ನ್ಯೂಡೆಲ್ಲಿ: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಬಿಹಾರ ಹಾಗೂ ತೆಲಂಗಾಣದಲ್ಲಿ ಪ್ರತಿಷ್ಠೆಯ ಕದನಗಳು ನಡೆಯುತ್ತಿದ್ದು, ಹರ್ಯಾಣದಲ್ಲಿ ಕುಟುಂಬ ಪರಂಪರೆಯ ಮುಂದುವರಿಯುವ ಸಾಧ್ಯತೆಯಿದೆ.
ಆರಂಭಿಕ ಟ್ರೆಂಡ್ ಪ್ರಕಾರ ಬಿಹಾರದ ಗೋಪಾಲ್ ಗಂಜ್ ಹಾಗೂ ಮೊಕಾಮಾದಲ್ಲಿ ಆರ್‌ಜೆಡಿಯ ಮೋಹನ್ ಪ್ರಸಾದ್ ಗುಪ್ತಾ ಹಾಗೂ ನೀಲಂ ದೇವಿ ಮುನ್ನಡೆಯಲ್ಲಿದ್ದಾರೆ. ಉತ್ತರಪ್ರದೇಶದಲ್ಲಿ ಗೋಲಾ ಗೋಕ್ರನಾಥ್ ಕ್ಷೇತ್ರದಲ್ಲಿ ಬಿಜೆಪಿಯ ಅಮನ್ ಗಿರಿ ಮುನ್ನಡೆಯಲ್ಲಿದ್ದಾರೆ.
ಏಳು ಸ್ಥಾನಗಳ ಪೈಕಿ ಬಿಜೆಪಿ ಮೂರು, ಕಾಂಗ್ರೆಸ್ ಎರಡು, ಶಿವಸೇನೆ ಹಾಗೂ ಆರ್‌ಜೆಡಿ ತಲಾ ಒಂದರಲ್ಲಿ ತನ್ನ ಶಾಸಕರನ್ನು ಹೊಂದಿದ್ದವು. ಈ 7 ಸ್ಥಾನಗಳಿಗೆ ಉಪಚುನಾವಣೆ ಅಗತ್ಯವಾಗಿತ್ತು. ಇವುಗಳಲ್ಲಿ ಎರಡು ಸ್ಥಾನಗಳು ಬಿಹಾರದಲ್ಲಿ, ಉತ್ತರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಒಡಿಶಾದಲ್ಲಿ ತಲಾ ಒಂದು ಸ್ಥಾನಗಳಿವೆ.