Friday, November 1, 2024
CrimeNEWSದೇಶ-ವಿದೇಶ

ಹೆಲ್ಮೆಟ್ ವಿರುದ್ಧ ಕೋರ್ಟ್ ನಲ್ಲಿ ಸುದೀರ್ಘಕಾಲ ಹೋರಾಡಿದ್ದ ವಕೀಲ ಹೆಲ್ಮೆಟ್ ಧರಿಸದೆ ಅಪಘಾತದಲ್ಲಿ ಮೃತ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಫ್ಲೋರಿಡಾ: ಹೆಲ್ಮೆಟ್ ವಿರುದ್ಧ ಹೋರಾಟವನ್ನು ನಡೆಸಿದ್ದ ವಕೀಲರೊಬ್ಬರು ದುರದೃಷ್ಟ ಎಂಬಂತೆ ಅಪಘಾತದಲ್ಲಿ ಮೃತಪಟ್ಟಿದ್ದು, ಹೆಲ್ಮೆಟ್ ಇಲ್ಲದೆ ತಲೆಗೆ ಪೆಟ್ಟಾಗಿ ಮೃತಪಟ್ಟ ಘಟನೆ ಫ್ಲೋರಿಡಾದಲ್ಲಿ ವರದಿಯಾಗಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಫ್ಲೋರಿಡಾದ 66 ವರ್ಷದ ರಾನ್ ಸ್ಮಿತ್ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು,ಈ ವೇಳೆ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನುವುದು ತಿಳಿದು ಬಂದಿದೆ. ವಾಹನ ದಟ್ಟಣೆ ಮಧ್ಯೆ ಎದುರಿಗಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಾನ್ ಸ್ಮಿತ್ ಜೋರಾಗಿ ಬ್ರೇಕ್ ಹಾಕಿದ್ದಾರೆ.ಇದರಿಂದ ಬೈಕ್ ನಿಂದ ಬಿದ್ದ ರಾನ್ ಸ್ಮಿತ್ ಗಂಭೀರವಾಗಿ ತಲೆಗೆ ಗಾಯಗೊಂಡು ಮೃತಪಟ್ಟಿದ್ದಾರೆ.

2000ನೇ ಇಸವಿಯ ವೇಳೆ ಪ್ಲೋರಿಡಾದಲ್ಲಿ ಹೆಲ್ಮೆಟ್ ಕುರಿತ ಚರ್ಚೆಯ ವೇಳೆ ಭಾರೀ ವಿವಾದ ಉಂಟಾಗಿತ್ತು.ಈ ವೇಳೆ ಸ್ಮಿತ್,ಪ್ರತಿಯೊಬ್ಬರೂ ತಮ್ಮದೇ ಆದ ಆಯ್ಕೆಯನ್ನು ಹೊಂದಿರಬೇಕು ಎಂದು ಹೋರಾಟ‌ ನಡೆಸಿದ್ದರು.

ಸುಮಾರು ಒಂದು ದಶಕದವರೆಗೆ,ಫ್ಲೊರಿಡಾದ ಪಿನೆಲ್ಲಾಸ್ ಕೌಂಟಿಯ ಅಟಾರ್ನಿ ಆಗಿದ್ದ ರಾನ್ ಸ್ಮಿತ್, ಹೆಲ್ಮೆಟ್‌ಗಳನ್ನು ಧರಿಸಬೇಕು ಎಂದು ಹೇಳುವ ಕಾನೂನುಗಳ ವಿರುದ್ಧ ಹೋರಾಡಿದ್ದರು. ಅಂತಿಮವಾಗಿ, ರಾಜ್ಯದ ಕಾನೂನು ಬದಲಾಗಿತ್ತು.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...