ಹಿರಿಯೂರು: ಅಂತಾರಾಷ್ಟ್ರೀಯ ಕಾರ್ಮಿಕರ ದಿನ’ ಪ್ರಯುಕ್ತ ಮುಂಗಡವಾಗಿ ಸಾರಿಗೆ ನೌಕರರ ಸನ್ಮಾನಿಸಿದ ಶಿಕ್ಷಕರು

ಹಿರಿಯೂರು: 2025ರ ಮೇ 1ರಂದು ಬರುವ ಅಂತಾರಾಷ್ಟ್ರೀಯ ಕಾರ್ಮಿಕರ ದಿನ’ದ ಅಂಗವಾಗಿ ಇಂದು ಕೆಎಸ್ಆರ್ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರನ್ನು ಪ್ರತಿ ದಿನ ಬಸ್‌ನಲ್ಲಿ ಪ್ರಯಾಣಿಸುವ ಶಿಕ್ಷಕರು ಹಿರಿಯೂರು ಬಸ್ ನಿಲ್ದಾಣದಲ್ಲಿ ಶಾಲು ಹೂವಿನ ಹಾರಹಾಕಿ ಸನ್ಮಾನಿಸುವ ಮೂಲಕ ಗೌರವಿಸಿದರ.
ಕಠಿಣ ಪರಿಶ್ರಮ ನಿಮ್ಮನ್ನು ಎಂದಿಗೂ ಸೋಲುವುದಕ್ಕೆ ಬಿಡುವುದಿಲ್ಲ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನ ಇದಾಗಿದೆ. ಒಬ್ಬ ಕಾರ್ಮಿಕ ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಮತ್ತು ಅದ್ಭುತಗಳ ನಿರ್ಮಾತೃ.
ದುಡಿಮೆ ಮನುಷ್ಯನ ಘನತೆ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಏಣಿ. ಜೀವನದ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಶ್ರಮದಲ್ಲಿಯೇ ಬದುಕಿನ ಖುಷಿ ಕಾಣುವ ಎಲ್ಲ ಸಾರಿಗೆ ನೌಕರರಿಗೂ ನಿಮ್ಮ ದಿನದ ಶುಭಾಶಯಗಳು ಎಂದು ಮುಂಗಡವಾಗಿ ಶಿಕ್ಷಕರು ಶುಭಾಶಯಕೋರಿದರು.
ಇನ್ನು ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನ’ವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಮೇ ಡೇ, ಲೇಬರ್ ಡೇ ಹಾಗೂ ವರ್ಕರ್ಸ್ ಡೇ ಎಂತಲೂ ಕರೆಯಲಾಗುತ್ತದೆ. ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ರಕ್ಷಿಸುವುದು ಕಾರ್ಮಿಕ ದಿನದ ಉದ್ದೇಶವಾಗಿದೆ ಎಂದು ಇದೇ ವೇಳೆ ಶಿಕ್ಷಕರು ತಿಳಿಸಿದ್ದಾರೆ.
ಇನ್ನು ಇದನ್ನು 1886ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ದಿನಕ್ಕೆ ಕಾರ್ಮಿಕರಿಗೆ 8 ಗಂಟೆ ಕೆಲಸದ ಅವಧಿಯನ್ನು ನಿಗದಿ ಮಾಡಬೇಕು ಎಂಬ ಆಗ್ರಹದೊಂದಿಗೆ ಶುರುವಾದ ಚಳವಳಿಗೆ ಯಶಸ್ಸು ಸಿಕ್ಕಿತ್ತು. ಇದೇ ಹೋರಾಟದ ಕಿಚ್ಚಿನಲ್ಲಿ ಉದಯಿಸಿದ್ದೇ ಕಾರ್ಮಿಕರ ದಿನಾಚರಣೆ. ಭಾರತದಲ್ಲಿ ಈ ಆಚರಣೆ ಆರಂಭವಾಗಿದ್ದು 1923ರಲ್ಲಿ. ವಿಶ್ವದ ನಾನಾ ಭಾಗಗಳಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.
ಮೇ 1 ರಂದು ಸಮಾಜಕ್ಕಾಗಿ ಕಾರ್ಮಿಕರ ಕೊಡುಗೆ ಹಾಗೂ ತ್ಯಾಗವನ್ನು ಸ್ಮರಿಸಲಾಗುತ್ತದೆ. ಭಾರತದಲ್ಲಿ ಇದನ್ನು ‘ಮೇ ದಿನ’ ಎಂದು ಕರೆಯುತ್ತಾರೆ. ದೇಶದಲ್ಲಿ ಮೊದಲ ಕಾರ್ಮಿಕ ದಿನವನ್ನು ಮೇ 1, 1923 ರಂದು ಮದ್ರಾಸಿನಲ್ಲಿ ಆಚರಿಸಲಾಯಿತು. ಇದನ್ನು ಕಾಮ್ರೇಡ್ ಸಿಂಗರವೇಲರ್ ನೇತೃತ್ವದ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆರಂಭಿಸಿತ್ತು. ಅಂದಿನಿಂದ ಈವರೆಗೆ ಭಾರತದಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ ಮತ್ತು ರಾಷ್ಟ್ರೀಯ ರಜೆ ಘೋಷಿಸಲಾಗಿದೆ. ಇದು 141ನೇ ವರ್ಷದ ಅಂತಾರಾಷ್ಟ್ರೀಯ ಕಾರ್ಮಿಕರ ದಿನವಾಗಿದೆ.
ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಉದಾಹರಣೆಗೆ ಹಿಂದಿಯಲ್ಲಿ ‘ಅಂತಾರಾಷ್ಟ್ರೀಯ ಶ್ರಮಿಕ್ ದಿವಸ್’, ಕಾರ್ಮಿಕ ದಿನಚರಣೆ (ಕನ್ನಡ), ಕಾರ್ಮಿಕ ದಿನೋತ್ಸವಮ್ (ತೆಲುಗು), ಕಮ್‌ಗರ್ ದಿವಸ್ (ಮರಾಠಿ), ಉಜೈಪಾಲರ್ ದೀನಂ (ತಮಿಳು), ತೊಝಿಲಾಲಿ ದಿನಂ (ಮಲಯಾಳಂ), ಮತ್ತು ಶ್ರೋಮಿಕ್ ದಿಬೋಶ್ (ಬಂಗಾಳಿ) ಎಂದು ಕರೆಯುತ್ತಾರೆ.
ಕಾರ್ಮಿಕ ದಿನದ ಇತಿಹಾಸ: ಅಮೆರಿಕದ ಕಾರ್ಮಿಕರು, ಕಠೋರ ಕಾರ್ಮಿಕ ನಿಯಮ, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಮತ್ತು ಭಯಾನಕ ಕೆಲಸದ ವೇಳೆಯ ವಿರುದ್ಧ ಪ್ರತಿಭಟನೆ ಆರಂಭಿಸಿದರು. ದಿನಕ್ಕೆ 8 ಗಂಟೆ ಕೆಲಸ ನಿಗದಿಗೊಳಿಸಬೇಕೆಂಬ ಈ ಚಳವಳಿ 1860ರಿಂದ ಆರಂಭವಾಯಿತು. ಚಳವಳಿಗಾಗಿ ಅಮೆರಿಕ ಹಾಗೂ ಕೆನಡಾದಲ್ಲಿ ಹಲವು ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು.
ದಿನಕ್ಕೆ 10 ರಿಂದ 14 ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳುವುಕ್ಕೆ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಶಿಕಾಗೋ ನಗರ ಸಾವಿರಾರು ಕಾರ್ಮಿಕ ಸಂಘಟನೆಗಳ ಕೇಂದ್ರವಾಗಿ ಮಾರ್ಪಟ್ಟಿತು. 1886 ಮೇ 1 ಕಾರ್ಮಿಕ ಹೋರಾಟದ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಲಕ್ಷಾಂತರ ಮಂದಿ ಕಾರ್ಮಿಕರು 8 ಗಂಟೆಗಳ ಕೆಲಸದ ನಿಗದಿಗೆ ಪ್ರತಿಭಟನೆ ಪ್ರಾರಂಭಿಸಿದ್ದರು.
ಈ ಹೋರಾಟದಲ್ಲಿ ಎಷ್ಟೋ ಕಾರ್ಮಿಕರು ಪ್ರಾಣ ತ್ಯಾಗ ಮಾಡಬೇಕಾಯಿತು. ಹೀಗಾಗಿ 1916 ರವರೆಗೂ ಅಮೆರಿಕ 8 ಗಂಟೆಗಳ ಕೆಲಸ ಸಮಯವನ್ನು ನಿಗದಿಗೊಳಿಸಿತು. ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥವಾಗಿ ಮೇ 1 ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ. ಈ ಬಲಿದಾನಗಳ ಫಲವಾಗಿ ಕೆಲಸದ ಅವಧಿ ಇಂದು ವಿಶ್ವದ ಅನೇಕ ದೇಶಗಳಲ್ಲಿ 8 ಗಂಟೆಗಳಿಗೆ ಮಿತಿಗೊಂಡಿದೆ.
Related

You Might Also Like
NWKRTC: UPI ಮೂಲಕ ಹೆಚ್ಚು ಟಿಕೆಟ್ ವಿತರಿಸಿದ ನಿರ್ವಾಹಕರ ಅಭಿನಂದಿಸಿದ ಎಂಡಿ ಪ್ರಿಯಾಂಗಾ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪ್ರಯಾಣಿಕರಿಗೆ UPI ಮೂಲಕ ಹೆಚ್ಚು ಟಿಕೆಟ್ ವಿತರಣೆ ಮಾಡಿದ ನಿರ್ವಾಹಕರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಪ್ರಶಂಸನಾ...
KKRTC ಅಧಿಕಾರಿ-ಸಿಬ್ಬಂದಿಗಳು ಕಚೇರಿಗೆ ಭೇಟಿ ನೀಡುವಾಗ ಈ ನಿಯಮ ಪಾಲಿಸಬೇಕು: ಸಂಸ್ಥೆಯ ಎಂಡಿ ಸುಶೀಲಾ ನಿರ್ದೇಶನ
ಕಲಬುರಗಿ: ನಿಗಮದ ಅಧಿಕಾರಿ-ಸಿಬ್ಬಂದಿಗಳು ವೈಯಕ್ತಿಕ ಕಾರ್ಯಗಳಿಗಾಗಿ ಕಚೇರಿಗೆ ಭೇಟಿ ನೀಡುವಾಗ ಈ ನಿಯಮಗಳನ್ನು ಪಾಲಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸುಶೀಲಾ...
KSRTC ಬಡ ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಸಲ್ಲ: ಸಾರಿಗೆ ಸಚಿವರು ಪರಿಶೀಲಿಸಿ- ಅಧಿವೇಶನದಲ್ಲಿ ಶಾಸಕರ ಆಗ್ರಹ
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಿಂದ ಕರ್ನಾಟಕ ರಾಜ್ಯ ಅತ್ಯವಶ್ಯಕ ಸೇವೆ ವಿಧೇಯಕವನ್ನು ಮಂಡಿಸುವ ಸಂದರ್ಭದಲ್ಲಿ ರಾಜ್ಯದ ಸಾರಿಗೆ ನೌಕರರ ಮೇಲೆ ಎಸ್ಮಾ ಕಾಯಿದೆಯನ್ನು ಜಾರಿ ಮಾಡುತ್ತಿರುವ ಬಗ್ಗೆ...
BMTC ಬಸ್ ಬಾಗಿಲಿಗೆ ಸಿಲುಕಿದ ಕೈ- ಬಿದ್ದು ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಮೃತಪಟ್ಟಿರುವ ಘಟನೆ ಇಂದು ಜಯನಗರದ 4ನೇ ಬ್ಲಾಕ್ನಲ್ಲಿ ನಡೆದಿದೆ. ಸಂಪಂಗಿ (64) ಮೃತಪಟ್ಟವರು....
ರೀಲ್ಸ್, ವಿಡಿಯೋ ಮಾಡುವ ವಕೀಲರಿಗೆ ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟ ವಕೀಲರ ಪರಿಷತ್
ಬೆಂಗಳೂರು: ವೃತ್ತಿನಿರತ ವಕೀಲರು ತಮ್ಮನ್ನು ತಾವೇ ಉನ್ನತೀಕರಿಸಿಕೊಳ್ಳುವಂತಹ ಪ್ರಚಾರದ ಯಾವುದೇ ರೀಲ್ಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದರೆ ಅಂತಹ ಆಕ್ಷೇಪಾರ್ಹ ರೀಲ್ಗಳು, ವಿಡಿಯೋಗಳನ್ನು...
KKRTC ಬಸ್ – ಟಿಪ್ಪರ್ ನಡುವೆ ಭೀಕರ ಅಪಘಾತ: ಕಂಡಕ್ಟರ್ ಸ್ಥಳದಲ್ಲೇ ಸಾವು, ಚಾಲಕ ಸೇರಿ ಹಲವರಿಗೆ ಗಾಯ
ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಚಿಲಕನಹಟ್ಟಿ (ಮರಿಯಮ್ಮನಹಳ್ಳಿ)...
KSRTC ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ: 2035ರವರೆಗೆ ಎಸ್ಮಾ ವಿಸ್ತರಣೆ – ಚರ್ಚೆ ಇಲ್ಲದೇ ಸದನದಲ್ಲಿ ವಿಧೇಯಕ ಅಂಗೀಕಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಸ್ಮಾ ಕಾಯ್ದೆ 10 ವರ್ಷಗಳ ಅವಧಿಗೆ ವಿಸ್ತರಣೆಯಾಗುವ ಅತ್ಯಾವಶ್ಯಕ...
ರೈತರ ಸಮಸ್ಯೆ ಬಗೆ ಹರಿಸಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ರೈತ ಮುಖಂಡರ ಪ್ರತಿಭಟನೆ
ಮೈಸೂರು: ರೈತರ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ , ರಾಜ್ಯ ಕಬ್ಬು ಬೆಳೆಗಾರರ ಸಂಘದ...
KSRTC ನೌಕರರ ಸಾಮಾನ್ಯ ಮರಣ ಪ್ರಕರಣಕ್ಕಿದ್ದ 10 ಲಕ್ಷ ರೂ. ಪರಿಹಾರ ಮೊತ್ತ 14 ಲಕ್ಷ ರೂ.ಗಳಿಗೆ ಏರಿಸಿ ಎಂಡಿ ಆದೇಶ
ಪರಿಷ್ಕರಿಸಿದ 14 ಲಕ್ಷ ರೂ. ಪರಿಹಾರ ಮೊತ್ತ ಸೆಪ್ಟೆಂಬರ್ 1-2025ರಿಂದ ಜಾರಿ ಬೆಂಗಳೂರು: 10 ಲಕ್ಷ ರೂ.ಗಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕುಟುಂಬ...