Please assign a menu to the primary menu location under menu

NEWSನಮ್ಮರಾಜ್ಯಸಂಸ್ಕೃತಿ

ಎಐಪಿಎಸ್‌ ಶಾಲಾವರಣದಲ್ಲಿ ದಸರಾ ಗೊಂಬೆಗಳ ಕೂರಿಸಿ ನವರಾತ್ರಿ ಸಂಭ್ರಮ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು : ನವರಾತ್ರಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಇರಿಸಿ ಪೂಜೆ ಮಾಡುವುದು ಸಂಪ್ರದಾಯ. ನವರಾತ್ರಿಯಲ್ಲಿ ನಡೆಯುವ ಗೊಂಬೆ ಪೂಜೆಗೆ ಸುಮಾರು 400 ವರ್ಷಗಳ ಇತಿಹಾಸವಿದೆ. ಮೈಸೂರಿನ ರಾಜ ಒಡೆಯರ್ ಅವರು ವಿಜಯನಗರ ಸಂಸ್ಥಾನದಿಂದ ಕರ್ನಾಟಕದ ಸಿಂಹಾಸನಾಧೀಶರಾದ ಮೇಲೆ ಮೈಸೂರು ಸಂಸ್ಥಾನದಲ್ಲಿ ವಿಜಯನಗರದ ಆಚಾರ ವಿಚಾರ ಪರಂಪರೆಗಳನ್ನು ಆಚರಿಸಲು ಪ್ರಾರಂಭಿಸಿದರು.

ನವರಾತ್ರಿಯಲ್ಲಿ ನಡೆಯುವ ಗೊಂಬೆ ಪೂಜೆ ಶಾಲೆಯಲ್ಲೂ: ಪ್ರಮುಖವಾಗಿ ನವರಾತ್ರಿಯ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಪದ್ಧತಿ ಆಚರಣೆ ಇದೆ. ಅದೇ ಪದ್ಧತಿ ಇದೀಗ ಹಲವು ಮನೆಗಳಲ್ಲಿ ಹಾಗೂ ಮೈಸೂರಿನ ರಾಜ ವಂಶಸ್ಥರ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಅದೇರೀತಿ ನವರಾತ್ರಿಯ ಆಚರಣೆ ವೇಳೆ ಕಳೆದ 9 ವರ್ಷಗಳಿಂದ ಏಷಿಯನ್‌ ಇಂಟರ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಗೊಂಬೆ ಕೂರಿಸುವ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ.

ಸ್ಕೂಲ್‌ನಲ್ಲಿ ನವರಾತ್ರಿ ಪ್ರಯುಕ್ತ ಸೋಮವಾರ ಮತ್ತು ಮಂಗಳವಾರ ಗೊಂಬೆಗಳನ್ನು ಕೂರಿಸಿ ವಿದ್ಯಾರ್ಥಿಗಳಿಗೆ ನವರಾತ್ರಿಯ ಆಚರಣೆ ಸಂಪ್ರದಾಯ ತಿಳಿಸುವ ಮೂಲಕ ಶಾಲೆಯ ಪ್ರಾಂಶುಪಾಲೆ ಡಿಂಪಲ್‌ ಆರ್‌ ಗೌಡ ಮಕ್ಕಳಲ್ಲಿ ನಾಡಿನ ಸಂಪ್ರದಾಯವನ್ನು ಮನವರಿಕೆ ಮಾಡಿದರು.

ಶಾಲೆಯ ಶಿಕ್ಷಕ ವೃಂದದವರು ಈ ವೇಳೆ ಮಕ್ಕಳಿಗೆ ಮೈಸೂರಿನ ದಸರಾ ವಿಶೇಷವನ್ನು ತಿಳಿಸಿಕೊಟ್ಟರು. ಮಕ್ಕಳು ಶಾಲೆಯಲ್ಲಿ ಗೊಂಬೆ ಕೂರಿಸಲು ಸಹಕರಿಸಿದರು. ಈ ಮೂಲಕ ವಿಜೃಂಬಣೆಯಿಂದ ದಸರಾ ಗೊಂಬೆಗಳನ್ನು ಕೂರಿಸಿ ಸಂಭ್ರಮಿಸಿದರು.

ನವರಾತ್ರಿಯಲ್ಲಿ ಗೊಂಬೆ ಪೂಜೆ ಹಿನ್ನೆಲೆ : ಹಿಂದೆ ಮೈಸೂರು ಸಂಸ್ಥಾನದ ಜನತೆಗೆ ಮಹಾರಾಜರು ಈ ನವರಾತ್ರಿ ಸಂದರ್ಭದಲ್ಲಿ ತಮ್ಮ ಮನೆಗಳಿಗೂ ಬರಲಿ ಎಂಬ ಆಸೆ. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದರ ಸಂಕೇತವಾಗಿ ತಮ್ಮ ಮನೆಗಳಲ್ಲಿ ಪಟ್ಟದ ಗೊಂಬೆ ಇರಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ. ಮೊದಲ ಮೆಟ್ಟಿಲಿನಲ್ಲಿ ರಾಜರಾಣಿ ಇಟ್ಟು, ನಂತರ ಕಳಸ ಅನಂತರ ಬೇರೆ ಬೇರೆ ಗೊಂಬೆಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ.

ಇಲ್ಲಿ ಪ್ರಮುಖವಾಗಿ ನವದುರ್ಗೆಯರು, ದಶಾವತಾರ, ಅಷ್ಟಲಕ್ಷ್ಮಿ ಅವರು, ಸಪ್ತಮಾತ್ರಿಕೆಯರು, ರಾಮಾಯಣ ಮಹಾಭಾರತ ದೃಶ್ಯ ತೋರಿಸುವ ಗೊಂಬೆಗಳು, ಅರಮನೆ ಅಂಬಾರಿ ಆನೆ, ಸೈನಿಕರು ಈ ರೀತಿ ರಾಜ ಪರಂಪರೆಯ ದೇವರುಗಳು ಇತ್ಯಾದಿ ಗೊಂಬೆಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಈ ಗೊಂಬೆ ಪೂಜೆಯ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯ ಮಹಿಳೆಯರನ್ನು ಕರೆದು ಅರಿಶಿಣ ಕುಂಕುಮವನ್ನು ನೀಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.

ಅದೇರೀತಿ ಈಗ ಮನೆಗಳಿಂದ ಶಾಲೆಗಳ ಆವರಣಕ್ಕೂ ಗೊಂಬೆ ಕೂರಿಸುವ ಸಂಪ್ರದಾಯ ವ್ಯಾಪಿಸಿದ್ದು, ನಾಡಿನಾದ್ಯಂತ ಮನೆಗಳು ಶಾಲೆಗಳು ಎನ್ನದೆ ಬಹುತೇಕ ಎಲ್ಲೆಡೆಯೂ ಗೊಂಬೆ ಕೂರಿಸುವ ಸಂಪ್ರದಾಯ ಬೆಳೆದು ಬಂದಿದೆ.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್