NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

ಸಾರಿಗೆ ನೌಕರರಿಗೆ ಅನ್ಯಾಯ: ಸರ್ಕಾರದ ಜತೆ ಕೈ ಜೋಡಿಸಿದ ಆ ಸಂಘಟನೆಗಳು ನಾಚಿಕೆಗೇಡು ಎಂದ ಆರ್‌. ಎಸ್‌.ಕುಲಕರ್ಣಿ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ಸಾರಿಗೆ ನೌಕರರಿಗೆ ವೇತನ ಶ್ರೇಣಿಯ ಪರಿಷ್ಕರಣೆ ಆಗಬೇಕೇ ಹೊರತು ವೇತನ ಪರಿಷ್ಕರಣೆ ಆಗಬಾರದು ಎಂದು ಎಐಟಿಯುಸಿ ಬಾಗಲಕೋಟೆಯ ಮಾಜಿ ಪದಾಧಿಕಾರಿ ಆರ್‌.ಎಸ್‌.ಕುಲಕರ್ಣಿ ಹೇಳಿದ್ದಾರೆ.

ಸಾರಿಗೆ ನೌಕರರ ಕೂಟ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬೃಹತ್‌ ಸೈಕಲ್‌ ಜಾಥಾವನ್ನು ಬಾಲಗಕೋಟೆಯಲ್ಲಿ ಸ್ವಾಗತಿಸುವ ಮೂಲಕ ಪ್ರೋತ್ಸಾಹ ನೀಡಿದ ಅವರು ಬಳಿಕ ಮಾತನಾಡಿ, ಸರ್ಕಾರ ಕಳೆದ 2016ರ ವರೆಗೂ ಏಕಪಕ್ಷೀಯವಾಗಿ ವೇತನ ಪರಿಷ್ಕರೆಣೆ ಮಾಡಿತು. ಅದನ್ನು ವಿರೋಧಿಸಬೇಕಾದ ಆ ಸಂಘಟನೆಗಳು ಸರ್ಕಾರಕ್ಕೆ ಸಾಥ್‌ ನಿಡುವ ಮೂಲಕ ನೌಕರರನ್ನು ಬೀದಿ ತಂದು ನಿಲ್ಲಿಸಿವೆ, ಇದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಶೇ.5, ಶೇ.6 ಹೀಗೆ ಭಿಕ್ಷೆಯ ರೀತಿಯಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಿವೆ. ಕೈಗಾರಿಕೆ ಒಪ್ಪಂದದ ಮೂಲಕ ದ್ವಿಪಕ್ಷೀಯ ಮಾತುಕತೆ ಮಾಡಬೇಕಿತ್ತು. ಆದರೆ ಅದನ್ನು ಗಾಳಿ ತೂರಿದ ಸರ್ಕಾರಕ್ಕೆ ಆ ಸಂಘಟನೆಗಳು ಸಾಥ್‌ ನೀಡಿದ್ದರಿಂದ ಇಂದು ನೌಕರರು ಸರ್ಕಾರಿ ನೌಕರರಿಗಿಂತ ಶೇ.40ರಷ್ಟು ವೇತನ ಕಡಿಮೆ ಪಡೆಯುವಂತಾಗಿದೆ ಎಂದು ಕಿಡಿಕಾರಿದರು.

ಇತ್ತ ಸರಿಯಾಗಿ ವೇತನವು ಇಲ್ಲದೆ ಇವರ ಅವೈಜ್ಞಾನಿಕ ನಡೆಯಿಂದ ನೌಕರರು ಸರಿಯಾಗಿ ಕೆಲಸ ಮಾಡಲು ಈಗ ಸಾಧ್ಯವಾಗುತ್ತಿಲ್ಲ, ಆತ್ಮಹತ್ಯೆ, ಕಿರುಕುಳಗಳು ಹೆಚ್ಚಾಗುತ್ತಿವೆ ಇದಕ್ಕೆ ಯಾರು ಕಾರಣ ಎಂದು ಎಲ್ಲರಿಗೂ ತಿಳಿದಿದೆ ಅದನ್ನು ಬಿಡಿಸಿ ಹೇಳಬೇಕಿಲ್ಲ ಎಂದು ಹೇಳಿದರು.

ಇನ್ನು 2000-2004-2008-2012-2016ರಲ್ಲಿ ಏಕ ಪಕ್ಷೀಯ ವೇತನ ಪರಿಷ್ಕರಣೆ ಮಾಡಿದ್ದರಿಂದ ಈ ಸಮಸ್ಯೆಯನ್ನು ನಾವು ಇಂದು ಎದುರಿಸುತ್ತಿದ್ದೇವೆ. ಈ ಹಿಂದೆ ಅಂದರೆ 1992ರಿಂದ 2000ರ ವರೆಗೂ ವೇತನ ಶ್ರೇಣಿ ಪರಿಷ್ಕರಣೆ ಆಗಿದ್ದರಿಂದ ನಾವು ಅಂದು ಸರ್ಕಾರಿ ನೌಕರರಿಗಿಂತಲೂ ಹೆಚ್ಚು ವೇತನ ಪಡೆಯುತ್ತಿದ್ದೇವು.

ಅದರ ನಂತರ ನಮಗೆ ಕೇವಲ ವೇತನವಷ್ಟೇ ಪರಿಷ್ಕರಣೆ (ವೇತನ ಶ್ರೇಣಿಯಲ್ಲ) ಆಗಿದ್ದರಿಂದ ಇಂದು ಈ ಸ್ಥಿತಿ ಬಂದಿದೆ. ಇದಕ್ಕೆ ಸಾಥ್‌ ನೀಡಿರುವುದು ಆ ಸಂಘಟನೆಗಳು. ಹೀಗಾಗಿ ಇನ್ನು ಮುಂದೆ ಈ ರೀತಿ ವೇತನ ಪರಿಷ್ಕರಣೆ ಆಗಬಾರದು. ವೇತನ ಶ್ರೇಣಿಯಲ್ಲಿ ಪರಿಷ್ಕರಣೆ ಅಗಬೇಕು ಎಂದು ಆಗ್ರಹಿಸಿದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ