ಬೆಂಗಳೂರು ಗ್ರಾಮಾಂತರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಳೆ ಅಕ್ಟೋಬರ್ 17 ರಂದು ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯತಿಯ ಆಚಾರ್ಲಹಳ್ಳಿ(ಬೆಟ್ಟದ ಕ್ರಾಸ್)ಯಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸಿದೆ.
ಸಂಜೆ 4 ಗಂಟೆಗೆ ಆರೋಗ್ಯ,ಕುಟುಂಬ ಕಲ್ಯಾಣ,ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಕಾರ್ಯಕ್ರಮ ಉದ್ಘಾಟಿಸುವರು. ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜ(ಎಂ.ಟಿ.ಬಿ.) ಉಪಸ್ಥಿತರಿರುವರು. ದೇವನಹಳ್ಳಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್.ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಸಂಸದರು, ಶಾಸಕರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು.
ಡಿ.ಆರ್.ನಿರ್ಮಲ ಅವರ ಸುಗಮ ಸಂಗೀತ,ಭಾರತಿ ಅವರ ಜನಪದ ಗೀತೆ,ಕವಿತಾ ಮತ್ತು ತಂಡದವರ ನೃತ್ಯ ರೂಪಕ,ಅಂಜಿನಪ್ಪ ಮತ್ತು ತಂಡದ ಪಂಡರಿ ಭಜನೆ,ಸೋಮಶೇಖರ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ.
ಸುಬ್ರಮಣ್ಯಚಾರ್ಯ ಅವರ ಕಥಾ ಕೀರ್ತನೆ, ತಿಮ್ಮರಾಜು ತಂಡದವರ ತಮಟೆ ವಾದನ, ಎಚ್.ರಾಜಶೇಖರ ತಂಡದವರ ಗಾರುಡಿಗೊಂಬೆ, ನಾಗರಾಜು ತಂಡದಿಂದ ಹುಲಿವೇಷ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ ತಿಳಿಸಿದ್ದಾರೆ.