ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಪ್ರವಾಹ – ಕೊಚ್ಚಿಕೊಂಡು ಹೋಗುತ್ತಿರುವ ಕಾರುಗಳು
ರಾಮನಗರ: ವರುಣನ ಆರ್ಭಟಕ್ಕೆ ಇಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರವಾಹ ಉಂಟಾಗಿದ್ದು ವಾಗನಗಳು ಹೆದ್ದಾರಿಯಲ್ಲೇ ಕೊಚ್ಚಿಕೊಂಡು ಹೋಗುತ್ತಿವೆ. ಹೀಗಾಗಿ ರಸ್ತೆ ಮಧ್ಯದಲ್ಲೇ ಹಲವಾರು ವಾಹನಗಳು ಸಿಲುಕಿದ್ದು ಜನರು ಪರಿತಪ್ಪಿಸುವಂತಾಗಿದೆ.
ರಾಮನಗರದ ವಡೇರಹಳ್ಳಿ ಬಳಿ ಪ್ರವಾಹದಂತೆ ಮಳೆ ನೀರು ಹರಿಯುತ್ತಿದ್ದು, ವಾಹನಗಳು ಸಂಪೂರ್ಣವಾಗಿ ನಿರಿನಲ್ಲಿ ಮುಳುಗಿರುವ ದೃಶ್ಯವನ್ನು ನೀವು ನೋಡಬಹುದು.
ಈ ಹೆದ್ದಾರಿಗೆ ಬರದೇ ಇರುವುದು ಒಳಿತು : ಎಚ್‌ಡಿಕೆ- ವಿಪರೀತ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರವಾಹಸದೃಶ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರು ಇಂದು ಈ ಹೆದ್ದಾರಿಗೆ ಬರದೇ ಇರುವುದು ಒಳಿತು. ಅನಿವಾರ್ಯವಾಗಿ ಸಂಚರಿಸಲೇಬೇಕಾದರೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಬೆಂಗಳೂರು-ಬೆಂಗಳೂರು ಹೆದ್ದಾರಿಯ ವಿವಿಧ ಭಾಗಗಳಲ್ಲಿ ಮಳೆನೀರು ತುಂಬಿದೆ. ಅನೇಕ ಕಡೆ ಹೆದ್ದಾರಿ ಜಲಾವೃತವಾಗಿದೆ. ಅಲ್ಲಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿವೆ. ಹೀಗಾಗಿ ವಾಹನ ಸಂಚಾರ ಮಾಡುವುದು ಅಪಾಯಕಾರಿ ಎಂದು ತಿಳಿಸಿದ್ದಾರೆ.
ರಾಮನಗರಕ್ಕೆ ಮಧ್ಯಾಹ್ನ ಸಿಎಂ ಬೊಮ್ಮಾಯಿ ಭೇಟಿ: ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿ ವೀಕ್ಷಣೆಗೆಸೋಮವಾರ ಮಧ್ಯಾ ಹ್ನ ಮುಖ್ಯ ಮಂತ್ರಿ ಬಸವರಾಜಬೊಮ್ಮಾಯಿ ಭೇಟಿ ನೀಡಲಿದ್ದಾರೆ.
ಮಧ್ಯಾ ಹ್ನ 1.30ಕ್ಕೆ ಅವರು ಬರಲಿದ್ದು , ರಾಮನಗರ ಹಾಗೂ ಚನ್ನ ಪಟ್ಟ ಣ ತಾಲ್ಲೂಕಿಗಳಲ್ಲಿನ ಮಳೆ ಹಾನಿ ವೀಕ್ಷಿ ಸಲಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ ಜತೆಗಿರಲಿದ್ದಾರೆ.