ಸಂಸ್ಕೃತಿ

ಪಾಪು ಅವರ ಘನತೆ ಹೆಚ್ಚಿಸುವ ಕೆಲಸ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಅಧಿಕಾರ ಹೊಂದಿಲ್ಲದಿದ್ದರೂ ಯಾವುದೇ ಸರ್ಕಾರವನ್ನು ನಿಲ್ಲಿಸುವ ಶಕ್ತಿ ಇತ್ತು

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಪಾಪು ಅವರ ನಾಡು-ನುಡಿಗಾಗಿ ಸಲ್ಲಿಸಿದ ಸೇವೆ ಅಪಾರ. ಅವರ ವ್ಯಕ್ತಿತ್ವ  ಯಾವ ಪ್ರಶಸ್ತಿ ಕೆಲಸಗಳಿಗೂ ಮಿಗಿಲಾದದ್ದು. ಕರ್ನಾಟಕ ರತ್ನ ಪ್ರಶಸ್ತಿ ಸೇರಿದಂತೆ ಪಾಪು  ಅವರ ಘನತೆ ಮತ್ತು ವ್ಯಕಿತ್ವವನ್ನು ಹೆಚ್ಚಿಸುವ ಎಲ್ಲ ಕೆಲಸಗಳನ್ನು ಮಾಡಲು ಸರಕಾರ ಚಿಂತನೆ ಮಾಡುತ್ತದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು  ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ರಾಣೇಬೆನ್ನೂರು ತಾಲೂಕು  ಹಲಗೇರಿ ಗ್ರಾಮದಲ್ಲಿ ಮಂಗಳವಾರ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಿದರು.ಪಾಪು ಅವರು ಯಾವುದೇ ಅಧಿಕಾರಕ್ಕೆ ಆಸೆಪಟ್ಟವರಲ್ಲ. ಅಧಿಕಾರ ಹೊಂದಿದವರಲ್ಲ, ಅಧಿಕಾರ ಹೊಂದಿಲ್ಲದಿದ್ದರೂ ಯಾವುದೇ ಸರ್ಕಾರವನ್ನು ನಿಲ್ಲಿಸುವ ಶಕ್ತಿ ಅವರಿಗಿತ್ತು. ಯಾವುದೇ ಸರ್ಕಾರ ಅವರ ಮಾತನ್ನು ಕೇಳುತ್ತಿತ್ತು. ಇಂತಹ ಧೀಮಂತ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಪಾಪು ಎಂದು ಬಣ್ಣಿಸಿದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಪಾಪು ಅವರು ಬಹಳ ನಿಷ್ಠೂರವಾಗಿದ್ದರು. ಕನ್ನಡ ಹೋರಾಟದಲ್ಲಿ ಯಾವಾಗಲೂ ಮೊದಲಿಗರಾಗಿರುತ್ತಿದ್ದರು. ಅವರ  ನೆನಪಿನ ಶಕ್ತಿ ಅದ್ಬುತವಾಗಿತ್ತು. ಎಷ್ಟೇ ಹಳೆಯ ವಿಷಯವಾಗಿದ್ದರೂ ಇತಿಹಾಸದ ಮೆಲುಕುಹಾಕುತ್ತಿದ್ದರು. ಕನ್ನಡ ಭಾಷೆಗೆ ಸಮಸ್ಯೆ ಉಂಟಾದಾಗಲೆಲ್ಲ ತಮಗೆ ದೈಹಿಕ ಸಮಸ್ಯೆ ಇದ್ದರೂ ಧ್ವನಿಮಾತ್ರ ದುರ್ಬಲವಾಗಿರಲಿಲ್ಲ. ಪಾಪು ನಾಡಿಗೆ ಸ್ಪೂರ್ತಿ ಎಂದು ಹೇಳಿದರು.

ಕೃಷಿ ಸಚಿವ ಬಿ ಸಿ ಪಾಟೀಲ ಅವರು ಮಾತನಾಡಿ, ಇಂದು ಕನ್ನಡದ ಗಟ್ಟಿ ಧ್ವನಿ ಸ್ತಬ್ಧವಾಗಿದ್ದು, ಪಾಟೀಲ ಪುಟ್ಟಪ್ಪ ಅವರು ಕರ್ನಾಟಕದ ಏಕೀಕರಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಕನ್ನಡದ ನೆಲ,ಜಲ,ಭಾಷೆಗೆ ತೊಂದರೆ ಉಂಟಾದಾಗ ಅವರು ಎಂದಿಗೂ ಸುಮ್ಮನೆ ಕುಂತವರಲ್ಲಾ. ಪತ್ರಿಕೆಯ ಮೂಲಕ ತಮ್ಮ ಮನದಾಳದ ವಿಚಾರ ಜಗತ್ತಿಗೆ ಪಾಪು ತಿಳಿಸುತ್ತಿದ್ದರು ಎಂದು ಸ್ಮರಿಸಿಕೊಂಡರು.

ಶಿರಿಗೇರೆ ಶ್ರೀಗಳು ಮಾತನಾಡಿ, ಪಾಟೀಲ ಪುಟ್ಟಪ್ಪ ಅವರು ಮೇರು ವ್ಯಕ್ತಿತ್ವದ ಹೋರಾಟದ ಗುಣವುಳ್ಳವರು. ನಾಡು-ನುಡಿಗಾಗಿ ಸಲ್ಲಿಸಿದ ಸೇವೆ ಅಪಾರವಾದದ್ದು, ಪತ್ರಿಕೋಧ್ಯಮದ ಭೀಷ್ಮ ಎಂದೇ ಕರೆಯುತ್ತಿದ್ದ ಪುಟ್ಟಪ್ಪನವರು ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು. ಇಂತಹ ವ್ಯಕ್ತಿತ್ವವನ್ನು ಗೌರವಿಸುವ ನಿಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಗೆ ಅವರ ಹೆಸರನ್ನು ನಾಮಕರಣಮಾಡಬೇಕು. ಇಲ್ಲವೇ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಪಾಪು ಅವರ ಹೆಸರು ನಾಮಕರಣಮಾಡಬೇಕು. ಇಲ್ಲವಾದರೆ ಪತ್ರಿಕೋಧ್ಯಮ ವಿವಿ ಸ್ಥಾಪನೆಯ ಚಿಂತನೆಯಲ್ಲಿರುವ ಸರ್ಕಾರ ಪಾಟೀಲ ಪುಟ್ಟಪ್ಪನವರ ಹೆಸರಿನಲ್ಲೇ ಪತ್ರಿಕೋಧ್ಯಮ ವಿವಿಯನ್ನು ಸ್ಥಾಪಿಸಬೇಕು. ಅವರ ಅಂತ್ಯಕ್ರಿಯೆ ನಡೆದ ಹಲಗೇರಿ ಸ್ಥಳವನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿಕೊಂಡರು.

ಕೂಡಲ ಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ, ತರಳಬಾಳು ಶಾಖಾಮಠದ ಪಂಡಿತಾರಾದ್ಯ ಸ್ವಾಮೀಜಿ, ಮುಂಡರಗಿಯ ನಿಜಗುಣನಾನಂದ ಸ್ವಾಮೀಜಿ ಹಾಗೂ ರಾಣೇಬೆನ್ನೂರು ಕ್ಷೇತ್ರದ ಶಾಸಕ ಅರುಣುಕುಮಾರ ಗುತ್ತೂರ ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ