ಉದ್ಯೋಗದೇಶ-ವಿದೇಶನಮ್ಮರಾಜ್ಯ

 ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ: ಆಯ್ಕೆಯಾದವರಿಗೆ 35 ಸಾವಿರ ರೂ. ವೇತನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶಾಸಕಾಂಗ ಇಲಾಖೆಯಲ್ಲಿ ಕಚೇರಿ ಸಹಾಯಕರ ಹುದ್ದೆಗಳು ಖಾಲಿ ಖಾಲಿ ಹೊಡೆಯುತ್ತಿದ್ದು ಆಸಕ್ತಿ ಇರುವವರು ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಪ್ರಯೋಜನ ಪಡೆಯಬಹುದು.

ಇನ್ನು ಕೆಲವೇ ಕೆಲವು ಉದ್ಯೋಗಗಳಿಗೆ ಆಹ್ವಾನ ಮಾಡಿರುವ ಇಲಾಖೆ, ಇ- ಮೇಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಉದ್ಯೋಗಗಳನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಕೇಂದ್ರ ಸರ್ಕಾರದಡಿ ಕೆಲಸ ಮಾಡಲು ಇಚ್ಛಿಸಿದ್ದಲ್ಲಿ, ಇಲ್ಲಿ ತಿಳಿಸಲಾದ ಎಲ್ಲವನ್ನು ಅರಿತುಕೊಂಡು ಕೂಡಲೇ ಅರ್ಜಿ ಸಲ್ಲಿಸಬಹುದಾಘಿದೆ.

ಇತ್ತ ಕೆಲವೇ ಕೆಲವು ಉದ್ಯೋಗಗಳು ಇರುವುದರಿಂದ ಬೇಗ ಅರ್ಜಿಹಾಕುವುದು ಉತ್ತಮ. ಹೌದು! ಭಾರತ ಸರ್ಕಾರದಡಿ ಬರುವ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧೀನ ಶಾಸಕಾಂಗ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ.

ಈ ಸಂಬಂಧ ಇಲಾಖೆಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ಮಾಡುವವರು ಕೇಳಿರುವ ಎಲ್ಲ ದಾಖಲೆಗಳನ್ನು ಲಗತ್ತಿಸಿ ಇಮೇಲ್ ಮೂಲಕ ಕಳುಹಿಸಬಹುದು. ಇಮೇಲ್- prashant.bhardwaj78@gov.in. ಆಫ್​ಲೈನ್ ಮೂಲಕವು ಅರ್ಜಿ ಸಲ್ಲಿಕೆ ಮಾಡಬಹುದು.

ಉದ್ಯೋಗ ಹೆಸರು– ಕಚೇರಿ ಸಹಾಯಕರು

ಒಟ್ಟು ಎಷ್ಟು ಹುದ್ದೆಗಳು- 05

ವಯೋಮಿತಿ- 21- 40 ವರ್ಷ

 ಮಾಸಿಕ ವೇತನ ಶ್ರೇಣಿ- 35,000

ಶೈಕ್ಷಣಿಕ ಅರ್ಹತೆ- ಯಾವುದೇ ಪದವಿ, ಬಿ.ಟೆಕ್, ಬಿಸಿಎ ಅಥವಾ 1 ವರ್ಷದ ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಶನ್‌

ಕಚೇರಿಯಲ್ಲಿ ಕೆಲಸ ಏನು?: ದಾಖಲಾತಿ ಸ್ಕ್ಯಾನಿಂಗ್, ಆಡಳಿತ, ರೆಕಾರ್ಡ್‌ ನಿರ್ವಹಣೆಗಳಲ್ಲಿ 2 ವರ್ಷದ ಅನುಭವ ಇರಬೇಕು. ಎಂಎಸ್‌ ಆಫೀಸ್, ಎಂಎಸ್‌ ವರ್ಲ್ಡ್‌, ಎಕ್ಸೆಲ್, ಪವರ್‌ ಪಾಯಿಂಟ್ ಬಳಕೆ ಗೊತ್ತಿರಬೇಕು.

26 ಮಾರ್ಚ್ 2025 ಪ್ರಕಟಣೆ ಹೊರಡಿಸಿದ್ದು,  ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 10/ 04/ 2025 (ಈ ಉದ್ಯೋಗ ಪ್ರಕಟಣೆ ಮಾಡಿದ 15 ದಿನಗಳ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು)

ಉದ್ಯೋಗದ ಮಾಹಿತಿಯ ಲಿಂಕ್: https://cdnbbsr.s3waas.gov.in/s380537a945c7aaa788ccfcdf1b99b5d8f/uploads/2025/03/20250326329109146.pdf

Deva
the authorDeva

Leave a Reply

error: Content is protected !!
Latest news
ಟನ್‌ ಕಬ್ಬಿಗೆ 4500 ರೂ. ನಿಗದಿಗೊಳಿಸಿ: ಕೇಂದ್ರ ಸರ್ಕಾರಕ್ಕೆ ಅತ್ತಹಳ್ಳಿ ದೇವರಾಜ್ ಆಗ್ರಹ ಟನ್‌ ಕಬ್ಬಿಗೆ 3650 ರೂ. ಎಫ್ಆರ್‌ಪಿ ದರ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಸಲ್ಲ- 4500 ರೂ. ನಿಗದಿಗೊಳಿಸಬೇಕು: ಕ... KKRTC ವಿಜಯಪುರ: ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಭ್ರಷ್ಟಾಚಾರ ಸಾಬೀತು- ಆದರೂ ಕ್ರಮ ತೆಗೆದುಕೊಳ್ಳದ ಎಂಡ... KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ! EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ KSRTC: ಫ್ರೀಡಂ ಪಾರ್ಕ್‌ನಲ್ಲಿ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ- ಸರ್ಕಾರ... ಗೆದ್ದ3ವರ್ಷದ ಬಳಿಕ ಶಾಸಕರಾದ ಜೀವರಾಜ್: ಅಧಿಕಾರಿಗಳ ಎಡವಟ್ಟಿಗೆ ಸೋತರು 3ವರ್ಷ ಶಾಸಕರಾಗಿದ್ದ ರಾಜೇಗೌಡ KSRTC: ಇಂದು ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡಲು ಆಗ್ರಹಿಸಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KSRTC: ನಾಳೆ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ