KSRTC ಫೋನ್‌ಪೇ ಹಗರಣ: ತುಮಕೂರು ಸಾರಿಗೆ ಡಿಸಿ, ಡಿಟಿಒ ಸೇರಿ 5 ಮಂದಿಗೆ ನೋಟಿಸ್ ಜಾರಿ ಮಾಡಿದ ಎಂಡಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದಲ್ಲಿ ನಡೆದುಇದೆ ಎನ್ನಲಾದ ಸುಮಾರು 75500 ರೂಪಾಯಿ ಫೋನ್‌ಪೇ ಹಗರಣಕ್ಕೆ ಸಂಬಂಧಿಸಿದಂತೆ ತುಮಕೂರು ಸಾರಿಗೆ ಡಿಸಿ, ಡಿಟಿಒ ಸೇರಿ 5 ಮಂದಿಗೆ ಅಪಾದನ ಪತ್ರ ಜಾರಿ ಮಾಡಿರುವ ಎಂಡಿ ಅನ್ಬುಕುಮಾರ್ ಏಳು ದಿನದೊಳಗೆ ಉತ್ತರಿಸುವಂತೆ ತಾಕೀತು ಮಾಡಿದ್ದಾರೆ.
ನಿಗಮದ ತುಮಕೂರು ವಿಭಾಗದಲ್ಲಿ ಸುಮಾರು 75 ಸಾವಿರ ರೂಪಾಯಿಗೂ ಹೆಚ್ಚು ನಡೆದಿರುವ ಫೋನ್ ಪೇ ಹಗರಣದ ಬಗ್ಗೆ ಸಲ್ಲಿಸಿದ್ದ ದೂರು ಪ್ರಕರಣವನ್ನು ಮುಚ್ಚಿ ಹಾಕಲು 20000 ರೂ.ಗಳನ್ನು ಲಂಚವಾಗಿ ನನಗೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಹಾಗೂ ವಿಭಾಗೀಯ ಸಂಚಲನಾಧಿಕಾರಿ ಕೆ.ಬಸವರಾಜು ಅವರನ್ನು ಅಮಾನುತು ಮಾಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರಿಗೆ ಸಿ.ನಾಗರಾಜು ಗೂಳೂರು ದಾಖಲೆ ಸಹಿತ ಕಳೆದ 2024ರ ಜನವರಿ 24ರಂದು ದೂರು ಸಲ್ಲಿಸಿದ್ದರು.
ಈ ದೂರಿನನ್ವಯ ಸಂಸ್ಥೆಯ ಎಂಡಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಹಾಗೂ ವಿಭಾಗೀಯ ಸಂಚಲನಾಧಿಕಾರಿ ಕೆ.ಬಸವರಾಜು ಸೇರಿದಂತೆ 5 ಮಂದಿ ವಿರುದ್ಧ ಪ್ರಕಣರ ದಾಖಲಿಸಿಕೊಂಡು ಅಪಾದನ ಪತ್ರವನ್ನು ನಿನ್ನೆ ಆರೋಪಿಗಳಿಗೆ ರವಾನಿಸಿದ್ದಾರೆ.
ಜನವರಿಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿರುವ ಸಂಸ್ಥೆ ಕೇಂದ್ರ ಕೇಚೇರಿಗೆ ಹೋಗಿ ಜಾಗೃತ ವಿಭಾಗದ ನಿರ್ದೇಶಕಿ ನಂದಿನಿ ಅವರಿಗೆ ಲಂಚದ ರೂಪದಲ್ಲಿ ಕೊಟ್ಟಿದ್ದ 20000 ರೂ. ಹಣದ ಜತೆಗೆ ದಾಖಲೆಗಳನ್ನು ನೀಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಾಜು ಒತ್ತಾಯಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ತುಮಕೂರು ವಿಭಾಗದ ಡಿಸಿ ಮತ್ತು ಡಿಟಿಒ ಸಂಸ್ಥೆಯ ಮಾನ ಮರ್ಯಾದಿ ಕಳೆದು ಸಾವಿರ ರೂಪಾಯಿಗಾಗಿ ಭಿಕ್ಷೆ ಬೇಡುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದರು.
ಇನ್ನು ತುಮಕೂರು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಿಂದ ಲಂಚ ವಸೂಲಿ ಮಾಡಿರುವ ಬಗ್ಗೆಯೂ ತನಿಖೆ ನಡೆಸಿ ಈ ಅಕ್ರಮದ ಹಿಂದೆ ಇರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಮಾನುತು ಮಾಡುವ ಮೂಲಕ ಭ್ರಷ್ಟರ ಹೆಡೆಮುರಿಕಟ್ಟಬೇಕು ಎಂದು ಕೋರಿದ್ದರು.

ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ವಿಭಾಗೀಯ ಸಂಚಲನಾಧಿಕಾರಿ ಬಸವರಾಜು ಅವರು ನನ್ನ ಮೇಲೆ ಇಲ್ಲ ಸಲ್ಲದ ರೀತಿಯಲ್ಲಿ ಒತ್ತಡ ತಂದು 03-01-2025 ರಂದು ನೀಡಿರುವ ದೂರಿನ ಅರ್ಜಿಯನ್ನು ವಾಪಸ್ ಪಡೆಯುವಂತೆ ಪೀಡಿಸುತ್ತಿದ್ದಾರೆ. ಅಲ್ಲದೆ ಇವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿರುತ್ತಾರೆ ಎಂದು ಆರೋಪಿಸಿದ್ದರು.
ಜ.12ರಂದು 20 ಸಾವಿರ ಕೊಟ್ಟರು: 12-01-2025ರ ಭಾನುವಾರ ಮಧ್ಯಾಹ್ನ 12ರ ಸಮಯದಲ್ಲಿ ನನ್ನ ಸ್ನೇಹಿತರು ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಕಾರಣ ಹಾಗೂ ನಾನು ಬಸ್ ನಿಲ್ದಾಣದಲ್ಲಿರುವಾಗ ನಿಗಮ ತುಮಕೂರು ವಿಭಾಗದ ತುಮಕೂರು ಘಟಕ-1ಕ್ಕೆ ಸೇರಿದ ತುಮಕೂರು ನಗರದ ನೂತನ ಬಸ್ ನಿಲ್ದಾಣ ಡಿ. ದೇವರಾಜ ಅರಸ್ ಬಸ್ ನಿಲ್ದಾಣದ ಸಹಾಯಕ ಸಂಚಾರ ನರೀಕ್ಷಕ (ಎ.ಟಿ.ಐ) ಬಿ.ಆರ್ ನಾಗರಾಜು ಅವರು ಫೋನ್ ಪೇ ಹಗರಣದ ಪ್ರಕರಣದ ಬಗ್ಗೆ ಮಾತನಾಡಲು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋದರು.
ಅಲ್ಲಿ ನೀವು 03-01-2025 ರಂದು ನೀಟಿರುವ ಫೋನ್ ಪೇ ಹಗರಣದ ಪ್ರಕರಣದ ಬಗ್ಗೆ ಸಲ್ಲಿಸಿರುವ ದೂರು ಅರ್ಜಿಯನ್ನು ವಾಪಸ್ ಪಡೆದು ಪ್ರಕರಣವನ್ನು ಮುಚ್ಚಿಹಾಕುವಂತೆ ತಿಳಿಸಿ ತುಮಕೂರು ಬಸ್ ನಿಲ್ದಾಣದ ಶಿವಮೊಗ್ಗ ಅಂಕಣದ ಆಗಮನ-ನಿರ್ಗಮನಗಳ ಪುಸ್ತಕದ 17-07-2024 ರ ಪುಟ ಸಂಖ್ಯೆ 15-16ರ, ನಾಲ್ಕು ಹಾಳೆಗಳ ಮಧ್ಯೆ ಸುತ್ತಿ ನನ್ನ ಪ್ಯಾಂಟಿನ ಜೇಬಿಗೆ 20 ಸಾವಿರ ರೂ. ಹಣವನ್ನು ನಾಗರಾಜು ಅವರು ಬಲವಂತದಿಂದ ಏಕಾಏಕಿ ಇಟ್ಟರು.
ಈಗ ನಾನು (ನಾಗರಾಜು) ದೂರು ಮನವಿ ಪತ್ರದೊಂದಿಗೆ ನನಗೆ ನೀಡಿದ ಹಣದ ಕ್ರಮಸಂಖ್ಯೆಯಲ್ಲಿ ತಿಳಿಸಿರುವ ವಿವರದಂತೆ 500 ರೂ.ಗಳ ಮುಖ ಬೆಲೆಯ ಒಟ್ಟು 40 ನೋಟುಗಳ ಮೊತ್ತ 20000 ರೂಪಾಯಿ ನಗದು ಹಣವನ್ನು ಅಡಕಗೊಳಿಸಿರುತ್ತೇನೆ. ಹಾಗೂ ತುಮಕೂರು ಬಸ್ ನಿಲ್ದಾಣದ ಶಿವಮೊಗ್ಗ ಅಂಕಣದ ಆಗಮನ-ನಿರ್ಗಮನಗಳ ನಾಲ್ಕು ಪುಟಗಳ ಹಾಳೆಯಲ್ಲಿ ಸುತ್ತಿಕೊಟ್ಟಿದ್ದ ಹಾಳೆಯನ್ನು ಸಹ ಲಗತ್ತಿಸಿದ್ದೇನೆ ಎಂದು ದೂರು ಕೊಟ್ಟ ವೇಳೆ ವಿವರಿಸಿದ್ದರು.
ಈ ರೀತಿ ಫೋನ್ ವೇ ಹಗರಣ ನಡೆಸಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹಾಗೂ ವಿಭಾಗೀಯ ಸಂಚಲನಾಧಿಕಾರಿಯಾದ ಕೆ.ಬಸವರಾಜು ಅವರು ಈ ಹಗರಣವನ್ನು ಮುಚ್ಚಿಹಾಕಲು ನನಗೆ ಲಂಚದ ರೂಪದಲ್ಲಿ ಈ ರೀತಿ 20,000 ರೂ.ಗಳ ಹಣವನ್ನು ನೀಡಿದ್ದು, ಈ ಇಬ್ಬರು ಅಧಿಕಾರಿಗಳ ವಿರುದ್ಧ ದಯೇ ದಕ್ಷಿಣೆ ತೋರದೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅಮಾನತುಪಡಿಸಿ ತುಮಕೂರು ವಿಭಾಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕೊನೆ ಮೊಳೆ ಹೊಡೆಯಬೇಕು ಎಂದು ಎಂಡಿ ಅವರಲ್ಲಿ ಮನವಿ ಮಾಡಿದ್ದರು.
ನಾಗರಾಜು ಅವರ ಎಂಡಿಗೆ ಕೊಟ್ಟ ದೂರಿನ ಬಗ್ಗೆ ವಿಜಯಪಥ ಮೀಡಿಯಾ ಕೂಡ ಜನವರಿ 24ರಂದು ಸಮಗ್ರ ವರದಿ ಮಾಡಿತ್ತು. ನಾಗರಾಜು ಅವರು ಕೊಟ್ಟ ದೂರು ಹಾಗೂ ಮೀಡಿಯಾದಲ್ಲಿ ಬಂದಿರುವ ವರಧಿಯ ಪರಿಣಾಮ ಇಂದು ಭ್ರಷ್ಟ ಅಧಿಕಾರಿಗಳಿಗೆ ಎಂಡಿ ಆಪಾದನ ಪತ್ರ ಕೊಟ್ಟು ಕ್ರಮಕ್ಕೆ ಮುಂಗಿದ್ದಾರೆ.
ಇಲ್ಲಿ ನೌಕರರನ್ನು ಕಾಡುವ ಅಧಿಕಾರಿಗಳಿಗೆ ತಕ್ಕ ಕಾನೂನಿ ಪಾಠ ಕಲಿಸುವ ಅಗತ್ಯವಿದ್ದು ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಯಾವುದೆ ಒತ್ತಡಕ್ಕೆ ಒಳಗಾಗದೆ ಲಂಚಬಾಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂಸ್ಥೆಯ ಗೌರವವನ್ನು ಕಾಪಾಡಬೇಕಿದೆ ಎಂದು ನಾಗರಾಜ್ ಮನವಿ ಮಾಡಿದ್ದಾರೆ.
Related


You Might Also Like
ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಕಾರ ಸಂಘದ ವಾರ್ಷಿಕೋತ್ಸವ
ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘವು ತನ್ನ 30ನೇ ಸಾಮಾನ್ಯ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಂಗಮಂದಿರದಲ್ಲಿ ಭವ್ಯವಾಗಿ ಆಚರಿಸಿತು....
ಇತ್ತೀಚಿಗೆ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ: ಸಿಎಂ ಸಿದ್ದರಾಮಯ್ಯ ಆತಂಕ
ಧಾರವಾಡ: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಫಲವತ್ತತೆ ಕಡಿಮೆ...
ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ: 1,65,000 ರೂ. ಎಗರಿಸಿದ ಹ್ಯಾಕರ್
ಬೆಂಗಳೂರು: ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಉಪೇಂದ್ರ ಅವರು ಆನ್ಲೈನ್ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದನ್ನೇ...
ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ ಈ ಕರ್ತವ್ಯ ತಪ್ಪದೇ ಎಲ್ಲರೂ ನಿರ್ವಹಿಸಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೇ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ. ದೇಶದಲ್ಲಿ ವಿವಿಧ ಜಾತಿ,...
ಅವನನ್ನ ಮೂರ್ಖ ಅಂತ ಕರೆಯಬೇಕು: ಪ್ರತಾಪ್ ಸಿಂಹ ಹೆಸರು ಹೇಳದೆ ಸಿಎಂ ವಾಗ್ದಾಳಿ
ಬೆಂಗಳೂರು: ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ಮಾಡಬಾರದು ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ....
KSRTC: ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಕೂಡ 38 ತಿಂಗಳ ಹಿಂಬಾಕಿ ಸರ್ಕಾರ ಕೊಟ್ಟರೆ ನೌಕರರು ಖುಷಿಯಾಗುತ್ತಾರೆ ಎಂದೇ ಶಿಫಾರಸು ಮಾಡಿದೆ
ಬೆಂಗಳೂರು: ಸಾರಿಗೆ ನೌಕರರಿಗೆ 2020 ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವುದಕ್ಕೆ ತಾವು ಈಗಾಗಲೇ 14 ತಿಂಗಳ ಹಿಂಬಾಕಿಯಷ್ಟೇ...
ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲೇ ಧಗಧಗಿಸಿದ ಬಿಎಂಟಿಸಿ ಬಸ್- ಸದ್ಯ 75 ಪ್ರಯಾಣಿಕರು ಸೇಫ್
ಬೆಂಗಳೂರು: ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲೆ ಹೊತ್ತು ಉರಿದು ಸಂರ್ಪೂಣ ಸುಟ್ಟು ಕರಕಲಾದ ಘಟನೆ ನಗರದ ಎಚ್ಎಎಲ್ ಮುಖ್ಯದ್ವಾರದ...
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...