CrimeNEWSನಮ್ಮರಾಜ್ಯ

NWKRTC: ಗುಳೇದಗುಡ್ಡ ಘಟಕದಲ್ಲಿ ನುಗ್ಗೆಕಾಯಿ ಕಳ್ಳತನ ಆರೋಪ – ಟಿಸಿ ಆತ್ಮಹತ್ಯೆಗೆ ಯತ್ನ

ಘಟಕಕ್ಕೆ 5 ನಿಮಿಷ ಮುಂದಾಗಿಯೂ ಹೋಗುವಂತಿಲ್ಲ, 1 ನಿಮಿಷ ತಡವಾಗಿಯೂ ಬರುವಂತಿಲ್ಲ ಡಿಎಂ ಕಿರುಕುಳ ಆರೋಪ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರ ನಿಯಂತ್ರಕ (TC)ರೊಬ್ಬರು ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆಹ್ಮಹತ್ಯೆಗೆ ಯತ್ನಿಸಿರುವ ಘಟನೆ ನಿಗಮದ ಗುಳೇದಗುಡ್ಡ ಘಟಕದಲ್ಲಿ ನಡೆದಿದೆ.

ಗುಳೇದಗುಡ್ಡ ಘಟಕದಲ್ಲಿ ಟಿಸಿ ಗಂಗಪ್ಪ ಯಮನಪ್ಪ ಕುಂಬ್ಳಾವತಿ ಎಂಬುವರೆ ಶನಿವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಘಟಕಕ್ಕೆ ಕೇವಲ ಒಂದೇಒಂದು ನಿಮಿಷ ತಡವಾಗಿ ಬಂದರೂ ಘಟಕದ ಭದ್ರತಾ ಸಿಬ್ಬಂದಿ ಮತ್ತು ಘಟಕ ವ್ಯವಸ್ಥಾಪಕರು ಕಾರಣ ಕೇಳಿ ಕಿರುಕುಳ ನೀಡುತ್ತಿದ್ದರು. ಜತೆಗೆ ತಡವಾಗಿ ಬಂದೆ ಎಂದು ಮೆಮೋ ಕೊಟ್ಟು ಮಾನಸಿಕ ನೋವು ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಇಂದು ಮಹರ್ಷಿ ವಾಲ್ಮೀಕಿ ಜಯಂತಿ ಇರುವ ಹಿನ್ನೆಲೆಯಲ್ಲಿ ಶನಿವಾರ ಘಟಕದಲ್ಲಿ ಇದ್ದ ನುಗ್ಗೆಮರದಲ್ಲಿ ನುಗ್ಗೆಕಾಯಿ ಕೀಳುತ್ತಿದ್ದಾಗ ನೀನು ಘಟಕದಲ್ಲಿರುವ ನುಗ್ಗೆಕಾಯಿ ಕಳ್ಳತನ ಮಾಡುತ್ತಿದ್ದೀಯೆ ಎಂದು ಆರೋಪಿಸಿ ಡಿಎಂ ಮೆಮೊ ಕೊಡಲು ಮುಂದಾಗಿದ್ದರಂತೆ. ಇದರಿಂದ ಮನನೊಂದು ಘಟಕದಲ್ಲೇ ವಿಷ ಸೇವಿಸಿ ಟಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಘಟಕದಲ್ಲಿ ಆಯೋಜನೆ ಮಾಡುವ ಸಂಬಂಧ ನೌಕರರಿಗೆ ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಈ ಟಿಸಿ ಗಂಗಪ್ಪ ವಹಿಸಿಕೊಂಡಿದ್ದರು. ಹೀಗಾಗಿ ಅವರು ಘಟಕದಲ್ಲೇ ಇರುವ ನುಗ್ಗೆಮರದಿಂದ ನುಗ್ಗೆಕಾಯಿ ಕೀಳಲು ಹೋಗಿದ್ದರು ಎಂದು ನೌಕರರು ತಿಳಿಸಿದ್ದಾರೆ.

ಆದರೆ, ಘಟಕ ವ್ಯವಸ್ಥಾಪಕರು ನೀನು ನುಗ್ಗೆಕಾಯಿ ಕಳವು ಮಾಡುತ್ತಿದ್ದೀಯ ಎಂಬ ಆರೋಪ ಮಾಡಿದ್ದಾರೆ. ಅಲ್ಲದೆ ಗಂಗಪ್ಪ ಅವರು 2021ರ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗವಹಿಸಿದ್ದರು ಎಂಬ ಆರೋಪ ಮೇರೆಗೆ ಅವರನ್ನು ಬೇರೆ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು.

ಎಂಡಿ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಆಗಿ ನಿಗಮದ ಎಲ್ಲ ವರ್ಗಾವಣೆಗೊಂಡ ನೌಕರರನ್ನು ಮತ್ತೆ ಅದೇ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ಅದರಂತೆ ಈ ಗಂಗಪ್ಪ ಅವರನ್ನು ಮತ್ತೆ ಮಾತೃ ಘಟಕಕ್ಕೆ ವರ್ಗಾವಣೆ ಮಾಡಿದ್ದು, ಅವರು ಗುಳೇದಗುಡ್ಡ ಘಟಕಕ್ಕೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆದರೆ, ಅವರನ್ನು ಟಾರ್ಗೆಟ್‌ ಮಾಡಿರುವ ಘಟಕದ ಭದ್ರತಾ ಸಿಬ್ಬಂದಿ ಮತ್ತು ಡಿಎಂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಘಟಕಕ್ಕೆ 5 ನಿಮಿಷ ಮುಂದಾಗಿಯೂ ಹೋಗುವಂತಿಲ್ಲ, ಒಂದು ನಿಮಿಷ ತಡವಾಗಿರುವ ಬರುವಂತಿಲ್ಲ. ಬಂದರೆ ಕಾರಣ ಕೇಳಿ ಮೆಮೋ ಕೊಡುತ್ತಿದ್ದರು. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಈ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ನೌಕರರು ತಿಳಿಸಿದ್ದಾರೆ.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ