ಪಿರಿಯಾಪಟ್ಟಣ: ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜ ಶೈಕ್ಷಣಿಕ ಪ್ರಗತಿಯ ಮೂಲಕ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಕರ್ನಾಟಕ ರಾಜ್ಯ ಉಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ. ಗಿರೀಶ್ ಉಪ್ಪಾರ್ ಕರೆ ನೀಡಿದರು..
ಪಟ್ಟಣದ ಉಪ್ಪಾರಬೀದಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಭಗೀರಥ ಮಹರ್ಷಿಗಳ ವಂಶಜರಾದ ಉಪ್ಪಾರ ಸಮಾಜದವರು, ಶ್ರಮ ಸಂಸ್ಕೃತಿ, ನಿಷ್ಠೆ ಮತ್ತು ಪ್ರಾಮಾಣಿಕತೆ, ಭಕ್ತಿ ಮತ್ತು ನಿಷ್ಠುರತೆಗೆ ಪ್ರಸಿದ್ಧರಾಗಿದ್ದಾರೆ. ಇಂತಹ ಸಮುದಾಯವು ಮುಖ್ಯ ವಾಹಿನಿಗೆ ಬರಲು ಶಿಕ್ಷಣ ಹಾಗೂ ರಾಜಕೀಯ ಪ್ರಾತಿನಿತ್ಯದ ಅಗತ್ಯವಿದೆ ಆದ್ದರಿಂದ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಇಷ್ಟೇ ಅಲ್ಲದೆ ಪ್ರತಿವರ್ಷ ಕನಿಷ್ಠ ಐವರು ಯುಪಿಎಸ್ಸಿ ಹಾಗೂ ಹತ್ತಾರು ಪ್ರತಿಭೆಗಳು ಕೆಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವಂತಹ ಸ್ಥಿತಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಮುದಾಯದ ಹಿರಿಯರು ಹಾಗೂ ಪ್ರಜ್ಞಾವಂತರು ಚಿಂತಿಸಬೇಕಿದೆ ಎಂದು ಹೇಳಿದರು.
ಇನ್ನು ರಾಜ್ಯದಾದ್ಯಂತ ಉಪ್ಪಾರ ಸಮುದಾಯವು ಗಣನೀಯ ಸಂಖ್ಯೆಯಲ್ಲಿದ್ದು, ಸೋದರ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ರಾಜಕೀಯ ಶಕ್ತಿ ಪಡೆಯಬೇಕು. ಸಮಾಜ ಬೆಳೆಯಬೇಕಾದರೆ ಯುವ ಸಮುದಾಯಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸಾಧಕ ಮಕ್ಕಳನ್ನು ಕರೆದು ಗೌರವಿಸುವ ಮೂಲಕ ಅವರ ಜವಾಬ್ದಾರಿ ನೆನಪಿಸುವ ಕೆಲಸವನ್ನು ಸಂಘ-ಸಂಸ್ಥೆಗಳು ನಿರ್ಮಾಣವಾಗಬೇಕು ಎಂದರು.
ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಜಯಶಂಕರ್, ಶ್ರೀ ಭಗೀರಥ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ಉಪಾಧ್ಯಕ್ಷ ಶಿವು, ತಾಲೂಕು ನೌಕರರ ಸಂಘದ ಅಧ್ಯಕ್ಷ ಪಿ.ಎಲ್.ರಾಮಣ್ಣ, ಪಿಡಿಒ ಪಿ.ಆರ್.ಮಂಜುನಾಥ್.
ಮುಖಂಡರಾದ ಪಿ.ಎನ್.ದೇವೇಗೌಡ, ಅಡಿಕೆ ಸುರೇಶ್, ಎಲೆಮಂಜು, ನಾಗಣ್ಣ, ಜಗಪಾಲ್, ಬಸವರಾಜು, ಲಕ್ಷ್ಮಣ್, ರವಿಕುಮಾರ್ ಪಾಟೀಲ್, ರಾಜಣ್ಣ, ಹಿಟ್ನೆಹೆಬ್ಬಾಗಿಲು ನಟರಾಜು, ನಿಂಗರಾಜು, ವೇಣುಗೋಪಾಲ್, ಪಿ.ಆರ್.ಮಾರುತಿ, ಮಣಿಕುಮಾರ್, ರಮೇಶ್, ಹರದೂರು ಗಣೇಶ್, ಕೃಷ್ಣೇಗೌಡ, ವಸಂತ್, ಮೈಲಾರಿ, , ಬೆಕ್ಕರೆ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.