ದಾವಣಗೆರೆ: KSRTC ಬಸ್ಗೆ ಖಾಸಗಿ ಬಸ್ ಚಾಲಕನ ಕಿರಿಕಿರಿ, ಅವಾಚ್ಯ ಶಬ್ದಗಳಿಂದ ನಿಂದನೆ
ದಾವಣಗೆರೆ: ಸರ್ಕಾರಿ ಸಾರಿಗೆ ಬಸ್ಗಳ ಚಾಲನಾ ಸಿಬ್ಬಂದಿಗೆ ಖಾಸಗಿ ಬಸ್ ಚಾಲಕನೊಬ್ಬ ಸ್ಕೂಟರ್ನಲ್ಲಿ ಬಂದು ಬಸ್ ಓಡಿಸಲು ಬಿಡದೆ ಕಿರಿಕಿರಿ ಮಾಡಿದರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಇತ್ತ ಅಸಭ್ಯವಾಗಿ ವರ್ತಿಸುವ ಪ್ರಯಾಣಿಕರ ವಿರುದ್ಧ ಮಾತನಾಡಿದರೇ ನೌಕರರನ್ನು ಸಕಾರಣವಿಲ್ಲದೆ ಏಕಾಏಕಿ ಅಮಾನತು ಮಾಡುವ ಅಧಿಕಾರಿಗಳು ಇಂಥ ಕಿರಿಕಿರಿ ಮಾಡುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲು ಮುಂದಾಗುವುದಿಲ್ಲ. ಇದರಿಂದ ಎರಡೂ ಕಡೆ ಚಾಲನಾ ಸಿಬ್ಬಂದಿ ಕಿರುಕುಳ ಅನುಭವಿಸುವಂತಾಗಿದೆ.
ನೋಡಿ ಇತ್ತೀಚೆಗೆ ದಾವಣಗೆರೆಯಲ್ಲಿ ಖಾಸಗಿ ಬಸ್ ಚಾಲಕಲನೊಬ್ಬ ಕೆಎಸ್ಆರ್ಟಿಸಿ ಬಸ್ ಮುಂದೆ ಹೋಗದಂತೆ ತಾನು ಸ್ಕೂಟರ್ನಲ್ಲಿ ಬಂದು ಬಸ್ ಯಾವ ಕಡೆ ಹೋಗುತ್ತದೋ ಆ ಕಡೆಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಕೆಲ ಖಾಸಗಿ ಬಸ್ನವರು ನೀಡುತ್ತಿರುವ ಈ ರೀತಿ ತೊಂದರೆ ಬಗ್ಗೆ ಘಟಕಗಳಲ್ಲಿ ನೌಕರರು ಹೇಳಿಕೊಂಡಿದ್ದಾರೆ. ಆದರೆ ಯಾವುದೇ ರೀತಿಯ ಕ್ರಮ ಜರುಗಿಸುತ್ತಿಲ್ಲ. ಇದರಿಂದ ನಿತ್ಯ ಒಂದಿಲ್ಲೊಂದು ಸಮಸ್ಯೆಯನ್ನು ಕೆಎಸ್ಆರ್ಟಿಸಿ ಚಾಲನಾ ಸಿಬ್ಬಂದಿ ಅನುಭವಿಸುವಂತಾಗಿದೆ.
ಕೆಲ ಖಾಸಗಿ ಬಸ್ ಮಾಲೀಕರು ಮಾಡಿಸುತ್ತಿರುವ ಈ ಉಪಟಳ ಮಿತಿಮೀರಿದ್ದು, ಅದರ ಬಗ್ಗೆ ಕೆಎಸ್ಆರ್ಟಿಸಿಯ ಯಾವೊಬ್ಬ ಅಧಿಕಾರಿಯೂ ತಲೆಕೆಡಿಸಿಕೊಳ್ಳದಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.
ಇತ್ತ ಈ ಕಿರಿಕಿರಿಯಿಂದ ಕರ್ತವ್ಯ ನಿರ್ವಹಿಸುವುದೇ ಕಷ್ಟಕರವಾಗುತ್ತಿದೆ ಚಾಲಕ ಮತ್ತು ನಿರ್ವಾಹಕರಿಗೆ. ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು. ಚಾಲಕ ಮತ್ತು ನಿರ್ವಾಹಕರು ನಿಮ್ಮಂತೆಯೇ ಡ್ಯೂಟಿಗೆ ಬಂದಿದ್ದಾರೆ. ಜನರ ಸೇವೆ ಮಾಡುತ್ತಿದ್ದಾರೆ. ಅಂಥ ಚಾಲಕ ಮತ್ತು ನಿರ್ವಾಹಕರಿಗೆ ಖಾಸಗಿ ವ್ಯಕ್ತಿಗಳಿಂದ ತೊಂದರೆ ಆಗುತ್ತಿದ್ದರೆ ಅದನ್ನು ನಿವಾರಿಸಬೇಕಿರುವುದು ನಿಮ್ಮ ಕರ್ತವ್ಯ.
ಅದನ್ನು ಬಿಟ್ಟು ನೀವು ಸಹ ಚಾಲಕ ಮತ್ತು ನಿರ್ವಾಹಕರಿಗೆ ಕಿರುಕುಳ ನೀಡಿ ಇನ್ನಷ್ಟು ತೊಂದರೆಗೆ ಸಲುಕಿದರೆ ಅವರು ಡ್ಯೂಟಿ ಮಾಡುವುದು ಹೇಗೆ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ನೌಕರರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಲು ಮುಂದಾಗಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ನಿಮ್ಮ ಸಾರಿಗೆ ಬಸ್ಗಳನ್ನು ದುರ್ಬಿನ್ಹಾಕಿ ಹುಡುಕಬೇಕಾದ ಕಾಲವು ಬರುವುದರಲ್ಲಿ ಅಚ್ಚರಿ ಇಲ್ಲ ಎಂದು ಪ್ರಜ್ಞಾವಂತರು ಎಚ್ಚರಿಸುತ್ತಿದ್ದಾರೆ.