CRIMEನಮ್ಮಜಿಲ್ಲೆ

ಬೈಕ್‌ ಸೈಡಿಗಾಕಿ ಎಂದ KSRTC ಕಂಡಕ್ಟರ್‌ ಮೇಲೆ ಕಿಡಿಗೇಡಿ ಹಲ್ಲೆ- FIR ದಾಖಲು

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಡ್ಯೂಟಿ ಮೇಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಚಾಲಕ ಕಂ ನಿರ್ವಾಹಕರೊಬ್ಬರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿ ವಿರುದ್ಧ ಮಧುಗಿರಿ ತಾಲೂಕಿನ ಬಡವನಹಳ್ಳಿ ಪೊಲೀಸ್‌ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬುಧವಾರ (ಮಾ.12ರ ರಾತ್ರಿ ಸುಮಾರು 8 ಗಂಟೆಯಲ್ಲಿ ಮಧುಗಿರಿ ಶಿರಾ ರಸ್ತೆಯಲ್ಲಿ ದೊಡ್ಡೆರಿ ಹತ್ತಿರ ಶಿರಾ ಘಟಕದ ನಿರ್ವಾಹಕ ಮಲ್ಲಿಕಾರ್ಜುನ ಎಂಬುವರ ಮೇಲೆ ಬೈಕ್‌ಸವಾರ ದೊಡ್ಡೇರಿಯ ಗುರು ಎಂಬಾತನೆ ಹಲ್ಲೆ ಮಾಡಿದ ಆರೋಪಿ.

ಸದ್ಯ ಕಂಡಕ್ಟರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಹಲ್ಲೆ ಮಾಡಿದ್ದರಿಂದ ಮೂಗು, ತುಟಿ ಹಾಗೂ ಕಣ್ಣಿನ ಮೇಲೆ ಬಲವಾದ ಪೆಟ್ಟಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ವಿವರ: ತುಮಕೂರು ವಿಭಾಗ ಶಿರಾ ಡಿಪೋದಲ್ಲಿ ಕಂಡಕ್ಟರ್ ಮಲ್ಲಿಕಾರ್ಜುನ (ನಂ-358) ಚಾಲಕ ಕಂ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.  ಅದರಂತೆ ಮಾ.12  ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶಿರಾ ಬಸ್ ನಿಲ್ದಾಣಕ್ಕೆ ಒಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಮಾರ್ಗದಂತೆ ಕರ್ತವ್ಯ ನಿರ್ವಹಿಸುತ್ತಿದ್ದರು.

ಅದರಂತೆ ಸಂಜೆ 6.45ರಲ್ಲಿ ತುಮಕೂರಿನಿಂದ ಮದೂಡಿಗೆ ಹೋಗಲು ಪ್ರಯಾಣಿಕರನ್ನು ಹತ್ತಿಸಿಕೊಂಡು ತೋವಿನಕೆರೆ ಮಾರ್ಗವಾಗಿ ದೊಡ್ಡರಿಯ ಬಸ್ ನಿಲ್ದಾಣಕ್ಕೆ ಬಂದು ರಾತ್ರಿ 8 ಗಂಟೆ ಸಮಯದಲ್ಲಿ ಬಸ್ಸನ್ನು ನಿಲಿಸಲು ಹೋದಾಗ ಮುಂದೆ ರಸ್ತೆಗೆ ಅಡ್ಡಲಾಗಿ ಆರೋಪಿ ಗುರು ಬೈಕನ್ನು ನಿಲಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ.

ಈ ವೇಳೆ ಕಂಡಕ್ಟರ್‌ ಬೈಕನ್ನು ಸೈಡಿಗೆ ಹಾಕಪ್ಪ ಎಂದು ಹೇಳಿದಾಗ ಆತ ಅವಾಚ್ಯ ಪದಗಳಿಂದ ಬೈದು ನಿಮ್ಮದು ಜಾಸ್ತಿಯಾಯಿತು ಎಂದು ಕೂಗಾಡುತ್ತಿದ್ದ. ವೇಳೆ ಏಕೆ ಬೈಯ್ಯುತ್ತೀಯಾ ಎಂದು ನಿರ್ವಾಹಕ ಬಸ್ಸಿನಿಂದ ಇಳಿದು ಹೋಗಿ ಕೇಳಿದಾಗ ಕರ್ತವ್ಯದ ಮೇಲೆ ಇದ್ದ ಆತನ  ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

ಅಲ್ಲದೆ ಏಕಾ-ಏಕಿ ನಿರ್ವಾಕರ ಮೇ:ಎ ನನ್ನ ಮಗನೆ ನನ್ನ ತಂಟೆಗೆ ಬಂದರೆ ನಿನ್ನನ್ನು ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಕೈಗಳಿಂದ ಮುಖ, ಬಲಗಣ್ಣಿಗೆ, ಮೂಗಿಗೆ, ಬಲವಾಗಿ ಹೊಡೆದು ಹಲೆ ಮಾಡಿದ್ದಾನೆ. ಈ ವೇಳೆ ಬಂದ ಸಾರ್ವಜನಿಕರು ಬಿಡಿಸಿದ್ದಾರೆ.

ಬಳಿಕ ಕಂಡಕ್ಟರ್‌ದೊಡ್ಡರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದು ಬಳಿಕ ಠಾಣೆಗೆ ಬಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಕೈಗಳಿಂದ ಹೊಡೆದು ಹಲೆ ಮಾಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ ದೊಡ್ಡರಿಯ ಗುರು ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ.

ಕಂಡಕ್ಟರ್‌ಮಲ್ಲಿಕಾರ್ಜುನ ನೀಡಿದ ದೂರಿನ ಮೇರೆಗೆ ಆರೋಪಿ ಗುರು ವಿರುದ್ಧ ಭಾರತೀಯ ನ್ಯಾಯಸಂಹಿತೆ 2023 (U/s-115 (2), 126 (2), 132, 351(2) ಹಾಗೂ 352 ರಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇನ್ನು ಕಂಡಕ್ಟರ್‌ಮಲ್ಲಿಕಾರ್ಜುನ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಹಲ್ಲೆ ಕೋರ ಆರೋಪಿಗಳನ್ನು ಬಂಧಿಸಬೇಕೆಂದು ವಿಭಾಗೀಯ ಸಂಚಾಲನ ಅಧಿಕಾರಿಗಳು ಮತ್ತು ಶಿರಾ ಘಟಕದ ವ್ಯವಸ್ಥಾಪಕರು, ವಿಭಾಗೀಯ ಭದ್ರತಾ ಅಧಿಕಾರಿಗಳು ಮತ್ತ ಶಿರಾ ಘಟಕದ ನೌಕರರ ಮುಖಂಡರು ಪೊಲೀಸ್‌ಠಾಣೆಗೆ ಹೋಗಿ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ಬಳಿಕ ನಿರ್ವಾಹಕರನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Deva
the authorDeva

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ