ಬೆಂಗಳೂರು: ಕಾರ್ತಿಕ ಮಾಸದ ಅಮಾವಾಸ್ಯೆಯಂದು ಸೂರ್ಯಗ್ರಹಣವಿತ್ತು. 15 ದಿನಗಳ ನಂತರ ಕಾರ್ತಿಕ ಪೂರ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ನವೆಂಬರ್ 8ರಂದು ಗೋಚರಿಸಲಿದೆ. ಈ ಚಂದ್ರಗ್ರಹಣ ಈ ವರ್ಷದ ಕೊನೆಯ ಗ್ರಹಣವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಚಂದ್ರಗ್ರಹಣವು ನ.8ರ ಸಂಜೆ 05.32ಕ್ಕೆ ಪ್ರಾರಂಭವಾಗಿ 06.18ಕ್ಕೆ ಕೊನೆಗೊಳ್ಳಲಿದೆ.\
ಚಂದ್ರಗ್ರಹಣ ಎಲ್ಲಿ ಗೋಚರಿಸುತ್ತದೆ? ನವೆಂಬರ್ 8ರಂದು ಚಂದ್ರಗ್ರಹಣವು ಭಾರತದ ಪೂರ್ವ ಭಾಗಗಳಲ್ಲಿ ಗೋಚರಿಸುತ್ತದೆ. ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ, ಗುವಾಹಟಿಯಲ್ಲಿ ಚಂದ್ರಗ್ರಹಣವನ್ನು ವೀಕ್ಷಿಸಬಹುದು. ಇದಲ್ಲದೆ ಕಠ್ಮಂಡು, ಟೋಕಿಯೊ, ಮನಿಲಾ, ಬೀಜಿಂಗ್, ಸಿಡ್ನಿ, ಜಕಾರ್ತಾ, ಮೆಲ್ಬೋರ್ನ್, ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಸಿಟಿ, ಲಾಸ್ ಏಂಜಲೀಸ್, ಚಿಕಾಗೋ ಮತ್ತು ಮೆಕ್ಸಿಕೋ ಸಿಟಿಗಳಲ್ಲಿಯೂ ಸಹ ಗೋಚರಿಸುತ್ತದೆ.
ಚಂದ್ರಗ್ರಹಣದ ಸೂತಕ ಅವಧಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಗ್ರಹಣದ ಸೂತಕ ಕಾಲವು 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಗ್ರಹಣ ಮುಗಿದ ನಂತರ ಕೊನೆಗೊಳ್ಳುತ್ತದೆ.
– ಸೂತಕ ಕಾಲದ ಆರಂಭದ ನಂತರ, ಪೂಜೆ ಇತ್ಯಾದಿ ಶುಭ ಮತ್ತು ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಚಂದ್ರಗ್ರಹಣದ ಸಮಯದಲ್ಲಿ ಪ್ರಯಾಣ ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.ಆದ್ದರಿಂದ, ಗ್ರಹಣ ಅವಧಿಯಲ್ಲಿ ಪ್ರಯಾಣವನ್ನು ತಪ್ಪಿಸಬೇಕು.
– ಚಂದ್ರಗ್ರಹಣದ ಸಮಯದಲ್ಲಿ ಮಲಗಬಾರದು ಅಥವಾ ಚೂಪಾದ ವಸ್ತುಗಳನ್ನು ಬಳಸಬಾರದು.
“ಬೆಂಗಳೂರಿನಲ್ಲಿ ಗ್ರಹಣ ಸ್ಪರ್ಶ ಸಂಜೆ 5:11 ರಿಂದ ಗ್ರಹಣ ಮೋಕ್ಷ ಸಂಜೆ 6:19 ಕ್ಕೆ”
ಭೋಜನ ನಿಯಮ: ಈ ದಿನ ಹಗಲು ಭೋಜನ ನಿಷಿದ್ಧವಾಗಿರುತ್ತದೆ. ಉಪಾಹಾರ ಮಧ್ಯಾಹ್ನ 11-50 ಗಂಟೆ ಒಳಗೆ ತದ ನಂತರ ಆಹಾರ ಸೇವನೆ ಇಲ್ಲ. ಗ್ರಹಣ ಮೋಕ್ಷ ನಂತರ ರಾತ್ರಿ 6:19 ರ ನಂತರ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ವ್ಯಕ್ತಿಗಳು ಆಹಾರ ಸೇವನೆ ಮಾಡಬಹುದು.
ಗ್ರಹಣ ಶಾಂತಿ: ಗ್ರಹಣ ಸಮಯದಲ್ಲಿ ಗ್ರಹಣ ಶಾಂತಿ ಹಾಗೂ ಜಪ – ತಪ, ಅನುಷ್ಠಾನ, ವಿಷ್ಣು ಸಹಸ್ರ ನಾಮ ಪಠಣ ಮಾಡುವುದು ಉತ್ತಮ. ದಾನ ಮಾಡಿ. ( ಅರಿಷ್ಟ ಪ್ರಭಾವದಿಂದ ಮುಕ್ತಿ ಪಡೆಯಲು ನವಗ್ರಹ ಸಹಿತ ಗ್ರಹಣ ಶಾಂತಿ ಮಾಡಿಸಬಹುದು).
ಗ್ರಹಣ ಮಂತ್ರ ಅಶ್ವಿನಿ,ಭರಣಿ,ಕೃತ್ತಿಕೆ,ಪೂರ್ವಪಲ್ಗುಣಿ,ಪೂರ್ವಾಷಾಢ ನಕ್ಷತ್ರ ಮತ್ತು ಮಿಕ್ಕ ಅಗತ್ಯರಾಶಿ ಅವರು.ಜಪ ಮಾಡಲೇ ಬೇಕಿದೆ.
ಈ ಕೆಳಗಿನ ಶ್ಲೋಕವನ್ನು ಗ್ರಹಣಕಾಲದಲ್ಲಿ ಪಠಿಸುವುದರಿಂದ ಶುಭವಾಗುವುದು.
*ಶ್ಲೋಕ: ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || ಗ್ರಹ ಣಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳು :
– ಗ್ರಹಣ ಸ್ಪರ್ಶ ಸ್ನಾನ (ಹಿಡಿಯುವ ಸಮಯ) ಮತ್ತು ಮೋಕ್ಷ ಸ್ನಾನ (ಮುಗಿದ ನಂತರ) ಸ್ನಾನ ಮಾಡಲೇಬೇಕು. – ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.
ಹಾಲು ಮೊಸರು ತುಪ್ಪ ಗೆ ತುಳಸಿ ದರ್ಬೆ ಹಾಕಿ ಬಳಸಿ.ಇಂದು ನೀರು ಸಹ ಮುಖ್ಯ ಚೆಲ್ಲುವ ಬದಲು ತುಳಸಿ ಹಾಕಿಡಿ ಬಳಸಿ.ಮಿಕ್ಕ ಆಹಾರ ಪದಾರ್ಥಕ್ಕೂ ತುಳಸಿ ಬಳಸಿ
– ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು.
- ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಶುದ್ದ ಜಲವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸ ಬಹುದು.
ಗ್ರಹಣ ಮೋಕ್ಷ ಕಾಲ : ಹಗಲು 06-19 pm ಗ್ರಹಣವು ಸೂರ್ಯಾಸ್ತದ ನಂತರ ಮುಗಿಯುವುದರಿಂದ ಗ್ರಹಣ ಮೋಕ್ಷ ಮಾತ್ರ ಕಾಣಿಸುತ್ತದೆ. ಈ ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣವು ಮೇಷ ರಾಶಿಯಲ್ಲಿ ಭರಣಿ ನಕ್ಷತ್ರದ ಮೂರನೆಯ ಚರಣದಲ್ಲಿ ನಡೆಯುತ್ತದೆ.
ಕರ್ನಾಟಕ ರಾಜ್ಯದಲ್ಲಿ ಗ್ರಹಣ ಗೋಚರಿಸುವ ಸಮಯ : ಗ್ರಹಣ ಪ್ರಾರಂಭ : ಸಂಜೆ 05-11 pm ಗ್ರಹಣ ಮಧ್ಯ ಕಾಲ : ಸಂಜೆ 05-49 pm ಗ್ರಹಣ ಅಂತ್ಯ ಕಾಲ : ಸಂಜೆ 06-19 pm ಸೂತಕ ಅವಧಿಯು ಚಂದ್ರ ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ನಂತರ ಮಾತ್ರ ಕೊನೆಗೊಳ್ಳುತ್ತದೆ.
ಸೂತಕ ಸಮಯ ಪ್ರಾರಂಭ : ಬೆಳಗ್ಗೆ 9.9 ಸೂತಕ ಸಮಯ ಅಂತ್ಯ : 6:19 pm ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂತಕ ಅವಧಿಯಲ್ಲಿ ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.
ಚಂದ್ರ ಗ್ರಹಣದ ಸಮಯದಲ್ಲಿ, ಚಂದ್ರನು ಮೇಷ ರಾಶಿಯಲ್ಲಿರುತ್ತಾನೆ. ಈ ಕಾರಣದಿಂದಾಗಿ, ಮೇಷ ರಾಶಿಯ ಜನರ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಮೇಷ ರಾಶಿಯವರಿಗೆ ಚಂದ್ರ ಗ್ರಹಣದ ಸಮಯವು ಅನುಕೂಲಕರವಾಗಿರುವುದಿಲ್ಲ. ಚಂದ್ರ ಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ, ಮಿಶ್ರ ಮತ್ತು ಅಶುಭ ಪರಿಣಾಮ ಬೀರಲಿದೆ. ದ್ವಾದಶ ರಾಶಿಗಳಿಗೆ ರಾಹುಗ್ರಸ್ತ ಚಂದ್ರ ಗ್ರಹಣ ಫಲಗಳು ಶುಭ ಫಲ :- ಮಿಥುನ, ಕಟಕ, ವೃಶ್ಚಿಕ, ಮಕರ ಮಿಶ್ರ ಫಲ :- ಸಿಂಹ, ತುಲಾ, ಧನಸ್ಸು, ಮೀನ ಅಶುಭ ಫಲ :- ಮೇಷ, ವೃಷಭ, ಕನ್ಯಾ, ಕುಂಭ
1. ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಮತ್ತು ಗ್ರಹಣ ಬಿಟ್ಟ ನಂತರ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
2. ಗ್ರಹಣ ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನವು ಲಕ್ಷ ಸ್ನಾನಗಳ ಫಲವನ್ನು ಮೋಕ್ಷ ನಂತರ ಮಾಡುವ ಸ್ನಾನವು ಅನಂತ ಸ್ನಾನಗಳ ಫಲವನ್ನು ಕೊಡುತ್ತದೆ. ಗ್ರಹಣ ಸಮಯದಲ್ಲಿ ಮಾಡುವ ಜಪ-ತಪಾದಿ, ಹೋಮವು ಕೋಟಿ ಹೋಮಗಳು ಫಲವನ್ನು ಕೊಡುತ್ತದೆ.
ಪರಿಹಾರ : ಕಪ್ಪು ಅಥವಾ ಧೂಮ್ರ (ಬೂದು) ವರ್ಣ* (ಮಿಶ್ರ ಬಣ್ಣ) ಮತ್ತು ಉದ್ದಿನಕಾಳು ಹಾಗೂ ಶ್ವೇತ ವಸ್ತ್ರ ಮತ್ತು ಅಕ್ಕಿ ಇವುಗಳನ್ನು ದಕ್ಷಿಣೆ ಸಮೇತವಾಗಿ ದೇವಾಲಯದಲ್ಲಿ / ಬ್ರಾಹ್ಮಣರಿಗೆ / ಸತ್ಪಾತ್ರರಿಗೆ ದಾನ ಮಾಡಿ. ಗ್ರಹಣ ಸಮಯದಲ್ಲಿ ದುರ್ಗಾದೇವಿ, ಈಶ್ವರ ಸುಬ್ರಹ್ಮಣ್ಯ, ನಾಗ ದೇವತೆ, ಕಾಳಿ ಮಂತ್ರ ಜಪ ಅಥವಾ ಸ್ತೋತ್ರ ಪಾರಾಯಣ, ದುರ್ಗಾ ಕವಚ, ಸಪ್ತಶತೀ ಮತ್ತು ಸಹಸ್ರನಾಮ ಸ್ತೋತ್ರ ಪಠಿಸಿರಿ.
ಆಸ್ಟ್ರೇಲಿಯಾ ಪೂರ್ವ, ಪಶ್ಚಿಮ ಅಮೆರಿಕ ಭಾಗದಲ್ಲಿ ಸುನಾಮಿ ಅಂತದು ಭೂ ಕಂಪನ ಆಗುವ ಸಾಧ್ಯತೆ ಹೆಚ್ಚು. ಮಿಕ್ಕ ಗ್ರಹಣ ಗೋಚರ ಭಾಗದಲ್ಲಿ ಸಹ ಇದೆ ಆದ್ರೆ ಕಡಿಮೆ ಮಟ್ಟದು.
ಹಾಲಿನ ದರ ಏರಿಕೆ ಗ್ರಹಣ ಸಮಯ ಒಂದು ರೀತಿ ತಾಳೆ ಆಗುತ್ತಿದೆ !!! ವೈದ್ಯರ ಭೇಟಿ ಸಂಖ್ಯೆ ಹೆಚ್ಚಳ ಆಗಲಿದೆ. ವಯಸ್ಸಾದ ಮಾತೃ ವರ್ಗದವರನ್ನ ಆರೋಗ್ಯ ನೋಡಿಕೊಳ್ಳಿ ಅದ್ರಲ್ಲೂ ಅಶುಭ ರಾಶಿ ಅವರು ಎಚ್ಚರವಹಿಸಿ.