NEWSದೇಶ-ವಿದೇಶನಮ್ಮರಾಜ್ಯ

ರಾಜಸ್ಥಾನ ಸಾರಿಗೆ ನೌಕರರಿಗೆ 56 ಸಾವಿರ ವೇತನ – ಕೆಎಸ್‌ಆರ್‌ಟಿಸಿ ನೌಕರರಿಗೆ ಕೇವಲ 27 ಸಾವಿರ ರೂ. ವೇತನ

ವಿಜಯಪಥ ಸಮಗ್ರ ಸುದ್ದಿ

ಜೈಪುರ್‌: ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ನೌಕರರು 7ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ಪಡೆಯುತ್ತಿದ್ದಾರೆ ಅಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಪಡೆಯುತ್ತಿರುವ ವೇತನಕ್ಕಿಂತ ಶೇ.50 ರಿಂದ ಶೇ.53 ಹೆಚ್ಚಿಗೆ ವೇತನ ಪಡೆಯುತ್ತಿದ್ದಾರೆ.

ಇದನ್ನು ಕೆಲವರು ನಂಬಲು ಅಸಾಧ್ಯ ಎನ್ನಬಹುದು ಆದರೆ, ಅದನ್ನು ನಂಬಲೇ ಬೇಕು. ಕಾರಣ ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( RSRTC)ಯ ಒಬ್ಬ ತಾಂತ್ರಿಕ ಸಿಬ್ಬಂದಿ (ಮೆಕ್ಯಾನಿಕ್) 56243 ರೂಪಾಯಿ ವೇತನ ಪಡೆಯುತ್ತಿದ್ದಾರೆ.

ಅದೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಮೆಕ್ಯಾನಿಕ್ ಸೇರಿದಂತೆ ಚಾಲನಾ ಸಿಬ್ಬಂದಿಗೆ 27 ಸಾವಿರ ರೂ.ಗಳಿಂದ 28 ಸಾವಿರ ರೂಪಾಯಿ ವರೆಗೆ ವೇತನ ಸಿಗುತ್ತಿದೆ. ಅದೂ ಕೂಡ 15-16 ವರ್ಷದಿಂದಲೂ ಸೇವೆ ಸಲ್ಲಿಸುತ್ತಿರುವವರಿಗೆ ಕೊಡುತ್ತಿರುವ ಪ್ರಸ್ತುತ ವೇತನ. ಅಂದರೆ ಈ ಬಗ್ಗೆ ಇಲ್ಲೇ ಲೆಕ್ಕಾಚಾರ ಹಾಕಿದರೂ ಕೂಡ ಸಾಮಾನ್ಯರಿಗೂ ಇದು ಅರ್ಥವಾಗುತ್ತದೆ. ಬೇರೆ ರಾಜ್ಯದ ಸಾರಿಗೆ ಸಿಬ್ಬಂದಿಗೂ ಮತ್ತು ಕರ್ನಾಟಕ ರಾಜ್ಯದ ಸಾರಿಗೆ ಸಿಬ್ಬಂದಿಗೂ ಬರುತ್ತಿರುವ ವೇತನದಲ್ಲಿ ಎಷ್ಟು ವ್ಯತ್ಯಾಸ ಇದೇ ಎಂಬುವುದು.

ರಾಜಸ್ಥಾನ ಸಾರಿಗೆ ಮೆಕ್ಯಾನಿಕ್‌ ಪಡೆದಿರುವ ಸೆ.22ರ ವೇತನ ಚೀಟಿ.

ಇನ್ನು ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು ಇದ್ದಾರೆ ಎಂದರೆ ಅದು ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ಸಿಬ್ಬಂದಿ ಎಂದು ಪ್ರಸ್ತುತ ವೇತನ ಚೀಟಿ (Pay slip or Salary slip) ಸಹಿತ ಸಾಬೀತು ಮಾಡಬಹುದು.

ಇನ್ನು ನಮ್ಮ ರಾಜ್ಯದಲ್ಲೂ ಸಿಎಂ, ಸಚಿವರು ಇಲ್ಲ ಸರ್ಕಾರಿ ಅಧಿಕಾರಿಗಳ ಕಾರು ಚಾಲಕರು ತಿಂಗಳಿಗೆ 50ರಿಂದ 80 ಸಾವಿರ ರೂ.ವರೆಗೂ (ಅವರ ಸೇವಾವಧಿಗೆ ತಕ್ಕಂತೆ) ವೇತನ ಪಡೆಯುತ್ತಿದ್ದಾರೆ. ಅದರೆ, ಸಾರಿಗೆ ನಿಗಮದಿಂದ ಕಳಿಸಿರುವ ಚಾಲಕರಿಗೆ ನಿಗಮದಲ್ಲಿ ನೀಡುತ್ತಿರುವ ವೇತನವೇ ಬರುತ್ತಿದೆ. ಇಲ್ಲಿಯೂ ಕೂಡ ವೇತನ ವ್ಯತ್ಯಾಸ ಅಥವಾ ತಾರತಮ್ಯತೆಯನ್ನು ನಾವು ನೋಡಬಹುದು.

ಅಂದರೆ, ಸರ್ಕಾರ ವಾಹನ ಚಾಲಕನಾಗಿ ಕೆಲಸಕ್ಕೆ ಸೇರಿದ ವ್ಯಕ್ತಿಗೆ ಒಳ್ಳೆ ವೇತನ ಸಿಗುತ್ತಿದೆ. ಜತೆಗೆ ಅವರು ಭಾರಿ ವಾಹನ ಓಡಿಸುವುದಿಲ್ಲ ಲಘು ವಾಹನಗಳನ್ನಷ್ಟೇ ಓಡಿಸುತ್ತಾರೆ. ಅಲ್ಲದೆ ಅವರಿಗೆ ನಿರಂತವಾಗಿ 8 ರಿಂದ 12 ಗಂಟೆಗಳ ಕಾಲ ಚಾಲನೆ ಮಾಡುವುದಿಲ್ಲ. ಆದರೆ, ಭಾರಿ ಓಹನ ಓಡಿಸುವ ಅದರಲ್ಲೂ ನಿರಂತರವಾಗಿ 8ರಿಂದ12 ಗಂಟೆಗಳಕಾಲ ಚಾಲನೆ ಮಾಡುವ ಸಾರಿಗೆ ನೌಕರರಿಗೆ ವೇತನ ಕೊಡುವುದು ಮಾತ್ರ ತೀರ ಕಡಿಮೆ.

ಅಂದರೆ, ರಾಜ್ಯದ ಜನರಿಗೆ ಪ್ರಮುಖವಾಗಿ ಬೇಕಾಗಿರುವ ಸಾರಿಗೆ ಸಂಸ್ಥೆಯ ನೌಕರರಿಗೇ ಏಕೆ ಇಷ್ಟು ಕಡಿಮೆ ವೇತನ ಬರುತ್ತಿದೆ ಎಂದರೆ, ಆ ಬಗ್ಗೆ ಈಗಾಗಲೇ ಹಲವಾರು ಬಾರಿ ಹತ್ತಾರು ವರದಿಗಳನ್ನು ಮಾಡಿ ವಿವರಿಸಿದ್ದೇವೆ. ಕೆಲ ಸಂಘಟನೆಗಳ ಪದಾಧಿಕಾರಿಗಳು ಕೆಲ ಭ್ರಷ್ಟ ಅಧಿಕಾರಿಗಳ ಜತೆ ಕೈ ಜೋಡಿಸಿದ್ದು, ಸಾರಿಗೆ ನೌಕರರಿಗೆ ಕಾನೂನ ಅರಿವು ಇಲ್ಲದಿದ್ದದ್ದು ಪ್ರಮುಖ ಕಾರಣ.

ಇನ್ನು ಈ ಎಲ್ಲದರ ಬಗ್ಗೆ ಪ್ರಸ್ತುತ ತಮಗೂ ತಿಳಿಸಿದ್ದರೂ ಕೂಡ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ನೌಕರರಿಗೆ ಭರವಸೆ ಮಾತ್ರ ಈಗಲೂ ಕೊಡುತ್ತಲೇ ಕಾಲಕಳೆಯುತ್ತಿದ್ದಾರೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರಲು ಮೀನಮೇಷ ಎಣಿಸುತ್ತಿದ್ದಾರೆ. ಇದಕ್ಕೆ ಕಾರಣ ಮಾತ್ರ ನಿಗೂಢ.

ಹೀಗಾಗಿ ನೌಕರರು ನಮಗೆ ಸರ್ಕಾರಿಗೆ ನೌಕರರಿಗೆ ಇರುವಂತೆ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡಬೇಕು. ಈ ಮೂಲಕ ನಾಲ್ಕೂ ವರ್ಷಕ್ಕೊಮ್ಮೆ ನೌಕರರು ಅನುಭವಿಸುತ್ತಿರುವ ವಜಾ, ವರ್ಗಾವಣೆ, ಅಮಾನತು, ಪೊಲೀಸ್‌ ಕೇಸ್‌ ಹೀಗೆ ಹತ್ತಾರು ಕಿರುಕುಳಗಳಿಗೆ ಶಾಶ್ವತ ಪರಿಹಾರ ಬೇಕು ಎಂದು ಕಳೆದ 2 ವರ್ಷದಿದ್ದಲೂ ಒತ್ತಾಯಿಸುತ್ತಿದ್ದಾರೆ. ಆದರೆ, ಈವರೆಗೂ ಆ ಬಗ್ಗೆ ಸರ್ಕಾರ ಮಾತ್ರ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ದಿವ್ಯ ಮೌನತಾಳಿದೆ.

Leave a Reply

error: Content is protected !!
LATEST
ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ