ಚಿತ್ರದುರ್ಗ : ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 2021ರ ಏಪ್ರಿನಲ್ಲಿ ನಡೆದ ಮುಷ್ಕರದ ವೇಳೆ ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣ ದಾಖಲಿಸಿರುವುದನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿಯ ತ್ರಿಮೂರ್ತಿಗಳಿಗೆ ಕೂಟದ ಅಧ್ಯಕ್ಷರು ಮನವಿ ಸಲ್ಲಿಸಿದ್ದಾರೆ.
ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಶನಿವಾರ ಆಯೋಜಿಸಿದ್ದ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 30 ನೇ ಶ್ರದ್ಧಾಂಜಲಿ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಅವರ ಮನವಿಯನ್ನು ನಾಮ್ ಕೇ ವಾಸ್ತೆ ಎಂಬಂತೆ ಸ್ವೀಕರಿಸಿದ ಸಿಎಂ, ಸಚಿವ ಮತ್ತು ಮಾಜಿ ಸಿಎಂ ಅವರು ಈ ಬಗ್ಗೆ ಈಗಾಗಲೇ ಪರಿಶೀಲನೆ ನಡೆಯುತ್ತಿದ್ದು, ಆದಷ್ಟು ಶೀಘ್ರದಲ್ಲೇ ನಿಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂಬ ಹಳೇ ಭರವಸೆಯನ್ನೇ ಮತ್ತೆ ನೀಡಿದರು.
ಇನ್ನು ರಳಬಾಳು ಜಗದ್ಗುರು ಬೃಹನ್ಮಠ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅವರು ಅಕ್ಟೋಬರ್ 2ರಂದು ಹಮ್ಮಿಕೊಂಡಿರುವ ಪಾದಯಾತ್ರೆ ವೇಳೆ ನೀವು ಬನ್ನಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಸಿಎಂ ಮುಂದೆ ಇಟ್ಟು ಬಹುತೇಕ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿರುವುದಾಗಿ ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು, ವೇದಿಕೆಯಲ್ಲಿ ನಾಡಿನ ಅನ್ನದಾತರ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಇದು ಒಳ್ಳೆಯ ಬೆಳವಣಿಗೆಯೇ ಆದರೆ, ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗಿ ಸಾರಿಗೆ ನೌಕರರು ಮತ್ತು ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ನಿವಾರಿಸಿ ಎಂದು ಪರಿಪರಿಯಾಗಿ ಕೇಳಿಕೊಂಡರು ನೋಡೋಣ ಎಂಬ ದಾಟಿಯಲ್ಲಿ ಮನವಿ ಸ್ವಿಕರಿಸಿ ಆ ಬಗ್ಗೆ ಮಾತನಾಡದಿರುವುದು ಬೇಸರದ ಸಂಗತಿ.
ವೇದಿಯಲ್ಲಿ ನೌಕರರ ಅನುಭವಿಸುತ್ತಿರುವ ಸಮಸ್ಯೆ ಮತ್ತು ಬೇಡಿಕೆಗಳ ಈಡೇರಿಸುವ ಬಗ್ಗೆ ಒಂದೇಒಂದು ಮಾತನಾಡಿದರು, ಅಂದರೆ, ಕಷ್ಟದಲ್ಲಿ ಸಿಲುಕಿರುವ ಸಾರಿಗೆ ನೌಕರರು ನಾವು ಹೋದ ಕಡೆಗೆಲ್ಲ ಬಂದು ಮನವಿ ಸಲ್ಲಿಸುತ್ತಲೇ ಇದ್ದಾರೆ. ಹೀಗಾಗಿ ನಾವು ಕೂಡ ಆ ಬಗ್ಗೆ ಬಹಳ ಕಾಳಜಿ ತೆಗೆದುಕೊಂಡು ಸಮಸ್ಯೆ ಬಗೆಹರಿಸುವತ್ತ ಯೋಚಿಸುತ್ತೇವೆ ಎಂದು ಮಾತನಾಡಿದರೆ ಅವರು ಕಳೆದುಕೊಳ್ಳುತ್ತಿದ್ದದ್ದು ಏನು?
ಇದು ಎಷ್ಟು ಬೇಸರದ ಸಂಗತಿ ಎಂದರೆ, ಇತ್ತ ವಜಾಗೊಂಡು ಕೈಯಲ್ಲಿ ನಯಪೈಸೆ ಹಣವು ಇಲ್ಲದೆ ಈ ಸಿಎಂ ಮತ್ತು ಸಚಿವರು ಹೋದ ಕಡೆಗೆಲ್ಲ ಹೋಗಿ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತಿದ್ದರೂ ಈ ಸಿಎಂ ಎನಿಸಿಕೊಂಡರು ಆ ಬಗ್ಗೆ ಚಿಂತಿಸದಿರುವುದು ಬಹಳ ಖೇದಕರವಾಗಿದೆ.
ಇನ್ನು ಸಿಎಂ ಸ್ಥಾನದಲ್ಲಿರುವವರು ಮುಖ್ಯ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಆದರೆ, ಸಾರಿಗೆ ನೌಕರರು ಕಳೆದ 3-4 ದಶಕಗಳಿಂದಲೂ ಕಿರುಕುಳ ಸಮಸ್ಯೆ ಅನುಭವಿಸುತ್ತಾ ಬರುತ್ತಿದ್ದರು. ಇದು ಅವರಿಗೆ ಮುಖ್ಯ ಎಸಿದಿಲ್ಲ ಅಂದರೆ, ಅವರ ಮನಸ್ಥಿತಿಯ ಎಂಥದ್ದು ಎಂಬುದನ್ನು ತೋರಿಸುತ್ತದೆ. ಹಾಲಿ ಸಿಎಂ ಅಷ್ಟೇ ಅಲ್ಲ ಹಿಂದಿನ ಯಾವೊಬ್ಬ ಸಿಎಂ ಮತ್ತು ಸಾರಿಗೆ ಸಚಿವರಾದರವೂ ಕೂಡ ಈ ಬಗ್ಗೆ ಒಂದು ಗಟ್ಟಿ ನಿಲುವು ತೆಗೆದುಕೊಳ್ಳದಿರುವುದು ಅವರ ಆಡಳಿತ ಮತ್ತು ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.
ಇನ್ನಾದರೂ ಇರುವ ಕೆಲವೇ ಕೆಲವು ತಿಂಗಳುಗಳ ಅಧಿಕಾರ ಮುಗಿಯುವ ಒಳಗಾದರೂ ಸಾರಿಗೆ ನೌಕರರ ಸಮಸ್ಯೆಗೆ ಸಾಧ್ಯವಾದಷ್ಟು ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ, ಈಗಿನ ಕೆಲಸಕ್ಕೆ ಬಾರದ ಸಾರಿಗೆ ಸಚಿವ ಶ್ರೀರಾಮುಲು ಮತ್ತು ಅಂದು ನೌಕರರ ಬಗ್ಗೆ ಉದಾಸೀನತೆ ತೋರಿ ಸಿಎಂ ಆಗಿದ್ದ ವೇಳೆ ಒಂದು ರೀತಿ ನಡೆದುಕೊಂಡಿದ್ದ ಯಡಿಯೂರಪ್ಪ ಅವರು ತಮ್ಮ ಮನ ಪರಿವರ್ತನೆ ಮಾಡಿಕೊಂಡು ನೌಕರರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕಿದೆ.
ಇದು ಪಕ್ಷದ ಹಿತದೃಷ್ಟಿಯ ಜತೆಗೆ ನೌಕರರ ಜೀವನದ ಪ್ರಶ್ನೆಯತೂ ಆಗಿರುವುದರಿಂದ ಈಗಲಾದರೂ ಇವರು ಕಾನೂನಾತ್ಮಕವಾಗಿ ನೌಕರರಿಗೆ ಆಗುತ್ತಿರುವ ತಾರತಮ್ಯತೆಯನ್ನು ಹೋಗಲಾಡಿಸಲು ಮುಂದಾಗುತ್ತಾರೆ ಎಂಬ ಭರವಸೆಯ ಬೆರಗುಗಣ್ಣಿನಲ್ಲೇ ನೋಡುತ್ತಾ, ಕಾಯುತ್ತಿದ್ದಾರೆ 1.30 ಲಕ್ಷ ಸಾರಿಗೆ ನೌಕರರು ಮತ್ತು ಅಧಿಕಾರಿಗಳು.