NEWSನಮ್ಮಜಿಲ್ಲೆನಮ್ಮರಾಜ್ಯ

KSRTC : ಮಳೆ ನೀರಿಗೆ ಸಿಲುಕಿ ವಾಹನಆಫ್ ಆದರೆ ಯಾವುದೇ ಕಾರಣಕ್ಕೂ ಸ್ಟಾರ್ಟ್ ಮಾಡಬೇಡಿ – ಟೋ ಮಾಡಿ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಬಳ್ಳಾಪುರ: ಚಾಲಕರು ಮುನ್ನೆಚ್ಚರಿಕೆಯಾಗಿ ವಾಹನವನ್ನು ನೀರಿಗೆ ಇಳಿಸದೆ ಪಕ್ಕಕ್ಕೆ ಪಾರ್ಕಿಂಗ್ ಮಾಡುವುದು ನೀರಿನ ಪ್ರಮಾಣವು ಇಳಿದ ನಂತರ ವಾಹನವನ್ನು ಚಲಾಯಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದರೆ.

ಈ ಕುರಿತು ಎಲ್ಲ ಹಿರಿಯ ವಿಭಾಗಿಯ ನಿಯಂತ್ರಣ ಅಧಿಕಾರಿ, ವಿಭಾಗಿಯ ಯಾಂತ್ರಿಕ ಅಭಿಯಂತರರು ಹಾಗೂ ಎಲ್ಲ ಘಟಕ ವ್ಯವಸ್ಥಾಪಕರಿಗೆ ವಿಶೇಷ ಸೂಚನೆಯನ್ನು ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಸೂಚನೆ ನೀಡಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಈಗಾಗಲೇ ಮಳೆ ಅತ್ಯಧಿಕವಾಗಿ ಸುರಿಯುತ್ತಿದ್ದು, ಅಂಡರ್ ಪಾಸ್ ಗಳಲ್ಲಿ, ತಗ್ಗುಪ್ರದೇಶಗಳಲ್ಲಿ ಹಲವೊಮ್ಮೆ ಸಮತಟ್ಟು ರಸ್ತೆಗಳಲ್ಲಿ ಸಹ ಮಳೆನೀರು ಚರಂಡಿಗಳಿಗೆ ಹರಿಯದೆ ಎತ್ತರವಾಗಿ ನಿಂತಿರುತ್ತದೆ. ಆ ಸಂದರ್ಭದಲ್ಲಿ ಚಾಲಕರು ಮುನ್ನೆಚ್ಚರಿಕೆಯಾಗಿ ವಾಹನವನ್ನು ನೀರಿಗೆ ಇಳಿಸದೆ ಪಕ್ಕಕ್ಕೆ ಪಾರ್ಕಿಂಗ್ ಮಾಡುವುದು ನೀರಿನ ಪ್ರಮಾಣವು ಇಳಿದ ನಂತರ ವಾಹನವನ್ನು ಚಲಾಯಿಸಲು ಸೂಚಿಸಬೇಕು ಎಂದು ತಿಳಿಸಿದ್ದಾರೆ.

ಒಂದು ವೇಳೆ ಅಚಾತುರ್ಯ ವಾಗಿ ವಾಹನವು ನೀರಿಗೆ ಸಿಲುಕಿ ಇಂಜಿನ್ ಆಫ್ ಆದರೆ ಯಾವುದೇ ಕಾರಣಕ್ಕೂ ಮತ್ತೆ ಇಂಜಿನನ್ನು Start ಮಾಡಬಾರದು. ನಂತರ ವಾಹನವನ್ನು ಸಮೀಪದ ಘಟಕಕ್ಕೆ ಅಥವಾ ವಿಭಾಗಿಯ ಕಾರ್ಯಾಗಾರಕ್ಕೆ ಟೋ ಮಾಡಿಕೊಂಡು ಬಂದು ಏರ್ ಫಿಲ್ಟರ್ ನಲ್ಲಿ ಮತ್ತು In let manifold ನಲ್ಲಿ ತುಂಬಿರುವ ನೀರನ್ನು ಹೊರತೆಗೆದು ನಂತರ ತಾಂತ್ರಿಕ ಸಿಬ್ಬಂದಿಯ salaheyondige ಇಂಜಿನನ್ನು ಸ್ಟಾರ್ಟ್ ಮಾಡಬೇಕು.

ಇದು ತಪ್ಪಿದ್ದಲ್ಲಿ ಇಂಜಿನ್ ಸೀಸ್ ಆಗುವುದು. ಆದುದರಿಂದ ಈ ವಿಷಯವನ್ನು ಈ ಕೂಡಲೇ ಘಟಕದ ಎಲ್ಲ ಚಾಲಕರಿಗೆ ಮುಟ್ಟಿಸ ತಿಳಿವಳಿಕೆ ಮೂಡಿಸುವುದು. ಯಾವುದೇ ಕಾರಣಕ್ಕೂ ನೀರಿನಲ್ಲಿ ವಾಹನ ಸಿಲುಕಿ ಇಂಜಿನ್ ಆಫ್ ಆದಲ್ಲಿ ಮತ್ತೆ ಮತ್ತೆ ಇಂಜಿನ್ ಸ್ಟಾರ್ಟ್ ಮಾಡಲು ಚಾಲಕರು ಪ್ರಯತ್ನಿಸಬಾರದು ಎಂದು ಘಟಕ ವ್ಯವಸ್ಥಾಪಕರಿಗೆ ಮತ್ತೊಮ್ಮೆ ಮುಖ್ಯ ಯಾಂತ್ರಿಕ ಅಭಿಯಂತರರು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ