ನೋಡಿ ಇದು ಚನ್ನಾಗಿರೊಲ್ಲ – ಸಾರಿಗೆ ನೌಕರರು ರೊಚ್ಚಿಗೆದ್ದರೆ ನಿಮ್ಮನ್ನು ಬಿಡೊಲ್ಲಾ : ಖಾಸಗಿ ಕಂಪನಿ ನಿವೃತ್ತ ನೌಕರ ಎಚ್ಚರಿಕೆ
ಬೆಂಗಳೂರು: ಸಾರಿಗೆ ನೌಕರರ ದಾರಿ ತಪ್ಪಿಸುವುದಕ್ಕೆ ಹೋಗಬೇಡಿ. ನಿಮ್ಮ ಹೆಂಡತಿ ಮಕ್ಕಳ ಸಾಕುವುದಕ್ಕೆ ನಿಮಗೆ ಶಕ್ತಿ ಇಲ್ವಾ? ಅದಕ್ಕಾಗಿ ಸಾರಿಗೆ ನೌಕರರ ಬಲಿಪಶು ಮಾಡುತ್ತಿದ್ದೀರಾ? ಇದನ್ನು ಬಿಟ್ಟು ಚಂದ್ರು ಜತೆ ಕೈ ಜೋಡಿಸಿ ನೌಕರರಿಗೆ ಅನುಕೂಲ ಮಾಡಿಕೊಡಿ ಎಂದು ಎಐಟಿಯುಸಿ ಸದಸ್ಯ ಮತ್ತು ಖಾಸಗಿ ಕಂಪನಿಯ ನಿವೃತ್ತ ನೌಕರರೊಬ್ಬರು ಎಐಟಿಯುಸಿ ಸೇರಿದಂತೆ ಕೆಲ ಸಂಘಟನೆಗಳ ನಡೆಯನ್ನು ಖಂಡಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.
1985ರಿಂದ ನಾನು ಎಐಟಿಯುಸಿಯಲ್ಲಿ ಇದ್ದೇನೆ, ನಾನು ನಿವೃತ್ತ ನೌಕರ. ನಮ್ಮ ಮಕ್ಕಳು ಕೆಎಸ್‌ಆರ್‌ಟಿಸಿಯಲ್ಲಿ ಇದ್ದಾರೆ. ಆದರೆ ಈಗ ಸಾರಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಸೈಕಲ್ ಜಾಥಾದ ಮೂಲಕ ಹೋರಾಟ ಮಾಡುತ್ತಿರುವವರ ಕಾಲನ್ನು ಏಕೆ ಎಳೆಯುತ್ತಿದ್ದೀರಿ?
ಎಐಟಿಯುಸಿಯ ಅನಂತಸುಬ್ಬರಾವ್ ಆಗಲಿ ಇಲ್ಲ ಬೇರೆ ಸಂಘಟನೆಗಳವರಾಗಲಿ, ಯಾರೆ ಆಗಲಿ ಯಾಕೆ ಅವರ ಕಾಲೆಳೆಯುತ್ತೀರಾ? ಚಂದ್ರು ಚಂದ್ರು ಯಾಕೆ ಚಂದ್ರು ಮೇಲೆ ವೈಶಮ್ಯ ಸಾಧಿಸಬೇಕು ನೀವು? ಚಂದ್ರು ಏನು ಅವರ ಮನಗೋಸ್ಕರ ಇಲ್ಲ ಅವರ ಹೆಂಡತಿ ಮಕ್ಕಳಿಗೋಸ್ಕರ ಹೋರಾಟ ಮಾಡುತ್ತಿದ್ದಾರಾ?
ಇಲ್ಲ ನೀವು ಸಾಧ್ಯವಾದರೆ ಅವರ ಜತೆ ಸೇರಿಕೊಳ್ಳಿ, ಆಗಲಿಲ್ಲ ಬ್ಯಾಡ ಬಿಟ್ಟುಬಿಡಿ. ನೀವು ಅಗ್ರಿಮೆಂಟ್ ಟಗ್ರಿಮೆಂಟ್ ಬಹಳ ಅನುಕೂಲವಾಗುತ್ತೆ, ಸರ್ಕಾರಿ ನೌಕರರಿಗಿಂತ ಜಾಸ್ತಿ ಬರುತ್ತೆ ಅಂತ ಸುಳ್ಳು ಸುಳ್ಳು ಯಾಕೆ ಎಲ್ಲರಿಗೂ ಹೇಳಿ ಆಶ್ವಾಸನೆ ಕೊಡುತ್ತಿದ್ದೀರಾ ನೀವು?
ಅಗ್ರಿಮೆಂಟ್ ಜಾಸ್ತಿ ಆಗುವುದಾದರೆ, ರ‍್ರೀ ಆರೂವರೆ – ಏಳು ಲಕ್ಷ ಜನ ಸರ್ಕಾರಿ ನೌಕರರು ಇದ್ದಾರೆ. ಅವರೆಲ್ಲ ಏನು ದಡ್ಡರಾ? ಈಗ ಅವರು ಕೂಡ 6ನೇ ವೇತನ ಆಯೋಗ ಬಿಟ್ಟು ಅಗ್ರಿಮೆಂಟ್‌ಗೆ ಬರಬಹುದಿತ್ತಲ್ಲ. ಅವರು ಬಂದಿಲ್ಲ ಅಂದರೆ ಅವರು ಬುದ್ಧಿ ವಂತರು ಈಗ ನೀವು ಇವರನ್ನೆಲ್ಲ (ಸಾರಿಗೆ ನೌಕರರ) ದಡ್ಡರು ಮಾಡೋಕೆ ಹೊರಟಿದ್ದೀರಿ. ಅತರ ಮಾಡೋಕೆ ಹೋಗಬೇಡಿ. ನೀವು ಸೇರಿಕೊಳ್ಳಿ, ಬನ್ನಿ ಚಂದ್ರು ನಾವು ಬರುತ್ತೀವಿ, ಎಲ್ಲರೂ ಸೇರಿಕೊಂಡು ಒಂದೇ ರೀತಿ ಮಾಡೋಣ ಬನ್ನಿ ಎಂದು ಹೇಳಿ.
ಯಾಕೆ ಸರ್ಕಾರಿ ನೌಕರರ ಮಾಡೋದು ಬಿಟ್ಟು ಅಮಾಯಕ ನೌಕರರ ಎಲ್ಲರನ್ನು ಯಾಕೆ ಬಲಿಕೊಡುತ್ತಿದ್ದೀರಾ ನೀವು? ನಿಮ್ಮ ಜೀವನ ಸಾಗಿಸುವುದಕ್ಕೆ ಸಲುವಾಗಿ ನಿಮ್ಮ ಹೆಂಡತಿ ಮಕ್ಕಳನ್ನು ಸಾಕುವುದಕ್ಕೆ ಸಲುವಾಗಿ ಇವರನ್ನೆಲ್ಲ ಯಾಕೆ ಬಲಿಕೊಡುತ್ತಿದ್ದೀರಾ ನೀವು?
ನಿಮಗೆ ದುಡಿದು ತಿನ್ನಲಿಕ್ಕೆ ಶಕ್ತಿ ಇಲ್ಲವಾ, ಇಲ್ಲ ನಿಮ್ಮ ಹಂಡತಿ ಮಕ್ಕಳನ್ನು ದುಡಿದು ಸಾಕಲು ಶಕ್ತಿಯಿಲ್ಲವಾ? ಈ ರೀತಿ ನೌಕರರ ದಾರಿ ತಪ್ಪಿಸುವ ಕೆಲಸವನ್ನು ಮಾಡಲು ಹೋಗಬೇಡಿ. ಇದು ಚೆನ್ನಾಗಿರಲ್ಲ. ಎಲ್ಲಾರೂ ರೊಚ್ಚಿಗೆದ್ದರೆ ನಿಮ್ಮನ್ನು ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಈ ನಿವೃತ್ತ ನೌಕರ.