CrimeNEWSನಮ್ಮಜಿಲ್ಲೆವಿಡಿಯೋ

KKRTC ಅಧಿಕಾರಿಗಳ ಕಿರುಕುಳ: 10 ದಿನ ಕಳೆಯುವಷ್ಟರಲ್ಲಿ ಸಾರಿಗೆ ನಿಗಮದಲ್ಲಿ 6ನೇ ಆತ್ಮಹತ್ಯೆ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಹತ್ತುದಿನಗಳೊಳಗೆ ಸಾರಿಗೆ ನಿಗಮಗಳ ನೌಕರರ ಆರನೆಯ ಆತ್ಮಹತ್ಯೆ ಪ್ರಕರಣ ತಡರಾತ್ರಿ ನಡೆದಿದ್ದು, ಈ ನೌಕರರ ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳ, ಲಂಚಬಾಕತನವೇ ಕಾರಣ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಡ ರಾತ್ರಿ ಕಲಬುರಗಿ ಕೆಕೆಆರ್‌ಟಿಸಿ ವಿಭಾಗ-1ರ ಸೇಡಂ ಘಟಕದ ನಿರ್ವಾಹಕ ಮೂಲತಃ ಅಫ್ಜಲ್‌ಪುರ ತಾಲೂಕಿನ ಗೊಬ್ಬೂರು ನಿವಾಸಿ ಭೀಮಾಶಂಕರ್ ಅವರ ಮೃತದೇಹ ಘಟಕದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೌಕರರು ಆರೋಪ ಮಾಡಿದ್ದಾರೆ.

ಭೀಮಾಶಂಕರ್ ಅವರ ಪತ್ನಿ ಮತ್ತು ಕುಟುಂಬದವರು ಇದು ಆತ್ಮಹತ್ಯೆ ಅಲ್ಲ ಕೊಲೆ ಮಾಡಿದ್ದಾರೆ. ನನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ನಿರ್ವಾಹಕ ಭೀಮಾಶಂಕರ್ ಅವರಿಗೆ ಪತ್ನಿ ಇಬ್ಬರು ಪುತ್ರರಿದ್ದಾರೆ. ಕೇವಲ 40 ವರ್ಷದ ನಿರ್ವಾಹಕ ಭೀಮಾಶಂಕರ್ ಅವರಿಗೆ ಕಳೆದ ಒಂದು ವಾರದಿಂದ ಡ್ಯೂಟಿ ಕೊಡದೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ಅದರಂತೆ ನಿನ್ನೆಯೂ ಕೂಡ ಭೀಮಾಶಂಕರ್‌ಗೆ ಡ್ಯೂಟಿ ಕೊಟ್ಟಿರಲಿಲ್ಲ. ಹೀಗಾಗಿ ಮನನೊಂದು ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ನೌಕರರು ಹೇಳುತ್ತಿದ್ದಾರೆ.

ಇನ್ನು ಡಿಪೋನಲ್ಲಿ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕಲಬುರ್ಗಿ ವಿಭಾಗ ಒಂದರ ಸೇಡಂ ಘಟಕದಲ್ಲಿ ಕೆಳ ಹಂತದ ಅಧಿಕಾರಿಯಿಂದ ಹಿಡಿದು ವಿಭಾಗೀಯ ನಿಯಂತ್ರಣಾಧಿಕಾರಿ ವರಿಗೂ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ್‌ ಕುಮಾರ್‌ ಚಂದ್ರಗಿ ಅವರು ತಮ್ಮ ವ್ಯಾಪ್ತಿಗೆ ಬರುವ ಡಿಪೋಗಳಿಗೆ ತಿಂಗಳಿಗೆ ಇಂತಿಷ್ಟು ಹಣ ಕೊಡಬೇಕು ಎಂದು ಫಿಕ್ಸ್‌ ಮಾಡಿದ್ದಾರೆ. ಇದರಿಂದ ಡಿಪೋಗಳಲ್ಲಿ ಅಧಿಕಾರಿಗಳು ನೌಕರರಿಗೆ ಕಿರುಕುಳ ನೀಡಿ ಹಣ ವಸೂಲಿ ಮಾಡಿ ಆ ಹಣವನ್ನು ತಿಂಗಳಲ್ಲಿ ತಾವು ಒಂದಷ್ಟು ಇಟ್ಟುಕೊಂಡು ಫಿಕ್ಸ್‌ ಮಾಡಿದ ಹಣವನ್ನು ಡಿಸಿಗೆ ತಲುಪಿಸುತ್ತಿದ್ದಾರೆ ಎಂದು ನೌಕರರು ಆರೋಪ ಮಾಡಿದ್ದಾರೆ.

ಈ ಅಧಿಕಾರಿಗಳ ದುರಾಸೆಗೆ ನೌಕರರು ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಈ ನೌಕರರನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಆದರೂ ಈ ಬಗ್ಗೆ ಸರ್ಕಾರವಾಗಲಿ ಅಥವಾ ಸಚಿವ ಶ್ರೀರಾಮುಲು ಅವರಾಗಲಿ ಏನು ಕ್ರಮ ಜರುಗಿಸದೆ ಇರುವುದು ಇನ್ನಷ್ಟು ನೌಕರರ ಆತ್ಮಹತ್ಯೆಗೆ ಹಿಡಿದ ಕನ್ನಡಿಯಾಗಿದೆ.

ಇನ್ನಾದರೂ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಶ್ರೀರಾಮುಲು ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಅಧಿಕಾರಿಗಳ ಕಿರುಕುಳದಿಂದ ಇನ್ನೆಷ್ಟು ನೌಕರರ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತವೋ ಗೊತ್ತಿಲ್ಲ.

ನಿನ್ನೆ ಬಿಎಂಟಿಸಿಯ ನೌಕರ ಕುಣಿಗಲ್‌ನಲ್ಲಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲದೆ ಬಿಎಂಟಿಸಿ 25ನೇ ಘಟಕದ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದರು, ಸೆ.29ರಂದು ಇಬ್ಬರು ಮತ್ತು 30 ರಂದು ಒಬ್ಬರು ಬಿಎಂಟಿಸಿ ಚಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನೋವು ಮಾಸುವ ಮುನ್ನವೇ ಮತ್ತೊಬ್ಬ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಎಲ್ಲವನ್ನು ನೋಡುತ್ತಿದ್ದರೂ ಸಾರಿಗೆ ಸಚಿವರಾಗಿರುವ ಶ್ರೀರಾಮುಲು ಅವರು ಒಂದು ಧೈರ್ಯ ತುಂಬುವ ಮಾತನಾಡುತ್ತಿಲ್ಲ, ಇಂಥವರಿಗೇಕೆ ಈ ಸಚಿವ ಸ್ಥಾನ ಇವರು ಕತ್ತೆ ಕಾಯುವುದಕ್ಕೂ ನಾಲಾಯಕ್‌ ಎಂದು ನೌಕರರು ಮತ್ತು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ