CrimeNEWSನಮ್ಮಜಿಲ್ಲೆ

ಹುಲಿ ಉಗುರು, ಹಲ್ಲುಗಳ ಸಾಗಿಸುತ್ತಿದ್ದ ಇಬ್ಬರು ಖದೀಮರ ಬಂಧನ  

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹನೂರು: ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದ ಅಡ್ಡ ರಸ್ತೆ ಬಳಿ ಆಕ್ರಮವಾಗಿ ಹುಲಿ ಉಗುರು ಹಾಗೂ ಹಲ್ಲುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಅಂಡೆಕುರುಬರ ದೊಡ್ಡಿ ಗ್ರಾಮದ ಗೋಪಾಲ ಹಾಗೂ ರಾಯಚೂರು ಜಿಲ್ಲೆಯ ಹನುಮೇಶ ಬಂಧಿತರು.

ಘಟನೆ ವಿವರ : ಜ.16 ರಂದು ಸಂಜೆ 8 ರ ಸಮಯದಲ್ಲಿ, ಕಚೇರಿಯಲ್ಲಿದ್ದಾಗ ಭಾತ್ಮಿದಾರರ ಮಾಹಿತಿ ಬಂದ ಮೇರೆಗೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಜಿ.ಪಾಳ್ಯ ಗ್ರಾಮದ ಅಡ್ಡರಸ್ತೆ, ಹತ್ತಿರ ಕೆ.ಎ-10 ಎಲ್-3616 ಹೀರೋ ಹೊಂಡಾ ಗ್ಲಾಮರ್ ನಲ್ಲಿ ಯಾರೋ ಆಸಾಮಿಗಳು ಹುಲಿಯ ಉಗುರುಗಳನ್ನು ಆಕ್ರಮವಾಗಿ  ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿ ಅವರ ಬಳಿ ಇದ್ದ ವನ್ಯಜೀವಿ ಹುಲಿಯ 40 ಉಗುರುಗಳು ಹಾಗೂ ಹುಲಿಯ 02 ಹಲ್ಲುಗಳು ಆರೋಪಿಗಳಿಬ್ಬರ ಸಮೇತ ವಶಕ್ಕೆ‌ ಪಡೆಯಲಾಗಿದೆ.

ಹುಲಿಯ ಉಗುರುಗಳು ಹಾಗೂ ಹಲ್ಲುಗಳನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದುದು ವನ್ಯಜೀವಿ ಸಂರಕ್ಷಾಣಾ ಕಾಯ್ದೆ 1972 ರ ಅಡಿಯಲ್ಲಿ ಅಪರಾಧ ಮಾಡಿರುವುದು ಕಂಡು ಬಂದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾಳಿಯಲ್ಲಿ ಪಿಎಸ್ಐ ವಿಜಯ್ ರಾಜ್, ಮುಖ್ಯಪೇದೆಗಳಾದ ಶಂಕರ್, ಬಸವರಾಜು, ಸ್ವಾಮಿ, ರಾಮಚಂದ್ರ, ಚಾಲಕ ಪ್ರಭಾಕರ್ ಇತರರು ಇದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ