Please assign a menu to the primary menu location under menu

CrimeNEWSನಮ್ಮಜಿಲ್ಲೆ

ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂಬ ಸಂಶಯ – ಕೊಡಲಿಯಿಂದ ಕಡಿದು ಪೊಲೀಸರಿಗೆ ಶರಣಾದ ಪತಿ

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಹೆಂಡತಿ ಪರಪುರಷರ ಜತೆ ಇರುತ್ತಾಳೆ ಎಂದು ಸದಾ ಸಂಶಯ ಪಡುತ್ತಿದ್ದ ದುರುಳನೊಬ್ಬ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಬಳಿಕ ತನ್ನ ಮಕ್ಕಳೊಂದಿಗೆ ಪೊಲೀಸ್‌ ಠಾಣೆಗೆ ಹೋಗಿದ್ದಾನೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಟ್ಟಪ್ಪ ಎಂಬಾತ ತನ್ನ ಪತ್ನಿ ರೇಣುಕಾ (26)ಳನ್ನು ಕೊಡಲಿಯಿಂದ ಕಡಿದ ಆರೋಪಿ.

ಬೆಟ್ಟಪ್ಪ ಮತ್ತು ರೇಣುಕಾಳ ಮದುವೆ ಏಳು ವರ್ಷದ ಹಿಂದೆ ಆಗಿತ್ತು. ಆದರೆ ಬೆಟ್ಟಪ್ಪ ಆರಂಭದಿಂದಲೂ ಸಂಶಯ ಪಿಶಾಚಿ. ರೇಣುಕಾಳಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪ ಮಾಡುತ್ತಿದ್ದ. ಮನೆಯಲ್ಲಿ ಗಂಡ-ಹೆಂಡತಿ ಮಧ್ಯೆ ಈ ವಿಷಯಕ್ಕೆ ನಿತ್ಯ ಜಗಳ ನಡೆಯುತ್ತಲೇ ಇತ್ತು.

ಅಲ್ಲದೆ ರೇಣುಕಾಗೆ ಅನೈತಿಕ ಸಂಬಂಧವಿದೆ ಎಂದು ಬೆಟ್ಟಪ್ಪ ರೇಣುಕಾಳ ತಾಯಿಗೂ ದೂರು ನೀಡಿದ್ದ. ಇನ್ನು ಮಂಗಳವಾರ ತಡರಾತ್ರಿಯೂ ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ಜಗಳದಿಂದ ಸಿಟ್ಟಿಗೆದ್ದ ರೇಣುಕಾ ತಾನು ಮನೆ ಬಿಟ್ಟು ತವರಿಗೆ ಹೋಗುವುದಾಗಿ ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದ ಬೆಟ್ಟಪ್ಪ ಮನೆಯಲ್ಲಿದ್ದ ಕೊಡಲಿಯಿಂದ ರೇಣುಕಾಳ ಮೇಲೆ ಹಲ್ಲೆ ಮಾಡಿದ್ದಾನೆ.

ನಾಲ್ಕು ಬಾರಿ ಕೊಡಲಿಯಿಂದ ಹೊಡೆದ ಬೆಟ್ಟಪ್ಪ ಬಳಿಕ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಠಾಣೆಗೆ ಹೋಗಿ ಶರಣಾಗತನಾಗಿದ್ದಾನೆ. ಲಿಂಗಸುಗೂರು ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.

Leave a Reply

error: Content is protected !!
LATEST
KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ