KSRTC ಎಂಡಿ ನಡೆಗೆ ಬೇಸರ: ತುಟ್ಟಿಭತ್ಯೆ ವಿಲೀನಗೊಂಡು 7ತಿಂಗಳು ಗತಿಸಿದರೂ ನೌಕರರಿಗೆ ಬಿಡಿಎ ಆದೇಶ ಹೊರಬಿದ್ದಿಲ್ಲ, ಜು.2024ರ ಡಿಎ ಸಹ ಕೊಟ್ಟಿಲ್ಲ

ಬೆಂಗಳೂರು: ಈವರೆಗೂ ಸಾಮಾನ್ಯ ಪ್ರಕ್ರೀಯೆವಾಗಿದ್ದ DA ಹಾಗೂ BDA ಗಳನ್ನೂ ಸಹ ಇನ್ನು ಮುಂದೆ ಹೋರಾಟ ಮಾಡಿ ಪಡೆಯಬೇಕಾಗುತ್ತೋ ಏನೋ ಎಂಬ ಆತಂಕದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಇದ್ದಾರೆ.
ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಪ್ರಮುಖವಾಗಿ ಅವರು ಪಡೆಯಬೇಕಿರುವ ವೇತನ ಸೌಲಭ್ಯವನ್ನು ಸಕಾಲಕ್ಕೆ ಸರ್ಕಾರ ಅಥವಾ ಸಾರಿಗೆ ನಿಗಮಗಳ ಆಡಳಿತ ಮಂಡಳಿ ಕೊಡದೆ ಭಾರಿ ಸಮಸ್ಯೆಗೆ ಸಿಲುಕಿಸುತ್ತಿದೆ. ಅಂದರೆ ಈ ವ್ಯವಸ್ಥೆ DA ಹಾಗೂ BDA ಗಳನ್ನೂ ಸಹ 7 ತಿಂಗಳು ಕಳೆಯುತ್ತಾ ಬಂದರೂ ಈ ವರೆಗೂ ನೀಡಿಲ್ಲ ಎಂದರೆ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂಬುದರ ಬಗ್ಗೆ ಯೋಚಿಸಬೇಕಿದೆ.
ಹೌದು! ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ಅವರಿಗೆ ನೌಕರರ ಮೂಲಭೂತ ಹಕ್ಕುಗಳ ವಿಚಾರವೇದಿಕೆ ಮನವಿ ಸಲ್ಲಿಸಿದ್ದು ಕೂಡಲೇ ಬಿಡಿಎ ಹಾಗೂ ಡಿಎ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದೆ.
ಪೂರ್ಣ ಮಾಹಿತಿ: ತುಟ್ಟಿಭತ್ಯೆ ವಿಲಿನಗೊಳಿಸಿದ (ಮರ್ಜ್) ಒಂದು ತಿಂಗಳಲ್ಲಿ ಸಾರಿಗೆ ನೌಕರರಿಗೆ ಬಿಡಿಎ ಅಳವಡಿಸಿರುವುದನ್ನು ನಾವು ಕಾಣುತ್ತ ಬಂದಿದ್ದೇವೆ. ಆದರೆ ಈ ಬಾರಿ ತುಟ್ಟಿಭತ್ಯೆ ವಿಲೀನಗೊಂಡು ಏಳು ತಿಂಗಳು ಗತಿಸುತ್ತ ಬಂದರೂ ಸಾರಿಗೆ ನೌಕರರಿಗೆ ಬಿ.ಡಿ.ಎ. ಆದೇಶ ಈವರೆಗೂ ಹೊರಬಿದ್ದಿಲ್ಲ. ಅಲ್ಲದೇ ಜುಲೈ-2024 ರ ಶೇ.2.25 ಡಿಎ ಯನ್ನು ಸಹ ನೀಡಿಲ್ಲ. ಬಹುಶಃ ಈ ರೀತಿ ವಿಳಂಬ ಇತಿಹಾಸದಲ್ಲಿ ಇದೇ ಪ್ರಥಮವಾಗಿದೆ.
ಬಿಡಿಎ ಮತ್ತು ಡಿಎ ವಿಚಾರದಲ್ಲಿ ಯಾವುದೇ ಹೊಸ ನೀತಿ ನಿಯಮಗಳನ್ನೇನು ರಚಿಸಬೇಕಿಲ್ಲ. ಇದೊಂದು ಸಾಮಾನ್ಯ ಮತ್ತು ಬಹು ಕಾಲದಿಂದ ನಡೆದುಕೊಂಡು ಬಂದ ಪದ್ಧತಿ ಯಾಗಿದ್ದು ಸರಕಾರ ಡಿ.ಎ. ಮರ್ಜ್‌ಮಾಡಿದ ತಕ್ಷಣವೇ ಸಾರಿಗೆ ನೌಕರರಿಗೆ ಬಿ.ಡಿ.ಎ. ಅಳವಡಿಸಲಾಗುತ್ತದೆ. ಸರಕಾರ ಡಿಎ ಘೋಷಿಸಿದ ಕೂಡಲೇ ಸಾರಿಗೆ ನೌಕರರಿಗೆ ಡಿಎ ಅಳವಡಿಸಲಾಗುತ್ತದೆ. ಆದರೆ ನಾಲ್ಕೂ ನಿಗಮಗಳ ನೌಕರರಿಗೆ ಬಿಡಿಎ ಹಾಗೂ ಡಿಎ ಅಳವಡಿಸಲು ಕೆಎಸ್‌ಆರ್‌ಟಿಸಿ ಎಂಡಿ ಆದೇಶ ಹೊರಡಿಸಬೇಕಾಗುತ್ತದೆ. ಆ ಕೆಲಸ ಈವರೆಗೂ ನಡೆದಿಲ್ಲ.
ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಹಲವು ಇಲಾಖಾ ಮುಖ್ಯಸ್ಥರನ್ನು ನಮ್ಮ ಸಂಘದಿಂದ ಸಂಪರ್ಕಿಸಿಸಾಗ ಯಾರಿಂದಲೂ ಧನಾತ್ಮಕ ಪ್ರತಿಕ್ರೀಯೆ ಸಿಕ್ಕಿಲ್ಲ. ಎಲ್ಲರೂ ಮೇಲಿನನವರ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಬಿ.ಡಿ.ಎ. ಹಾಗೂ ಡಿ.ಎ. ಆದೇಶ ಹೊರಡಿಸುವಲ್ಲಿ ಯಾರಿಂದ, ಯಾವ ಹಂತದಲ್ಲಿ ಅಡತಡೆ ಉಂಟಾಗಿದೆ ಎನ್ನುವುದೇ ನಮಗೆ ಸ್ಪಷ್ಟವಾಗಿ ತಿಳಿಯುತ್ತಿಲ್ಲ.
ಆದ್ದರಿಂದ ತಾವು ಅತ್ಯಂತ ಮುತುವರ್ಜಿವಹಿಸಿ ಆದಷ್ಟು ಬೇಗನೇ ಸಾರಿಗೆ ನೌಕರರಿಗೆ ಬಿ.ಡಿ.ಎ ಹಾಗೂ ಡಿ.ಎ. ಸಾಧ್ಯವಾಗಿಸಿಕೊಡಲು ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಿರೆಂದು ಈ ಮೂಲಕ ವಿನಂತಿಸಿಕೊಂಡಿರುತ್ತೇವೆ, ಜತೆಗೆ ಎಂದೂ ವಿಳಂಬವಾಗದ ಬಿಡಿಎ, ಡಿಎ ಗಳಿಗೆ ತಮ್ಮ ಕಾಲಾವಧಿಯಲ್ಲಿ ಅಡತಡೆ ಅಥವಾ ವಿಳಂಬವಾಗಬಾರದು ಎನ್ನುವುದು ನಮ್ಮ ಅಭಿಪ್ರಾಯ ಹಾಗೂ ನಮ್ಮ ನಮ್ರ ವಿನಂತಿ ಎಂದು ವಿಚಾರವೇದಿಕೆ ಮನವಿ ಮಾಡಿದೆ.
ವಿಚಾರವೇದಿಕೆ ರಾಜ್ಯಾಧ್ಯಕ್ಷ ವೈ.ಎಂ.ಶಿವರೆಡ್ಡಿ, ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ, ಉಪಾಧ್ಯಕ್ಷ ರಫೀಕ್‌ಹಮದ್ ನಾಗನೂರ ಮತ್ತಿತರರು ಕೆಎಸ್‌ಆರ್‌ಟಿಸಿ ಎಂಡಿ ಜತೆಗೆ ಮುಖ್ಯ ಮಂತ್ರಿಗಳು, ಸಾರಿಗೆ ಹಾಗೂ ಮುಜುರಾಯಿ ಸಚಿವರು, ಕಾರ್ಮಿಕ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ಮನವಿ ಪ್ರತಿಗಳನ್ನು ಸಲ್ಲಿಸಿದ್ದಾರೆ.
Related

You Might Also Like
BMTC ನೌಕರರಿಗೆ ಸಾರಿಗೆ ಸಚಿವರಿಂದ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಯೋಗದೊಂದಿಗೆ ಜೂನ್-2025ರ ಮಾಹೆಯ ಸಂಸ್ಥೆಯ 100ಕ್ಕೂ ಹೆಚ್ಚು ಅರ್ಹ ನೌಕರರಿಗೆ ಪ್ರಯಾಸ್ ಯೋಜನೆಯಡಿ...
KKRTC ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ತಾತ್ಕಾಲಿಕ ನೇಮಕ
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (CPM)...
ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ 20ಕ್ಕೂ ಹೆಚ್ಚು ಜನರು ಮೃತ: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು...
KSRTC ನೌಕರರ ವೇತನ ಹೆಚ್ಚಳ ಪ್ರಕರಣ: ನಾಳೆ ಹೈ ಕೋರ್ಟ್ನಲ್ಲಿ ವಿಚಾರಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್: ಬೆಲೆಯಲ್ಲಿ ಭಾರಿ ಇಳಿಕೆ
ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್...
KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!
ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್...
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...