7ನೇ ವೇತನ ಆಯೋಗ ಜಾರಿಯಾದರೆ ₹10 – ₹15ಸಾವಿರದವರೆಗೆ ವೇತನ ಹೆಚ್ಚಳ..!?
ಬೆಂಗಳೂರು: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಗೆ ಬಂದರೆ ₹10ಸಾವಿರದಿಂದ ₹15 ಸಾವಿರದ ವರೆಗೂ ವೇತನ ಹಚ್ಚಳವಾಗುವುದು ಬಹುತೇಕ ಪಕ್ಕವಾಗಿದೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಒಂದುವೇಳೆ ಫೆಬ್ರವರಿಯಲ್ಲಿ 7ನೇ ವೇತನ ಆಯೋಗ ಜಾರಿಗೆ ಮಧ್ಯಂತರ ವರದಿ ಮಂಡಿಸಿದರೆ 6ನೇ ವೇತನ ಆಯೋಗದಲ್ಲಿ ₹17 ಸಾವಿರ ಮೂಲ ವೇತನ ಪಡೆಯುತ್ತಿರುವವರಿಗೆ ಈ 7ನೇ ವೇತನ ಆಯೋಗದಲ್ಲಿ ಕನಿಷ್ಠ ₹27350ರಿಂದ 29050ರವೆಗೂ ಮೂಲ ವೇತನ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.
ಅಂದರೆ 7ನೇ ವೇತನ ಆಯೋಗದಲ್ಲಿ ಕನಿಷ್ಠ ಶೇ.30ರಿಂದ ಗರಿಷ್ಠ ಶೇ.40ರವೆಗೂ ಮೂಲ ವೇತನ ಹೆಚ್ಚಾಗುಲಿದೆ ಎಂದು ಅಂದಾಜಿಸಲಾಗುತ್ತಿದ್ದು, ಏನು ಇಲ್ಲ ಎಂದರೂ ಶೇ.30ರಷ್ಟು ಮೂಲ ವೇತನ ಈ 7ನೇ ವೇತನ ಆಯೋಗದಿಂದ ಹೆಚ್ಚಳವಾಗುವುದು ಪಕ್ಕ ಎಂದು ಅಧಿಕಾರಿಗಳು ಮೌಖಿಕವಾಗಿ ಹೇಳಿಕೆ ನೀಡಿದ್ದಾರೆ.
ಈ ಶೇ.30ರಷ್ಟು ಮೂಲ ವೇತನ ಹೆಚ್ಚಾದರೆ ಈಗ ಅಂದರೆ ಪ್ರಸ್ತುತ ₹17000 ಮೂಲ ವೇತನ ಪಡೆಯುತ್ತಿರುವ ನೌಕರರಿಗೆ 27350 ರೂಪಾಯಿ 7ನೇ ವೇತನ ಆಯೋಗ ಜಾರಿಯಾದರೆ ಸಿಗಲಿದೆ. ಅದರಂತೆ ಶೇ.35 ರಷ್ಟು ಹೆಚ್ಳವಾದರೆ 28250 ಹಾಗೂ ಶೇ.40ರಷ್ಟು ಹೆಚ್ಚಳವಾದರೆ 29050 ರೂಪಾಯಿ ಮೂಲ ವೇತನವಾಗಲಿದೆ.
ಇದೇ ರೀತಿ ಅಂದರೆ ₹17400, ₹17800, ₹18200, ₹18600, ₹19050, ₹19500, ₹19950, ₹20400, ₹21400 ಹೀಗೆ 38850 ರೂ. ಅದಕ್ಕೂ ಹೆಚ್ಚು ಮೂಲವೇತನ ಪಡೆಯುತ್ತಿರುವವರು ನಿಮ್ಮ ಮೂಲ (ಉದಾ: 38850×30 :- 100 = 11655) ವೇತನ ಹೆಚ್ಚಳವಾಗಲಿದೆ. ಹೀಗೆ ಶೇ.35 ಅಥವಾ ಶೇ.40ರಷ್ಟು ಮೂಲ ವೇತನ ಹೆಚ್ಚಾದರೆ ಮೂಲವೇತನ X ಶೇ….. ಎಷ್ಟು ಹೆಚ್ಚಳವಾಗಿದೆ 30%, 35% ಅಥವಾ 40% ಹಾಕಿಕೊಂಡು 100ರಿಂದ ಭಾಗಿಸಿದರೆ ನಿಮಗೆ ಎಷ್ಟು ಹೆಚ್ಚಳವಾಗಿದೆ ಎಂಬುವುದು ಪಕ್ಕಲೆಕ್ಕ ಸಿಗುತ್ತದೆ.
ಹೀಗೆ ನಮ್ಮ ಸಂಬಳ ಎಷ್ಟು ಹೆಚ್ಚಾಗಬಹುದು ಎಂಬ ಲೆಕ್ಕಾಚಾರದಲ್ಲಿ ಈಗಾಗಲೇ ತೊಡಗಿರುವ ನೌಕರರಿಗೆ ಕನಿಷ್ಠ ಶೇ.30ರಷ್ಟು ವೇತನ ಹೆಚ್ಚಳವಾಗಲಿದೆ ಎಂಬುವುದು ಬಹುತೇಕ ಖಚಿತವಾಗಿದೆ. ಅದನ್ನು ಮೀರಿ ಶೇ.35 ಅಥವಾ ಶೇ.4ರಷ್ಟು ಮೂಲ ವೇತನ ಹೆಚ್ಚಳವಾದರೂ ಆಶ್ಚರ್ಯ ಪಡಬೇಕಿಲ್ಲ.