KKRTC: ರಾಷ್ಟ್ರಕೃತ ವಲಯದಲ್ಲಿ ಖಾಸಗಿ ಬಸ್‌ಗಳ ಕಾರ್ಯಾಚರಣೆಗೆ ಸಾರಿಗೆ ಸಂಘಟನೆಗಳ ವಿರೋಧ- ಪ್ರತಿಭಟನೆ ಎಚ್ಚರಿಕೆ
ವಿಜಯಪುರ: ಜಿಲ್ಲೆಯು ಸಂಪೂರ್ಣ ರಾಷ್ಟ್ರಕೃತ ವಲಯವಾಗಿದ್ದು, ಈ ವಲಯದಲ್ಲಿ ಖಾಸಗಿ ಬಸ್‌ಗಳ ಕಾರ್ಯಾಚರಣೆಗೆ ಅವಕಾಶವಿಲ್ಲ. ಆದಾಗ್ಯೂ ಸಹ 24-08-2022ರಂದು ನಡೆದ ಎಸ್.ಟಿ.ಎ ಸಭೆಯ ನಡಾವಳಿಯಲ್ಲಿ ಕರ್ನಾಟಕ ಸರ್ಕಾರವು ಬೇಂದ್ರೆ ಸಾರಿಗೆ ಎಂಬ ಖಾಸಗಿ ಪ್ರವರ್ತಕರಿಗೆ ಬೆಳಗಾವಿ – ಅಥಣಿ – ವಿಜಯಪುರ ಮಾರ್ಗದಲ್ಲಿ 41ರಹದಾರಿಗಳಿಗೆ ಒಪ್ಪಿಗೆ ಸೂಚಿಸಿ, ಆದೇಶ ಹೊರಡಿಸಿದೆ. ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಬಿಜಯಪುರ ವಿಭಾಗದ ಕೆ.ಎಸ್.ಆರ್.ಟಿ.ಸಿ. ಸ್ಟಾಫ್ & ವರ್ಕರ್ ಯೂನಿಯನ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸೋಮವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ವಿಷಯವಾಗಿ ಚರ್ಚೆ ನಡೆಸಿದ್ದು, ಈಗಾಗಲೇ ಸಾರಿಗೆ ಸಂಸ್ಥೆಯಿಂದ ಈ ಮಾರ್ಗದಲ್ಲಿ ಪ್ರತಿ 15 ನಿಮಿಷಕ್ಕೊಂದರಂತೆ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ವಿಷಯ ಸರ್ಕಾರಕ್ಕೆ ಗೊತ್ತಿದ್ದರೂ ಕೂಡ ಖಾಸಗಿ ವಾಹನಗಳಿಗೆ ಪರವಾನಗಿ ನೀಡಿರುವುದು ಕಾರ್ಮಿಕ ವಿರೋಧಿಯಾಗಿದೆ. ಹೀಗಾಗಿ ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಸಾರಿಗೆಯ ನಾಲ್ಕೂ ನಿಗಮಗಳಿಂದ ಸುಮಾರು 1.25 ಲಕ್ಷ ನೌಕರರು ಹಾಗೂ ಅವರ 10 ಲಕ್ಷ ಕುಟುಂಬದ ಸದಸ್ಯರು ಸಂಸ್ಥೆ ಅವಲಂಬಿಸಿದ್ದಾರೆ. ನಿಗಮದ ನೌಕರರು ಹಾಗೂ ಅವರ ಕುಟುಂಬ ವರ್ಗ ಸರ್ಕಾರ ತೆಗೆದುಕೊಂಡಿರುವ ಈ ನಡೆಯಿಂದ ಬೀದಿಗೆ ಬರುವ ಸಂಭವವಿದೆ. ಅದಕ್ಕೆ ನಮ್ಮ ಎಲ್ಲ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧ ಮಾಡುತ್ತಿದ್ದು ಈ ಆದೇಶವನ್ನು ಕೂಡಲೇ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಸಂಸ್ಥೆಯ ಎಲ್ಲ ಕಾರ್ಮಿಕ ಸಂಘಟನೆ ಮುಖಂಡರು, ಸದಸ್ಯರು ಹಾಗೂ ಕಾರ್ಮಿಕರು ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಸಮಸ್ತ ಕಾರ್ಮಿಕ ಸಂಘಟನೆ ಮುಖಂಡರು ಹಾಗೂ ಸದಸ್ಯರು ಜಂಟಿಯಾಗಿ ಈ ಮೂಲಕ ತಮ್ಮ ಗಮನಕ್ಕೆ (ಸರ್ಕಾರ) ತರಬಯಸುವದೇನೆಂದರೆ, ಹುಬ್ಬಳ್ಳಿ -ಬಾಗಲಕೋಟೆ-ವಿಜಯಪುರ ಮಾರ್ಗದಲ್ಲಿ 15, ಹುಬ್ಬಳ್ಳಿ-ಗದಗ ನಡುವೆ 11 ಹಾಗೂ ಬೆಳಗಾವಿ- ಅಥಣಿ-ವಿಜಯಪುರ ಮಾರ್ಗದಲ್ಲಿ 15. ಹೀಗೆ ಒಟ್ಟು 41 ಮಾರ್ಗಗಳಲ್ಲಿ ಪರವಾನಿಗೆ ನೀಡಿದ್ದು, ಇದರಿಂದ ಸಾರಿಗೆ ಸಂಸ್ಥೆ ಆದಾಯಕ್ಕೆ ನಷ್ಟವಾಗುವುದು ಎಂದು ವಿಜಯಕರ್ನಾಟಕದಲ್ಲಿ ವರದಿಯಾಗಿದೆ.
ಅಲ್ಲದೆ 24-08-2022ರಂದು ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ 20-07-2021ರಂದು ಹೊರಡಿಸಿದ ಅಧಿಸೂಚನೆಯನ್ನು ಪರಿಷ್ಕರಿಸಿ, ಬೆಳಗಾವಿ-ಅಥಣಿ- ವಿಜಯಪುರ ಮಾರ್ಗದಲ್ಲಿ 41 ರಹದಾರಿಗಳನ್ನು ಬೇಂದ್ರೆ ಸಾರಿಗೆಯವರಿಗೆ ಕಾರ್ಯಾಚರಣೆ ಮಾಡಲು ಅನುಮತಿಸಿ, ಆದೇಶ ಹೊರಡಿಸಲಾಗಿದೆ. ಸದರಿ ಸರ್ಕಾರದ ಆದೇಶಕ್ಕೆ ಕಲ್ಯಾಣ, ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಸಮಸ್ತ ಕಾರ್ಮಿಕ ಸಂಘಟನೆಗಳ ಮುಖಂಡರು, ಸದಸ್ಯರು ಹಾಗೂ ಸಮಸ್ತ ಕಾರ್ಮಿಕರಿಂದ ವಿರೋಧವಿದೆ.
ಈ ಮಾರ್ಗದಲ್ಲಿ ಖಾಸಗಿ ಕಾರ್ಯಾಚರಣೆಗೆ ಅನುಮತಿ ನೀಡುವುದರಿಂದ, ಪ್ರಸ್ತುತ ಸಂಸ್ಥೆಯಿಂದ ಕಾರ್ಯಾಚರಣೆಯಲ್ಲಿರುವ ವಿಜಯಪುರ-ಬೆಳಗಾವಿ ಮಾರ್ಗದಲ್ಲಿ ಆದಾಯಕ್ಕೆ ಕತ್ತರಿ ಬೀಳುತ್ತದೆ. ಈಗಾಗಲೇ ಸಾರಿಗೆ ಸಂಸ್ಥೆಯು ಕೋವಿಡ್-19 ಕಾರಣ ವಾಹನಗಳ ಕಾರ್ಯಾ ಚರಣೆಯಿಲ್ಲದೆ ವಿನಾಶದ ಅಂಚಿನಲ್ಲಿದ್ದು, ಸಂಸ್ಥೆಯ ನೌಕರರಿಗೆ ಸರಿಯಾಗಿ ವೇತನವೂ ಸಿಗುತ್ತಿಲ್ಲ. ಅದಲ್ಲದೆ ಇತ್ತೀಚೆಗೆ ಡೀಸೆಲ್ ಬೆಲೆಯಲ್ಲಿ ಆದ ಹೆಚ್ಚಳ ಹಾಗೂ ಬಿಡಿಭಾಗಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಸಂಸ್ಥೆಯ ಅರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ.
ಈ ನಡುವೆ 2020ರಲ್ಲೇ ಆಗಬೇಕಾಗಿರುವ ಕಾರ್ಮಿಕರ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ಇದೂವರೆಗೂ ಸಾಧ್ಯವಾಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಂಸ್ಥೆಯನ್ನು ಉಳಿಸಬೇಕು, ಬೆಳೆಸಬೇಕು. ಸಾರ್ವಜನಿಕರಿಗೆ ಉತ್ತಮವಾದ ಸೇವೆ ಒದಗಿಸಬೇಕು ಎಂಬ ಬಲವಾದ ಧ್ಯೇಯದಿಂದ ನಿಗಮದ ಎಲ್ಲ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಕಾ೯ರವು ಬೆಳಗಾವಿ – ಅಥಣಿ- ಬೆಳಗಾವಿ ಮಾರ್ಗವನ್ನು ಖಾಸಗಿ ಪ್ರವರ್ತಕರಿಗೆ ಮಾರಿಕೊಂಡಿದ್ದು, ಸಂಸ್ಥೆಗೆ ಹಾಗೂ ಸಂಸ್ಥೆಯ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಮಾರ್ಗದಲ್ಲಿ 41 ರಹದಾರಿಗಳನ್ನು ಖಾಸಗೀಯವರಿಗೆ ಮಂಜೂರು ಮಾಡಿದಲ್ಲಿ ಸಂಸ್ಥೆಗೆ ಪ್ರತಿದಿನ ಅಂದಾಜು 10 ಲಕ್ಷ ರೂ.ಗಳಿಂದ 12 ಲಕ್ಷ ರೂ. ಆರ್ಥಿಕ ನಷ್ಟ ಉಂಟಾಗಿ ಸಂಸ್ಥೆ ಕಾರ್ಮಿಕರಿಗೆ ವೇತನ ನೀಡುವುದಕ್ಕೂ ಸಾಧ್ಯವಾದ ಸ್ಥಿತಿಗೆ ತಪುಪಲಿದೆ. ಆದ ಕಾರಣ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಆಯ್ ಆಯ್ ಮುಶ್ರಫ್, ಅಧ್ಯಕ್ಷ ಅರುಣ ಕುಮಾರ ಹೀರೇಮಠ, ರಾಜ್ಯ ಸಂಘಟನಾ ಕಾರ್ಯದರ್ಶಿ ಆರ್.ಆರ್. ನದಾಫ, ಎಂಎಸ್. ಹುಂಡೇಕಾರ, ಬಿ.ಎಂ.ತೆರೆದಾಳ, ಎಂ. ವಿ.ಬಿರಾದಾರ, ವಸೀಮ ಪಟೇಲ, ಮುನ್ನಾ ಬಿಜಾಪುರ, ನೂರ ಸೌದಾಗರ, ಇರ್ಷಾದ ಸಲಗರ್, ಶ್ರೀಕಾಂತ ಕೊಪ್ಪಳ, ಮಲ್ಲು ಲಮಾಣಿ, ಎಸ್.ಬಿ. ಮಟಗಾರ, ಎಂ.ಎಲ್. ಚೌದರಿ, ನಿಂಗಪ್ಪ ಕವಲಗಿ, ಎಸ್.ಡಿ. ಪಟ್ಟಣಶೆಟ್ಟಿ , ಭೀಮ ಗಳೇದ, ಜಿ.ಜಿ. ಬಿರಾದಾರ, ಯಮನಪ್ಪ, ಚಲವಾದಿ ಇತರರು ಇದ್ದರು.
Related
You Might Also Like
KSRTC ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರ ತಡೆಯಲು ಮುಂದಾದ ಸರ್ಕಾರ?
ಬೆಂಗಳೂರು: ಡಿಸೆಂಬರ್ 31ರಿಂದ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಯೋಜಿತ ಅನಿರ್ದಿಷ್ಟಾವಧಿ ಮುಷ್ಕರ ತಡೆಯಲು ಸಾರಿಗೆ ಇಲಾಖೆ ಸಕ್ರಿಯವಾಗಿದೆ. ಈ ನಡುವೆ ವೇತನ ಹೆಚ್ಚಳ ಸೇರಿದಂತೆ...
NWKRTC: ಡಿ.31ರ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ- ಹುಬ್ಬಳ್ಳಿ ಸಾರಿಗೆ ನೌಕರರ ಒಕ್ಕೂಟ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಒಕ್ಕೂಟದ ಪದಾಧಿಕಾರಿಗಳು ಹುಬ್ಬಳ್ಳಿಯ ನಗರ ಸಾರಿಗೆ ಘಟಕ 1, ಗ್ರಾಮಾಂತರ ಘಟಕ 1, ಗ್ರಾಮಾಂತರ ಘಟಕ...
NWKRTC: ಬಸ್-ಕಾರು ನಡುವೆ ಅಪಘಾತ – ಮಹಿಳೆ ಮೃತ, ಇಂಜಿನಿಯರ್‌ಗೆ ಗಾಯ
ಚಿಕ್ಕೋಡಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತೊಟ್ಟಿದ್ದು, ಕಾರು ಚಾಲನೆ ಮಾಡುತ್ತಿದ್ದ ಇಂಜಿನಿಯರ್ ಪ್ರಾಣಾಪಾಯದಿಂದ...
ದೆಹಲಿ ರೈತರ ಹೋರಾಟ ಬೆಂಬಲಿಸಿ ಬನ್ನೂರಿನಲ್ಲಿ ರೈತರು- ರೈತ ಮುಖಂಡರ ಪ್ರತಿಭಟನೆ
ಬನ್ನೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ...
KSRTC: ಅಧಿಕಾರಿಗಳು ಬೀದಿಗಿಳಿಯದ ಹೊರತು ನಾವು ಮುಷ್ಕರ ಬೆಂಬಲಿಸಲ್ಲ- ಸಮಸ್ತ ಚಾಲನಾ ಸಿಬ್ಬಂದಿಗಳು
ಬೆಂಗಳೂರು: ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳ ಎಲ್ಲ ಅಧಿಕಾರಿ ವರ್ಗ, ಆಡಳಿತ ವರ್ಗ, ಭದ್ರತಾ ಸಿಬ್ಬಂದಿಗಳು ಎಲ್ಲರೂ ತಮ್ಮ ತಮ್ಮ ಕರ್ತವ್ಯ ತೊರೆದು ಬಂದು ಎಲ್ಲಿತನಕ ಮುಷ್ಕರಕ್ಕೆ...
KSRTC: ಸಾರಿಗೆ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡೇಮಾಡುತ್ತೇವೆ- ಕ್ರಿಯಾ ಸಮಿತಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ...
ಪಂಚಭೂತಗಳಲ್ಲಿ ಲೀನವಾದ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್
ನ್ಯೂಡೆಲ್ಲಿ: ಭಾರತದ ಮಾಜಿ ಪ್ರಧಾನಿಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್ಬೋಧ್ ಘಾಟ್ನಲ್ಲಿ ಕುಟುಂಬಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮಧ್ಯಾಹ್ನ...
ಕಟಾವುಮಾಡಿ ಕಣದಲ್ಲೇ ಬಿಟ್ಟಿದ್ದ 60 ಕ್ವಿಂಟಲ್ ಭತ್ತ ತಿಂದು ನಾಶ ಮಾಡಿದ ಆನೆಗಳು: ತಲೆಮೇಲೆ ಕೈಹೊತ್ತು ಕುಳಿತ ರೈತರು
ಹಾಸನ: ಬೆಳೆದು ನಿಂತಿದ್ದ ಭತ್ತವನ್ನು ಕಟಾವು ಮಾಡಿ ಗದ್ದೆಯಲ್ಲೇ ಚೀಲಕ್ಕೆ ತುಂಬಿಟ್ಟಿದ್ದ ಸುಮಾರು 60 ಕ್ವಿಂಟಲ್ ಭತ್ತವನ್ನು ಕಾಡಾನೆಗಳ ಹಿಂಡು ತಿಂದುಹಾಕಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟಮಾಡಿರುವ...
ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿದ ಪಾಪಿಗಳು
ಢಾಕಾ: ಮಧ್ಯಂತರ ಸರ್ಕಾರ ಬಾಂಗ್ಲಾದೇಶದಲ್ಲಿ ಬಂದ ಬಳಿಕ ಅಲ್ಪಸಂಖ್ಯಾತರ ಮೇಲಿನ ದಾಳಿ ಹೆಚ್ಚಾಗುತ್ತಲೇ ಇದೆ. ಹಿಂದೂ ದೇಗುಲಗಳ ಮೇಲೆ ದಾಳಿ ಮಾಡಿದ ಬಳಿಕ ಈಗ ಕ್ರಿಸ್ಮಸ್ ಸಂಭ್ರಮಾಚರಣೆ...
ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: 5 ಸಾವಿರ ಪ್ರವಾಸಿಗರ ರಕ್ಷಿಸಿದ ಪೊಲೀಸರು
ಡೆಹ್ರಾಡೂನ್: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆ ಶುಕ್ರವಾರ ಹಿಮಾಚಲ ಪ್ರದೇಶದ ಕುಲುವಿನ ಸ್ಕೀ ರೆಸಾರ್ಟ್ ಸೊಲಾಂಗ್ ನಾಲಾದಲ್ಲಿ ಸಿಲುಕಿದ್ದ ಸುಮಾರು 5,000 ಪ್ರವಾಸಿಗರನ್ನು ಪೊಲೀಸರು ರಕ್ಷಿಸಿದ್ದಾರೆ....
ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್ಗೆ ಗ್ರಾನೈಟ್ ತುಂಬಿದ ಲಾರಿ ಡಿಕ್ಕಿ: ಹೊತ್ತಿ ಉರಿದ ಕ್ಯಾಂಟರ್- ಚಾಲಕರಿಗೆ ಗಂಭೀರ ಗಾಯ
ಚಿಕ್ಕಬಳ್ಳಾಪುರ: ಸಿಎನ್ಜಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್ಗೆ ಗ್ರಾನೈಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದ ಘಟನೆ ಚಿಕ್ಕಬಳ್ಳಾಪುರದ ಹುನೇಗಲ್ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ...
KSRTC: ನಾಲ್ಕೂ ನಿಗಮಗಳ ಸಾರಿಗೆ ನೌಕರರು ಜ.1ರಿಂದ 6 ತಿಂಗಳುಗಳ ಕಾಲ ಮುಷ್ಕರ ಮಾಡುವಂತಿಲ್ಲ- ಸರ್ಕಾರ ಆದೇಶ
ಬೆಂಗಳೂರು: 2024ರ ಜನವರಿ ಒಂದರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಹಾಗೂ ಕಳೆದ 2020ರ ಜನವರಿ 1ರಿಂದ ಹೆಚ್ಚಳವಾಗಿರುವ ಶೇ.15ರಷ್ಟು ವೇತನದ 38 ತಿಂಗಳುಗಳ ಹಿಂಬಾಕಿ ಕೊಡುವಂತೆ...