವರಾಗಿರುತ್ತಾರೆ. ▪️ಯಾವುದೇ ಸರ್ಕಾರವಿದ್ದರೂ ಮುಷ್ಕರದ ಮುಜುಗರವನ್ನುಂಟುಮಾಡಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವವರಾಗಿರುತ್ತಾರೆ.
ಕೂಟದ ಉದ್ದೇಶ:
▪️ನೌಕರರ ಎಲ್ಲ ರೀತಿಯ ಸಮಸ್ಯೆಗಳ ಪರಿಹಾರದ ಕೈಪಿಡಿಯಾಗಿ ಬೇಡಿಕೆಗಳಾಗಿದ್ದಾವೆ. ▪️ಸಾರ್ವಜನಿಕರಿಗೆ ಭವಿಷ್ಯದಲ್ಲಿ ತೊಂದರೆ ಕೊಡದೇ ವೇತನದ ವಿಷಯವಾಗಿ ಶಾಶ್ವತವಾದ ಮಾರ್ಗವನ್ನು ಹೊಂದುವ ಬೇಡಿಕೆಯನ್ನು ಹೊಂದಿರುತ್ತಾರೆ. ▪️ಕೂಟದ ಬೇಡಿಕೆಗಳನ್ನು ಇಡೇರಿಸಿದರೆ ಆಳುವ ಸರ್ಕಾರ ಯಾವುದೇ ಇದ್ದರೂ ಅವರಿಗೆ ಎಲ್ಲ ನೌಕರರು ಬೆಂಬಲಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.
ಆದ್ದರಿಂದ ಜಂಟಿ ಕ್ರಿಯಾ ಸಮಿತಿಯವರ ಮನವಿಯನ್ನು ತಿರಸ್ಕರಿಸಿ ಈ ಕೂಡಲೇ ಸಾರಿಗೆ ನೌಕರರ ಸಂಘಟನೆಗಳ ಚುನಾವಣೆ ಘೋಷಿಸಿ ಗೆದ್ದ ಸಂಘಟನೆಯನ್ನು “RECOGNISED UNION ” ಎಂದು ಘೋಷಿಸಿ ಅವರ ಬೇಡಿಕೆಯನ್ನು ಇಡೇರಿಸಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ಹೀಗೆ ಸಾರಿಗೆ ಎಂಡಿಗಳೀಗೆ ಪತ್ರ ಬರೆಯುವ ಚಳವಳಿಯನ್ನು ಆರಂಬಿಸುತ್ತಿದ್ದಾರೆ. ಇದರಿಂದ ನೌಕರರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳಾಗುವ ಬದಲು ಅನುಕೂಲವಾಗಲಿದೆ ಎಂದು ನೌಕರರು ಆಶಾ ಭಾವನೆ ಹೊಂದಿದ್ದಾರೆ.