ಬೆಂಗಳೂರು: ಮುಂಜಾನೆ ಎದ್ದು ಕರ್ತವ್ಯಕ್ಕೆ ಹಾಜರಾಗುವ ನೌಕರರು, ಮೊದಲು ಬಸ್ಗೆ ಅಗರಬತ್ತಿ ಹಚ್ಚಿ, ತಮ್ಮ ಇಷ್ಟ ದೇವರಿಗೆ ನಮಿಸಿ ಬಸ್ ಚಾಲನೆ ಮಾಡುತ್ತಾರೆ. ಈಗಲೂ ಹಲವಾರು ನೌಕರರು ಅದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ನಲ್ಲಿ ಪ್ರಯಾಣಿಕರೊಬ್ಬರು ಏಳು ಅಗರಬತ್ತಿ ಪ್ಯಾಕೆಟ್ ಸಾಗಿಸುತ್ತಿದ್ದನ್ನು ಏಕೆ ಪರಿಶೀಲಿಸಿಲ್ಲ ಎಂದು ನಿರ್ವಾಹಕನಿಗೆ ಕಾರಣ ಕೇಳಿ ಮೆಮೋ ನೀಡಿದ್ದಾರೆ. ಅಗರ ಬತ್ತಿಯ ವಾಸನೆಯನ್ನೇ ತಿಳಿಯದ ಇಬ್ಬರು ತನಿಖಾಧಿಕಾರಿಗಳು.
ಹೌದು, ಮೈಸೂರಿನಿಂದ ತಿರುಪತಿ ಮಾರ್ಗವಾಗಿ ಚಲುತ್ತಿದ್ದ ಕೆಎಸ್ಆರ್ಟಿಸಿ ಬಸ್ಅನ್ನು ಬಂಗಾರಪಾಳ್ಯದ ಬಳಿ ತಪಾಸಣೆ ಮಾಡಲು ಹತ್ತಿದ ಕೋಲಾರ ವಿಭಾಗದ ತನಿಖಾಧಿಕಾರಿಗಳು ತಪಾಸಣೆ ಮಾಡಿದ ಬಳಿಕ ಇಳಿಯುವಾಗ ಪ್ರಯಾಣಿಕರೊಬ್ಬರು ತೆಗೆದುಕೊಂಡು ಹೋಗುತ್ತಿದ್ದ ಅಗರಬತ್ತಿಯ ಪ್ಯಾಕೆಟ್ಗಳನ್ನು ಗಮನಿಸಿದ್ದಾರೆ.
ಅದು ಅವರು ಮನೆಗೆ ತೆಗೆದುಕೊಂಡು ಹೋಗುದ್ದರು. ಈ ವೇಳೆ ನಿರ್ವಾಹಕರನ್ನು ಕರೆದು ಏನಪ್ಪ ಇವರು ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದಾರೆ. ಈ ಬಗ್ಗೆ ನೀನು ಏಕೆ ಕೇಳಲಿಲ್ಲ ಮತ್ತು ಗಮನಿಸಿಲ್ಲ ಎಂದು ಹೇಳಿ ಮೆಮೋ ಕೊಟ್ಟಿದ್ದಾರೆ.
ಆದರೆ, ಸಾರಿಗೆ ಸಂಸ್ಥೆಯಲ್ಲಿ ಕರ್ಪೂರ ಸಾಗಿಸ ಬಾರದು ಎಂಬ ನಿಯಮವಿದೆ. ಆದರೆ, ಪ್ರಯಾಣಿಕರು ಬೀಡಿ, ಸಿಗರೇಟ್, ಬೆಂಕಿಪೊಟ್ಟಣ ಇತ್ಯಾದಿಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಹೋಗಬಾರದು ಎಂಬ ನಿಯಮವಿಲ್ಲ. ಅದನ್ನೂ ನಿಷೇಧ ಮಾಡಬೇಕಲ್ಲವೆ.
ಇನ್ನು ಅಗರಬತ್ತಿ ಸ್ಫೋಟಕ ವಸ್ತು ಎಂದು ಸಾರಿಗೆ ಸಂಸ್ಥೆ ಯಾವುದೇ ನಿಯಮದಲ್ಲಿ ಹೇಳಿಲ್ಲ. ಇದು ಸ್ಫೋಟಕ ವಸ್ತುವಲ್ಲ ಎಂಬುವುದು ಸಣ್ಣ ಮಗುವಿಗೂ ತಿಳಿದಿದೆ. ಆದರೆ ತಪಾಸಣೆಗೆ ಹೋದ ತನಿಖಾಧಿಕಾರಿಗಳಾದ ವೆಂಕಟೇಶಪ್ಪ ಮತ್ತು ಕೃಷ್ಣಪ್ಪ ಅವರು ನಿರ್ವಾಹಕನಿಗೆ ಈರೀತಿ ಮೆಮೋ ಕೊಟ್ಟಿರುವುದು ಮಾತ್ರ ಅಗರ ಬತ್ತಿ ಸ್ಫೋಟಕ ವಸ್ತು ಎಂದು.
ಇನ್ನು ಚಾಲನಾ ಸಿಬ್ಬಂದಿಗೆ ಮಾನಸಿಕವಾಗಿ ಕಿರುಕುಳ ನೀಡುವಂತಹ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ. ತಪ್ಪು ಮಾಡಿದ ನೌಕರರಿಗೆ ಶಿಕ್ಷೆ ಕೊಡಲಿ. ಆದರೆ, ಈ ರೀತಿಯ ಘಟನೆಗಳಿಗೂ ಶಿಕ್ಷೆ ನೀಡಿದರೆ ಏನು ಹೇಳಬೇಕು? ಬೆಳಗ್ಗೆ ಬಸ್ಗಳಲ್ಲಿ ಅಗರಬತ್ತಿಯ ಸುವಾಸನೆ ಬರುತ್ತಿದ್ದರೆ, ಮನಸ್ಸಿಗೆ ಮುದವಾಗುತ್ತದೆ. ಅಂಥ ಅಗರ ಬತ್ತಿ ಸಾಗಿಸುತ್ತಿದ್ದಾರೆ ಎಂದು ಈ ರೀತಿ ಮೆಮೋ ನೀಡಿರುವುದು ಎಷ್ಟು ಸರಿ?
ಇದು ಸಾರಿಗೆ ಸಂಸ್ಥೆಯ ಕೆಲ ತಪಾಸಣಾಧಿಕಾರಿಗಳೇ ಮಾಡಿಕೊಂಡಿರುವ ಹೊಸ ನಿಯಮ. ಇದು ಸಂಸ್ಥೆಯ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತದೆ. ಸಂಸ್ಥೆಯ ನಿಯಮವನ್ನು ಮೀರಿದರೆ ದಂಡ ಹಾಕಲಾಗುತ್ತದೆ. ಇನ್ನು ಮುಂದೆ ಪ್ರಯಾಣಿಕರು ಯಾರು ಕೂಡ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣ ಮಾಡಬಾರದು ಎಂಬ ನಿಯಮವನ್ನೂ ಇಂಥ ಅಧಿಕಾರಿಗಳು ಮೌಖಿಕವಾಗಿ ತರುತ್ತಾರೆ ಎಂದು ಕಿಡಿಕಾರಿದ್ದಾರೆ.
ಬಾಡಿ ಕ್ಯಾಮರಾ ಇರಲಿಲ್ಲ: ಇಂದು ತನಿಖೆಗೆ ಹೋದ ಟಿಸಿಗಳಾದ ವೆಂಕಟೇಶಪ್ಪ ಮತ್ತು ಕೃಷ್ಣಪ್ಪ ಅವರು ತಪಾಸಣೆ ವೇಳೆ ಬಾಡಿ ಕ್ಯಾಮರಾ ಅಳವಡಿಸಿಕೊಂಡಿರಲಿಲ್ಲ. ಏಕೆ ಎಂದು ಕೇಳುವ ಧೈರ್ಯವನ್ನು ನಿರ್ವಾಹಕರು ಮಾಡಿಲ್ಲ. ಇವರು ತಪಾಸಣೆ ಮಾಡಲು ಹೋಗುವಾಗ ಬಾಡಿ ಕ್ಯಾಮರಾ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.
ಆದರೆ, ಈ ನಿಮಯವನ್ನೇ ಮೀರಿ ಇವರು ನಡೆದುಕೊಳ್ಳುತ್ತಾರೆ. ಚಾಲನಾ ಸಿಬ್ಬಂದಿಗೆ ಮಾತ್ರ ಮೆಮೋ ಕೊಡುತ್ತಾರೆ. ಇವರಿಗೆ ಏಕೆ ಬಾಡಿ ಕ್ಯಾಮರಾ ಧರಿಸಿಲ್ಲ ಎಂದು ಮೆಮೋ ಕೊಡುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇದಕ್ಕೆ ಉತ್ತರ ಕೊಡಬೇಕಾದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.