ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಇಬ್ಬರು ಚಾಲಕರು ಪತ್ಯೇಕ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.
ಸಂಸ್ಥೆಯ ಜಿಗಣಿ ಘಟಕ 27ರ ಚಾಲಕರೊಬ್ಬರು ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಮನೆಯ ಫ್ಯಾನಿಗೆ ನೇಣುಬಿಗಿದುಕೊಂಡು ಸೋಮವಾರ (ಆ.29) ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಎಂಟಿಸಿ ಜಿಗಣಿ ಡಿಪೋ ಚಾಲಕ ರಾಜಕುಮಾರ್ (43) ಆತ್ಮಹತ್ಯೆ ಮಾಡಿಕೊಂಡವರು. ಅಧಿಕಾರಿಗಳ ಕಿರುಕುಳಕ್ಕೆ ಒಂದೇ ದಿನ ಬಿಎಂಟಿಸಿಯ ಇಬ್ಬರು ಚಾಲಕರು ಜೀವಕಳೆಕೊಂಡಿರುವುದು ಮನಕಲಕುವಂತಿದೆ.
ಚಾಲಕ ರಾಜಕುಮಾರ ಅವರಿಗೆ ಪಾರ್ಶ್ವವಾಯು ಹೊಡೆದಿತ್ತು. ಹೀಗಾಗಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಲೈಟ್ ಡ್ಯೂಟಿ ಕೊಡಲಾಗಿತ್ತು. ಆದರೆ, ಅಧಿಕಾರಿಗಳು ಚಾಲಕರ ಕೊರತೆಯಿದ್ದು ನೀವು ಚಾಲಕರಾಗಿ ಹೋಗಬೇಕು ಎಂದು ಅವರಿಗೆ ಕಿರುಕುಳ ಕೊಡುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇಂದು ಮಧ್ಯಾಹ್ನ ಚನ್ನಸಂದ್ರ ಡಿಪೋನ ಚಾಲಕ ಹೊಳೆ ಬಸಪ್ಪ ಆವರು ಕೂಡ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಡಿಪೋ ಒಳಗೆ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬೆನ್ನಲ್ಲೇ ಬಿಎಂಟಿಸಿಯ ಮತ್ತೊಬ್ಬ ಚಾಲಕ ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅಧಿಕಾರಿಗಳ ಕಿರುಕುಳ ಎಷ್ಟಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ ಎನಿಸುತ್ತಿದೆ.
ರಾಜಕುಮಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಮನೆಯವರು ಯಾರು ಸ್ಥಳದಲ್ಲಿ ಇಲ್ಲದ ಕಾರಣ ನಾವು ಬರುವವರೆಗೂ ಬಾಡಿ ಇಳಿಸಬೇಡಿ ಎಂದು ತಿಳಿಸಿರುವುದರಿಂದ ಇನ್ನು ಮೃತದೇಹವನ್ನು ಇಳಿಸಿಲ್ಲ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.