‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ’ : ಪಾನಿಪುರಿ ಮಂಜನ ವಿಶಿಷ್ಟ ಪ್ರತಿಭಟನೆ
ಮೈಸೂರು: ರಾಜ್ಯಾದ್ಯಂತ ಬಿಜೆಪಿಗೆ ರೌಡಿಗಳು ಸೇರುತ್ತಿರು ಬಗ್ಗೆ ಭಾರಿ ವಿವಾದ ಎದ್ದಿರುವ ಬೆನ್ನಲೇ ಇಲ್ಲೊಬ್ಬ ರೌಡಿ ಶೀಟರ್ ಭೂಪ ಬಿಜೆಪಿಗೆ ಮನವಿವೊಂದನ್ನು ಮಾಡಿದ್ದಾನೆ.
ಅದೇ ಎಂದು ಕುತೂಹಲವೇ ಅದೇ ರೀ ‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ’ ಎಂದು ಬೋರ್ಡ್ ಹಿಡಿದು ಕುಳಿತಿದ್ದಾನೆ. ಈ ಘಟನೆ ಮೈಸೂರಿನ ನ್ಯಾಯಾಲಯದ ಬಳಿ ನಡೆದಿದೆ.
ಹೌದು! ಮೈಸೂರಿನ ನ್ಯಾಯಾಲಯದ ಮುಂದೆ ‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ’ ಎಂದು ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆ ರೌಡಿ ಶೀಟರ್ ನನ್ನು ಸದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಜು ಅಲಿಯಾಸ್ ಪಾನಿಪುರಿ ಮಂಜು ಎಂಬ ರೌಡಿ ಶೀಟರ್ ಬಿಜೆಪಿ ವಿರುದ್ಧ ಈ ವಿಶಿಷ್ಟ ಪ್ರತಿಭಟನೆ ನಡೆಸಿದವ. ಪಾನಿಪುರಿ ಮಂಜ ಕೆ.ಆರ್.ಠಾಣೆ ಪೊಲೀಸರು ವಶದಲ್ಲಿ ಇದ್ದಾನೆ. ಈತ 2013ರಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ. ಆ ವೇಳೆ ಪಾನಿಪುರಿ ಮಂಜು ಬಗ್ಗೆ ಪೊಲೀಸರು ರೌಡಿ ಶೀಟರ್ ತೆರೆದಿದ್ದರು.
ಸದ್ಯ ಈಗ ಮಂಜು ಮೇಲೆ ಉದಯಗಿರಿ ಪೊಲೀಸರು ರೌಡಿ ಶೀಟರ್ ತೆರೆದಿದ್ದು ಹೆಚ್ಚಿನ ವಿಚಾರಣೆಗಾಗಿ ಕೆ.ಆರ್.ಠಾಣೆ ಪೊಲೀಸರು ಉದಯಗಿರಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಈಗ ಪೊಲೀಸರ ಅತಿಥಿ ಆಗಿರುವ ಮಂಜು ನಾನು ಬಿಜೆಪಿಗೆ ಸೇರಲೇ ಬೇಕು ಎಂದು ಹಠಹಿಡಿದು ಕುಳಿತಿರುವುದಾಗಿ ತಿಳಿದು ಬಂದಿದೆ.