ಒಂದು ಸಂದರ್ಭ ನನ್ನ ಮನಸ್ಸಿಗೆ ಜ್ಞಾಪಕಕ್ಕೆ ಬರುತ್ತಿದೆ. .!!!.ಒಮ್ಮೆ ನಾನು ಎನ್.ಆರ್.ಪುರ – ಮೈಸೂರು ಮಾರ್ಗದಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ. ಆ ವೇಳೆ ಒಬ್ಬ ಹಿರಿಯ ಪ್ರಯಾಣಿಕ ಯಜಮಾನರು ನಮ್ಮ ಕೆಎಸ್ಸಾರ್ಟಿಸಿ ಬಸ್ ಬಣ್ಣದ ಬಗ್ಗೆ ನನ್ನನ್ನು ಪ್ರಶ್ನೆ ಮಾಡಿದರು.
ಆಗ ನಾನು ಹೊಸಬ; ಅವರಿಗೆ ಈ ಬಣ್ಣದ ಬಗ್ಗೆ ನನಗೆ ಏನು ತಿಳಿದಿರುವುದಿಲ್ಲ ಸಾರ್!! ಎಂದು ಹೇಳಿದೆ. ಆಗ ಅವರು ಕೆಲವು ಸೆಕೆಂಡುಗಳ ನಂತರ ಪರಂಬರಿಸಿ ನನಗೆ ಹೇಳಿದರು. ಅದೇನೆಂದರೆ ಈ ಬಸ್ಸಿನ ಬಣ್ಣ ಕೆಂಪು ಮತ್ತು ಅರಿಶಿನದಿಂದ ಕೂಡಿರುತ್ತದೆ ಅದು ನಮ್ಮ ಮೈಸೂರು ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಹಣೆಗಿಟ್ಟ ಕುಂಕುಮ ಅರಿಶಿಣದ ಬಣ್ಣವಾಗಿದೆ ಎಂದು.
ಇನ್ನು ಮಾತು ಮುಂದುವರಿಸಿದ ಅವರು, ಈ ಬಣ್ಣವನ್ನು ಅಂದಿನ ಕಾಲದ ಮಹಾರಾಜರು ಹಾಗೂ ಆ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನು ಕರೆಸಿ ಟಾಟಾ ಕಂಪನಿಯಿಂದ ಗರಿಷ್ಠ 19 (ಸರಿಯಾದ ನಿರ್ದಿಷ್ಟ ಮಾಹಿತಿ ಇಲ್ಲ )ಬಸ್ಸುಗಳನ್ನು ಪಡೆದು ಎಂಎಸ್ಆರ್ ಸಿ ಎಂದು ನಾಮಕರಣ ಮಾಡಿ ಸಾರ್ವಜನಿಕರ ಸೇವೆಗೆ ಬಳಸಿದರಂತೇ.
ಆಗಿನಿಂದ ಈಗಿನವರೆಗೂ ಕೆಎಸ್ಸಾರ್ಟಿಸಿ ಬಸ್ಸಿನ ಬಣ್ಣ ಕೆಂಪು ಮತ್ತು ಅರಿಶಿನದಿಂದ ಕೂಡಿದೆ. ಹೌದು! ಅಂದಿನಿಂದ ಈವರೆವಿಗೂ ಅದೇ ಬಣ್ಣದಿಂದ ಈ ಕೆಎಸ್ಆರ್ಟಿಸಿ ಬಸ್‌ಗಳು ಓಡಾಡುತ್ತಿವೆ. ಅಲ್ಲದೆ ಅಂದಿನ ಸಂದರ್ಭದಲ್ಲಿಯೇ ಮೈಸೂರು ಮಹಾರಾಜರ ಧರ್ಮ ಲಾಂಛನವಾದ ಗಂಡುಬೇರುಂಡದ ಮಹತ್ವವನ್ನು ಕೂಡ ಅವರು ತನಗೆ ತಿಳಿಸಿ!! ಇದು” ಸತ್ಯ ಮತ್ತು ಧರ್ಮದ “ಸಂಕೇತವೆಂದು ವಿವರಿಸಿದರು.
ಹೀಗಾಗಿ ನೀವು ಕೂಡ ಈ ಸಂಸ್ಥೆಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ತನಗೆ ಆ ಸಂದರ್ಭದಲ್ಲಿ ಆ ಮಹಾತ್ಮರು ತನಗೆ ತಿಳಿಸಿದರು… ತಾನೂ ಕೂಡ ಒಬ್ಬ ಸಮಾಜಮುಖಿ ಚಿಂತಕನಾಗಿರುವುದರಿಂದ ಹಾಗೂ ನಾನು ಬಹಳ ಕಡುಬಡತನದ ಕುಟುಂಬದಿಂದ ಬಂದವನಾಗಿದ್ದೇನೆ.
ಇನ್ನು ನನ್ನ ಗುರುಗಳಾದ ಬರಗೂರು ರಾಮಚಂದ್ರಪ್ಪನವರ ಅಣ್ಣನವರಾದ ಚಿಕ್ಕ ರಂಗಪ್ಪ ಹಾಗೂ ಜಯರಾಮಯ್ಯ ಅವರು ನನ್ನ ಶಿಕ್ಷಣದ ಗುರುಗಳಾಗಿದ್ದು ಅವರು ನೀಡಿದ ನೈತಿಕ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಇವರ ವಿಚಾರದ ವಿಷಯವನ್ನು ಹೆಚ್ಚು ಅರಿತು! ಅಂದಿನಿಂದಲೇ ನಾನು ಹೆಚ್ಚು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಈ ಸಂಸ್ಥೆಯಲ್ಲಿ ಈವರೆವಿಗೂ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ.
ಪ್ರಸ್ತುತ ದಿನಗಳಲ್ಲಿ ಇಂದಿನ ರಾಜಕೀಯ ವ್ಯವಸ್ಥೆಯನ್ನು ಕೂಡ ಗಮನದಲ್ಲಿಟ್ಟುಕೊಂಡು ಬಹಳ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದರ ಪರಿಕಲ್ಪನೆ ಇಂದಿನ ರಾಜಕಾರಣಿಗಳಿಗೆ ಹಾಗೂ ನಮ್ಮ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಮಂತ್ರಿಗಳಿಗೆ ಈವರೆವಿಗೂ ಅರಿವಿಗೆ ಬಂದಿದೆಯೋ ಇಲ್ಲವೋ ಅವರಿಗೆ ತಿಳಿದಿರುವುದಿಲ್ಲ ಎಂಬ ನಂಬಿಕೆ ನನಗಿದೆ.
ಇನ್ನು ಆ ನಿಷ್ಠೆ ಪ್ರಾಮಾಣಿಕತೆ ತೋರದಿರುವುದರಿಂದಲೋ ಏನು ಗೊತ್ತಿಲ್ಲ. ಆದರೆ, ನಮ್ಮ ಸಾರಿಗೆ ಮಂತ್ರಿಗಳು ಆದವರು ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬರದೇ ಅಪರೂಪ, ಇದಕ್ಕೆ ಹಿಂದಿನ ಸಾರಿಗೆ ಮಂತ್ರಿಗಳೇ ತಾಜ ನಿದರ್ಶವಾಗಿ ಈಗಲು ನಮ್ಮ ಕಣ್ಣ ಮುಂದೆ ಇದ್ದಾರೆ.
ನೋಡಿ ನಮ್ಮ ಸಾರಿಗೆ ಕಾರ್ಮಿಕರಿಗೆ ಕೊಟ್ಟ ನೋವು ಸಂಕಟಗಳಿಂದ ಅವರು ಪುನಃ ಗೆದ್ದು ಬರಲಾರರು..ಇದು ಸಹ ಒಂದು ಶ್ರೀ ಚಾಮುಂಡೇಶ್ವರಿಯ ಪವಾಡ ವಿರಬಹುದು.! ಆದ್ದರಿಂದ ದಯಮಾಡಿ ನಮ್ಮನ್ನು ಹಾಳುವ ಪ್ರಭುಗಳೆ… ಇನ್ನಾದರೂ ನಮಗೆ ನ್ಯಾಯವಾದ ವೇತನವನ್ನು ನೀಡಿ… ನಮ್ಮ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ! ನಮಗೆ ನ್ಯಾಯ ಪರವಾದ ವೇತನವನ್ನು ನೀಡಿ. ನಿಮಗೆ ವಂದನಾ ಪೂರ್ವಕವಾಗಿ ಬೇಡಿಕೊಳ್ಳುತ್ತೇವೆ.. !!
ಇಂತಿ ನಿಮ್ಮ
( social thinker ) ಯ.ಪು. ಚಿ.