CrimeNEWSಆರೋಗ್ಯದೇಶ-ವಿದೇಶ

ರೋಗಿಯ ಆಸ್ಪತ್ರೆಗೆ ತಳ್ಳುಗಾಡಿಯಲ್ಲಿ ಕರೆದೋಯ್ದಿದ್ದನ್ನು ಸುದ್ದಿ ಮಾಡಿದ ಪತ್ರಕರ್ತರ ವಿರುದ್ಧವೇ ಎಫ್‌ಐಆರ್‌

ವಿಜಯಪಥ ಸಮಗ್ರ ಸುದ್ದಿ

ಭೋಪಾಲ್‌: ದೇಶದಲ್ಲಿ ಯಾವ ಪರಿಸ್ಥಿತಿ ಇದೆ ಎಂದರೆ ಸತ್ಯವನ್ನು ಅರಗಿಸಿಕೊಳ್ಳಲಾದವರು ಸತ್ಯ ಹೇಳುವವರನ್ನೇ ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ನಮ್ಮ ದೇಶದಲ್ಲಿ ಅನಾಚಾರ ಭ್ರಷ್ಟಾಚಾರ ತನ್ನ ದರ್ಪವನ್ನು ಮೆರೆಯುತ್ತಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಲಂಚಮುಕ್ತ ದೇಶವನ್ನಾಗಿ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಆ ಲಂಚದ ಕೊಳದಲ್ಲೇ ಮುಳುಗಿ ನಾರುತ್ತಿರುವುದು ಈಗ ಜಗ್ಗಜಾಹೀರಾಗಿಲ್ಲದೆ ಉಳಿದಿಲ್ಲ ಎಂಬುವುದು ದೇಶದ ಬುದ್ಧಿಮಾಂದ್ಯನಿಗೂ ತಿಳಿಯದಿರದು.

ಇತ್ತ ಸತ್ಯವನ್ನು ಬಿಚ್ಚಿಡುವ ಪತ್ರಕರ್ತರ ವಿರುದ್ಧವು ಕೇಸುಗಳು ದಾಖಲಾಗುತ್ತವೆ ಎಂದರೆ ಎಷ್ಟರ ಮಟ್ಟಿಗೆ ನಮ್ಮನ್ನಾಳುತ್ತಿರುವ ಜನಪ್ರತಿನಿಧಿಗಳು ಬಂದು ನಿಂತಿದ್ದಾರೆ ಎಂದು.

ಹೌದು! ಮಧ್ಯಪ್ರದೇಶದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದ್ದು ರೋಗಿಯನ್ನು ತಳ್ಳು ಗಾಡಿಯಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದನ್ನು ವರದಿ ಮಾಡಿದ ಮೂವರು ಪತ್ರಕರ್ತರ ವಿರುದ್ಧವೇ ಪ್ರಕರಣ ದಾಖಲು‌ ಮಾಡಿ ಅಂಧತ್ವ ಮೆರೆಯುತ್ತಿದ್ದಾರೆ ದುರುಳರು.

ಪತ್ರಕರ್ತರಾದ ಕುಂಜ್‌ಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್‌.ಕೆ. ಭಟೆಲೆ ಎಂಬುವರ ವಿರುದ್ಧ ದೂರು ದಾಖಲಿಸಿ ಎಫ್‌ಐಆರ್‌ ಕೂಡ ಮಾಡಲಾಗಿದೆ.

ಎಫ್‌ಐಆರ್‌ನಲ್ಲಿ ವರದಿಯು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ಹೇಳಲಾಗಿದೆ. ಆದರೆ, ವಿಎಇಯೋದಲ್ಲಿ ಕಾಣಿಸಿಕೊಂಡಿರುವ ಕುಟುಂಬವು, ಇದು ನಮ್ಮ ನಿಜವಾದ ನೋವಿನ ಕಥೆಯಾಗಿದೆ ಮತ್ತು ಸುಳ್ಳಲ್ಲ ಎಂದು ವಿವರಿಸಿದೆ.

ಅಂದರೆ ಅಂದು ಕುಟುಂಬವು ತಮ್ಮವರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಳ್ಳುಗಾಡಿಯಲ್ಲಿ ಕರೆದುಕೊಂಡು ಹೋಗಿರುವುದು ಸೂಳ್ಳಾ?

ಇನ್ನು ಸಹಾಯಕ್ಕಾಗಿ ಆಂಬುಲೆನ್ಸ್‌ಗೆ ಯಾವುದೇ ಕರೆ ಮಾಡಿಲ್ಲ ಎಂದು ಭಿಂಡ್ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಸ್. ರಚಿಸಿದ ಕಂದಾಯ ಮತ್ತು ಆರೋಗ್ಯ ಇಲಾಖೆಗಳ ತನಿಖಾ ತಂಡ ತಿಳಿಸಿದೆ. ವೃದ್ಧ ಜ್ಞಾನ್ ಪ್ರಸಾದ್ ವಿಶ್ವಕರ್ಮ ಅವರನ್ನು ಕುಟುಂಬದವರು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು ಮತ್ತು ವರದಿಯಂತೆ ಸರ್ಕಾರಿ ಆಸ್ಪತ್ರೆಗೆ ಅಲ್ಲ ಎಂದು ಅಧಿಕಾರಿಗಳ ತಂಡ ಹೇಳಿದೆ.

ಆದರೆ, ಭಿಂದ್ ಜಿಲ್ಲೆಯ ದಾಬೋಹ್ ಪಟ್ಟಣದ ಬಳಿಯ ಲಾಹರ್ ಎಂಬಲ್ಲಿ ಫೋನ್ ಮಾಡಿದರೂ ಆಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ 5 ಕಿ.ಮೀ ದೂರ ಗಾಡಿಯನ್ನು ತಳ್ಳಿಕೊಂಡು ಹೋಗಲಾಗಿದೆ ಎಂದು ರೋಗಿಯ ಪುತ್ರ ಹರಿಕೃಷ್ಣ ಮತ್ತು ಪುತ್ರಿ ಪುಷ್ಪಾ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಜನರೆ ನಿರ್ಧಾರ ಮಾಡಬೇಕು. ರೋಗಿ ಕರೆದುಕೊಂಡು ಹೋಗಿರುವುದಾಗಿ ಹೇಳಿಕೆ ನೀಡಿದ ಕುಟುಂಬದವರ ಹೇಳಿಕೆ ನಿಜನಾ ಅಥವಾ ಎಲ್ಲೋ ಇದ್ದು ಕೆಲ ದಿನಗಳ ಬಳಿಕ ಬಂದು ತಮಗೆ ತೋಚಿದ್ದನ್ನು ಗೀಚಿ ತನಿಖೆ ನಡೆಸಿದ್ದೇವೆ ಎಂದು ವರದಿ ನೀಡಿರುವ ಅಧಿಕಾರಿಗಳ ಹೇಳಿಕೆ ಸರಿನಾ ಎಂದು.

Leave a Reply

error: Content is protected !!
LATEST
ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ !