ಸಾರಿಗೆ ಕಾರ್ಮಿಕರು ಬದುಕಬೇಕೋ ಹೀಗೆ ವಿಷ ತೆಗೆದುಕೊಂಡು ಸಾಯಬೇಕೋ : ಅಧಿಕಾರಿಗಳ ಕೇಳುತ್ತಿರುವ ವಜಾಗೊಂಡ ನೌಕರ
ಬೆಂಗಳೂರು: ಸಾರಿಗೆ ಕಾರ್ಮಿಕರು ಬದುಕಬೇಕೋ ಹೀಗೆ ವಿಷ ತೆಗೆದುಕೊಂಡು ಸಾಯಬೇಕೋ ಎಂದು ಅಧಿಕಾರಿಗಳನ್ನು ವಜಾಗೊಂಡ ನೌಕರರು ಕೇಳುತ್ತಿದ್ದಾರೆ.
ಕಳೆದ 2021 ಏಪ್ರಿಲ್ 7ರಿಂದ 20ರವರೆಗೆ ನಡೆದ ಸಾರಿಗೆ ನೌಕರರ ಮುಷ್ಕರದ ವೇಳೆ ಸಾರಿಗೆ ನಿಗಮಗಳ ಡಿಪೋ ವ್ಯವಸ್ಥಾಪಕರು ಅನುಸರಿಸಿದ ಕಾನೂನು ಬಾಹಿರ ನೀತಿಗೆ ಸಾಥ್ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿಗಳ ನಡೆಯಿಂದ ವಜಾಗೊಂಡಿರುವ ನೂರಾರು ನೌಕರರು ಸೆ.1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚಳವಳಿ ಹಮ್ಮಿಕೊಂಡಿದ್ದರು.
ಈ ವೇಳೆ ಚಳವಳಿ ಸ್ಥಳಕ್ಕೆ ಬಂದ ಅಧಿಕರಿಗಳ ಜತೆ ಮಾತನಾಡಿದ ವಜಾಗೊಂಡ ನೌಕರರು , ನಮ್ಮನ್ನು ಬಲಿಪಶು ಮಾಡಿರುವುದು ಯಾವ ಕಾರಣಕ್ಕೆ? ಸರ್ಕಾರಕ್ಕೆ ಸತ್ಯ ತಿಳಿಸದೆ ಮರೆ ಮಾಚಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆರೆದುಕೊಂಡರು.
ಅಂದು ಡಿಎಂಗಳು ನಡೆದುಕೊಂಡ ಕೀಳು ಮನೋಭಾವದಿಂದ ಇಂದು ನಾವು ಬೀದಿಗೆ ಬಿದ್ದಿದ್ದೇವೆ. ಮಕ್ಕಳ ಶಾಲಾ ಫೀ ಕಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನು ಡಿಎಂಗಳ ತಾಳಕ್ಕೆ ತಕ್ಕಂತೆ ಕುಣಿದ ವಿಭಾಗ ಮಟ್ಟದ ಅಧಿಕಾರಿಗಳ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ನಿಗಮಗಳಲ್ಲಿ ಕೆಎಸ್‌ಆರ್‌ಟಸಿಯಲ್ಲಿ ಇರುವ ಕಾನೂನು ಉಳಿದ ಮೂರು ನಿಗಮಗಳಿಗೂ ಅನ್ವಯವಾಗುತ್ತದೆ. ಆದರೆ ಇಲ್ಲಿ ಡಿಪೋ ಡಿಪೋಗಳಲ್ಲೂ ಒಂದೊಂದು ಕಾನೂನು ಇದೆ. ಇದರಿಂದ ನಾವು ಬದಕ ಬೇಕೋ ಇಲ್ಲ ಸಾಯಬೇಕೋ ನೀವೆ ಹೇಳಿ ಎಂದು ಪ್ರಶ್ನಿಸಿದರು.
ಚಳವಳಿಯಲ್ಲಿ ಕಾರ್ಮಿಕರ ಪರವಾಗಿ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ರೈತ ಸಂಘಸ ಹಲವಾರು ಮುಖಂಡರು, ವಜಾಗೊಂಡ ನೌಕರರು ಭಾಗವಹಿಸಿದ್ದರು.