NEWSದೇಶ-ವಿದೇಶ

ಕೋಮಾದಲ್ಲಿದ್ದಾನೆ ಎಂದು 18 ತಿಂಗಳಿನಿಂದ ಪಾರ್ಥಿವ ಶರೀರವನ್ನು ಮನೆಯಲ್ಲೇ ಇಟ್ಟುಕೊಂಡ ಕುಟುಂಬ !

ವಿಜಯಪಥ ಸಮಗ್ರ ಸುದ್ದಿ

ಕಾನ್ಪುರ: 18 ತಿಂಗಹಳ ಹಿಂದೆಯೇ ಮೃತಪಟ್ಟ ಪತಿ ಕೋಮಾದಲ್ಲಿ ಇದ್ದಾನೆ ಎಂದು ಭಾವಿಸಿ ಪತ್ನಿ ಶವವನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ ವಿಸ್ಮಯಕಾರಿ ಘಟನೆಯೊಂದು ಮಧ್ಯಪ್ರದೇಶದ ಕಣ್ಣೂರಿನಲ್ಲಿ ವರದಿಯಾಗಿದೆ.

ಗ್ರಾಮದ ಆದಾಯ ತೆರಿಗೆ ಇಲಾಖೆ ನೌಕರನೆ ನಿಧನರಾಗಿದ್ದವರು. ಆದರೆ, ಮೃತರ ಕುಟುಂಬ ವರ್ಗದವರು, ಸುಮಾರು 18 ತಿಂಗಳ ಕಾಲ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಈ ವೇಳೆ ಪತಿಯ ಶವ ಕೊಳೆಯಬಾರದು ಎಂದು ಆತನ ಪತ್ನಿ ಪ್ರತಿದಿನ ಶವದ ಮೇಲೆ ಗಂಗಾಜಲ ಎರಚುತ್ತ ಇಂದಲ್ಲ, ನಾಳೆ ನನ್ನ ಪತಿ ಮೇಲೇಳುತ್ತಾನೆ ಎಂದು ಭಾವಿಸಿಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

2021ರ ಏಪ್ರಿಲ್ 22 ರಂದು ಹಠಾತ್ ಹೃದಯ ಸ್ಥಂಬನದಿಂದ ಆದಾಯ ತೆರಿಗೆ ಇಲಾಖೆಯ ನೌಕರ ವಿಮಲೇಶ್ ದೀಕ್ಷಿತ್ ನಿಧನರಾಗಿದ್ದರು. ಆದರೆ ಅವರ ಕುಟುಂಬ ವರ್ಗದವರು ಆತನ ಅಂತ್ಯಕ್ರಿಯೆ ಮಾಡದೆ ಆತ ಇನ್ನು ಕೋಮಾದಲ್ಲಿದ್ದಾನೆ ಎಂದು ನಂಬಿಕೊಂಡು 18 ತಿಂಗಳಿನಿಂದ ಶವವನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಅಲೋಕ್ ರಂಜನ್ ತಿಳಿಸಿದ್ದಾರೆ.

ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಜತೆಗೆ ಆರೋಗ್ಯ ಅಧಿಕಾರಿಗಳ ತಂಡ ರಾವತ್‍ಪುರ ಪ್ರದೇಶದ ದೀಕ್ಷಿತ್ ಅವರ ಮನೆಗೆ ಬಂದು ತಪಾಸಣೆ ನಡೆಸಲು ಮುಂದಾದಾಗ ಮನೆಯವರು ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ನಂಬಿಸಲು ಯತ್ನಿಸಿದರು.

ಸಾಕಷ್ಟು ಮನವೊಲಿಕೆಯ ನಂತರ, ಕುಟುಂಬ ಸದಸ್ಯರು ದೇಹವನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕೊಂಡೊಯಲು ಅವಕಾಶ ನೀಡಿದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಆತ 18 ತಿಂಗಳ ಹಿಂದೆಯೇ ಮೃತಪಟ್ಟಿರುವುದು ದೃಢಪಟ್ಟಿದೆ.

ಮನೆಯವರು ಆಗಾಗ್ಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ವೈದ್ಯರ ತಂಡದೊಂದಿಗೆ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.

ಇನ್ನು 18 ತಿಂಗಳಿನಿಂದ ಸತ್ತ ವ್ಯಕ್ತಿಯ ಶವ ಕೊಳೆಯದಂತೆ ನೋಡಿಕೊಂಡಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಇದು ವೈದ್ಯರಿಗೂ ಒಂದು ಸೋಗಿಗದಂತೆ ಕಾಣುತ್ತಿದ್ದು, ಹೇಗೆ ಇಷ್ಟು ತಿಂಗಳುಗಳ ಕಾಲ ಶವವನ್ನು ಕೊಳೆಯದಂತೆ ಇಟ್ಟುಕೊಂಡರು ಎಂಬ ಬಗ್ಗೆ ಅವರಿಂದಲೇ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು