NEWSನಮ್ಮರಾಜ್ಯಶಿಕ್ಷಣ-

ನಮ್ಮ ನಡೆ ಬದುಕಿನ ಪ್ರತೀ ಪುಟಗಳನ್ನು ತಿರುವಿ ಹಾಕಿ ಮತ್ತೆ ಮತ್ತೆ ಓದುವಂತಿರಬೇಕು : ರಮೇಶ್‌ಗೌಡ

ಬನ್ನಿಕುಪ್ಪೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ನಮ್ಮ ಬದುಕೇ ಒಂದು ಪುಸ್ತಕ. ಅದು ಹೇಗಿರಬೇಕೆಂದರೆ ಬದುಕಿದ ಪ್ರತೀ ಪುಟಗಳನ್ನು ತಿರುವಿ ಹಾಕಿ ಮತ್ತೆ ಮತ್ತೆ ಓದುತ್ತ ಮನನ ಮಾಡಿಕೊಳ್ಳುವಂತಿರಬೇಕು ಎಂದು ರೋಟರಿ ಸಿಟಿ ಸೆಂಟರ್‌ನ ಅಧ್ಯಕ್ಷ ಡಿ.ಸಿ. ರಮೇಶ್‌ಗೌಡ ತಿಳಿಸಿದರು.

ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರಿನ ರೋಟರಿ ಸಿಟಿ ಸೆಂಟರ್ ಹಾಗೂ ಹ್ಯುಮಾನಿಟಿ ಫಸ್ಟ್ ಫೌಂಡೇಷನ್ ಸಂಯುಕ್ತವಾಗಿ ಬನ್ನಿಕುಪ್ಪೆಯ ಕೆಂಗಲ್ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ 226 ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಮುಂದಿನ ಸಮಾಜ ನಿರ್ಮಾಣ ಹೇಗೆ ಮಾಡಬೇಕೆಂಬುದನ್ನು ರೂಢಿಸಿಕೊಳ್ಳಬೇಕು. ಪಾಠದ ಜತೆಗೆ ಆಟಗಳನ್ನೂ ರೂಢಿಸಿಕೊಳ್ಳುವುದರಿಂದ ಇಂದಿನ ಮಾರಕ ರೋಗಗಳಿಂದಲೂ ಮುಕ್ತರಾಗಬಹುದು, ಇದೇ ಆರೋಗ್ಯದ ಗುಟ್ಟು ಎಂದು ಸಲಹೆ ನೀಡಿದರು.

ಡಾ. ಎಂ. ಬೈರೇಗೌಡ ಮಾತನಾಡಿ, ಗ್ರಾಮೀಣ ಮಕ್ಕಳ ಆಲೋಚನೆ ಕನಿಷ್ಠ ನೂರು ವರ್ಷಗಳ ಮುಂದಿರುತ್ತದೆ. ಹಳ್ಳಿಗಮಾರ ಎಂದು ಅವರನ್ನು ಧಮನ ಮಾಡುವ ಜನರೇ ತುಂಬಿರುವ ಸಮಾಜದಲ್ಲಿ ಅವರ ಆಲೋಚನೆಗಳಿಗೆ ಕಿಮ್ಮತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ದೇಶ ಕಟ್ಟುವಲ್ಲಿ ಹಳ್ಳಿಗಾಡಿನ ಮಕ್ಕಳ ಪಾತ್ರ ದೊಡ್ಡದು. ಅದನ್ನು ಪರಿಗಣಿಸಿ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡಬೇಕಾದ ಅಗತ್ಯವಿದೆ. ಈ ಬಗ್ಗೆ ಸರ್ಕಾರ ಸಮಾಜ ತನ್ನ ಕಣ್ಣನ್ನು ತೆರೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಹ್ಯುಮಾನಿಟಿ ಫಸ್ಟ್ ಫೌಂಡೇಷನ್ ಅಧ್ಯಕ್ಷ ಉದಯಕುಮಾರ್ ಮಾತನಾಡಿ, ಮಕ್ಕಳೇ ಸಮಾಜದ ಭವಿಷ್ಯ. ಸದೃಢ ದೇಶಕಟ್ಟುವ ಕೆಲಸ ನಿಮ್ಮಿಂದಾಗಬೇಕು. ಧರ್ಮ, ಜಾತಿ, ಭಾಷೆ, ವೇಶಗಳನ್ನೂ ಮೀರಿ ದೇಶ ಕಟ್ಟುವ ಕೆಲಸದಲ್ಲಿ ನಿರತರಾಗೋಣ ಎಂದು ಕರೆನೀಡಿದರು.

ಇಂದಿನ ಎಲ್ಲ ಸಮಸ್ಯೆಗಳಿಗೂ ಮಾನವೀಯ ಮೌಲ್ಯಗಳ ಕೊರತೆಯೇ ಕಾರಣ. ಹೀಗಾಗಿ ನಾವು ಮಾನವೀಯ ಮೌಲ್ಯಗಳನ್ನು ವೃದ್ಧಿಕೊಳ್ಳುವತ್ತ ಹೆಜ್ಜೆಯನಿಡಬೇಕು ಎಂದು ಸಮಸ್ತ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ರೋಟರಿ ಸಿಟಿ ಯೂತ್ ಪ್ರಸಿಡೆಂಟ್ ಅರುಣ್‌ಕುಮಾರ್, ರೊಟೆರಿಯನ್ ಅಶೋಗನ್ ಕಾರ್ಯಕ್ರಮದಲ್ಲಿ ಪಾಲ್ಗೊಮಡಿದ್ದರು. ಮುಖ್ಯ ಶಿಕ್ಷಕ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...