ಪಿರಿಯಾಪಟ್ಟಣ : ಪ್ರನಾಳಿಕೆಯ ಎಲ್ಲಾ ಅಂಶಗಳನ್ನು ಜಾರಿಗೆ ತಂದ ಏಕೈಕ ಸರ್ಕಾರವೆಂದರೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಎಂದು ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜಿಡಿಪಿ ದರ ಕುಸಿತ ಕಂಡಿದೆ. 10 ವರ್ಷಗಳಿಗೆ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಮಾಡದೆ ನಿರುದ್ಯೋಗ ತಾಂಡವವಾಡುವಂತೆ ಮಾಡಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗಿ ನಿರಂಕುಶ ಆಡಳಿತ ಅಧಿಕಾರದಲ್ಲಿ ಇದೆ. ಕಾರ್ಪೋರೇಟ್ ಕಂಪನಿಗಳು ಬಿಜೆಪಿ ಮುಖವಾಣಿಯಂತೆ ಕೆಲಸ ನಿರ್ವಹಿಸುತ್ತಾ, ಇವುಗಳೊಂದಿಗೆ ಸರಕಾರ ಹೊಂದಾಣಿಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತದ ಕಾರ್ಯವೈಕರಿಗೆ ಬೇಸತ್ತ ಜನರು ಕಾಂಗ್ರೆಸ್ ಪಕ್ಷದತ್ತ ವಾಲುತ್ತಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಚನೆಯಾಗುತ್ತಿದ್ದು ಕಾಂಗ್ರೆಸ್ ಸರಕಾರ ರಚನೆಯಾಗಲು ಹಗಲಿರುಳು ದುಡಿಯಬೇಕು, 2023ನೇ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಯಾವ ಪಕ್ಷವು ಬಹುಮತ ಪಡೆಯುವುದಿಲ್ಲ ಇವು ಒಳ ಒಪ್ಪಂದ ಮಾಡಿಕೊಂಡು ಮೈತ್ರಿ ಸರಕಾರ ರಚಿಸಲು ಹವಣಿಸುತ್ತಿವೆ ಎಂದು ತಿಳಿಸಿದರು.
ವಿಧಾನಪರಿಷತ್ತ ಸದಸ್ಯ ಡಿ.ತಿಮ್ಮಯ್ಯ ಮಾತನಾಡಿ ವ್ಯಕ್ತಿ ದೂರವಾದಾಗ ಮಾತ್ರ ಆ ವ್ಯಕ್ತಿಗಳ ಮೌಲ್ಯ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಕೆ.ವೆಂಕಟೇಶ್ ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಮತ್ತು ವೆಂಕಟೇಶ್‌ರವರ ಪಾರದರ್ಶಕ ಆಡಳಿತ ನೆನಪಾಗಿದೆ. ಸಿದ್ದರಾಮಯ್ಯರವರ 5 ವರ್ಷಗಳ ಜನಪ್ರಿಯ ಭಾಗ್ಯಗಳನ್ನು ಬಿಜೆಪಿ ಸರಕಾರ ಮುಂದುವರೆಸುವಲ್ಲಿ ವಿಫಲವಾಗಿದೆ. 5 ವರ್ಷದಲ್ಲಿ ಯಾವುದೆ ಜನಪರ ಕಾರ್ಯಕ್ರಮಗಳು ಜಾರಿಯಾಗಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ದುಡಿದರು ವೆಂಕಟೇಶ್‌ರವರಿಗೆ ಸೋಲು ಉಂಟಾಯಿತು. ನಾಲ್ಕುವರೆ ವರ್ಷವಾದ ಮೇಲೆ ನವಿಲು ಯಾವುದು ಕೆಂಬೂತ ಯಾವುದು ಎಂಬುದು ಜನರಿಗೆ ಅರಿವಾಗಿದೆ. ಅಧಿಕಾರದಲ್ಲಿ ಇದ್ದಷ್ಟು ವರ್ಷ ಶಾಸಕ ಕೆ.ಮಹದೇವ್ ಮತ್ತು ಅವರಮಗನ ಅಭಿವೃದ್ದಿಯಾಗಿದೆಯೆ ಹೊರತು ತಾಲೂಕು ಅಭಿವೃದ್ದಿಯಾಗಿಲ್ಲ.
ಜೆಡಿಎಸ್ ಬಿಜೆಪಿ ಬಿಎಸ್‌ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಕಾಂಗ್ರೆಸ್‌ಗೆ ಸೋಲಾಯಿತು ಇವರಿಗೆ ರಾಜಕೀಯ ಸಿದ್ದಾಂತವಿಲ್ಲ ಜನರಿಗೆ ಗೊಂದಲ ಉಂಟುಮಾಡಿ ರಾಜಕೀಯ ಲಾಭ ಮಾಡಲು ಹೊರಟಿವೆ. ಜೆಡಿಎಸ್‌ಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು 10 ವರ್ಷಕಳೆದು ಸಾಧ್ಯವಿಲ್ಲ. ಕಣ್ಣೀರು ಹಾಕುತ್ತಾ ಇತರ ಪಕ್ಷದ ಸಹಾಯಕ್ಕಾಗಿ ಅಂಗಲಾಚುತ್ತದೆ. ಈಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ಜಾರಿಗೆ ತಂದ ಮಾಜಿ ಶಾಸಕ ಕೆ.ವೆಂಕಟೇಶ್ ಅವರ ಬಹಿರಂಗ ಚರ್ಚೆ ಮಾಡಿದರೆ ಜನರಿಗೆ ಹೆಚ್ಚಿನ ಅರಿವಾಗುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಬರುವವರು ನಮ್ಮ ಕಾರ್ಯಕರ್ತರು ಗೌರವರದಿಂದ ಕಾಣಬೇಕು, ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು ಹೆಚ್ಚಿನಸಂಖ್ಯೆಯಲ್ಲಿ ಹಲವಾರು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷದ ಬಳಿ ಬರುತ್ತಿದ್ದಾರೆ. ಇಂತಹವನ್ನು ಗೌರವದಿಂದ ಕಾಣಿ ಪಕ್ಷಕ್ಕೆ ಕರೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ತಾ.ಪಂ.ಮಾಜಿ ಸದಸ್ಯರಾದ ಕುರುಬ ಸಮುದಾಯದ ಮುಖಂಡ ಆರ್.ಎಸ್.ಮಹಾದೇವ್, ದಲಿತ ಮುಖಂಡರಾದ ಟಿ.ಈರಯ್ಯ, ತಮ್ಮಣ್ಣಯ್ಯ, ಒಕ್ಕಲಿಗ ಸಮುದಾಯ ಪ್ರಕಾಶ್, ಮಾಸ್ಟರ್ ಮೋಹನ್, ತಾಲೂಕಿನ ವಿವಿಧ ಪಕ್ಷಗಳನ್ನು ತೊರೆದು ನೂರಾರು ಮಂದಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್‌ಜಾನ್‌ಬಾಬು, ಕೆಪಿಸಿಸಿ ಸದಸ್ಯರಾದ ನಿತಿನ್‌ವೆಂಕಟೇಶ್, ಅನೀಲ್‌ಕುಮಾರ್, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ವಿ.ಅನಿತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮುತ್ತುರಾಣಿ, ಟೌನ್ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್‌ಗೌಡ, ಮುಖಂಡರಾದ ಟಿ.ಡಿ.ಗಣೇಶ್, ಪುರಸಭಾ ಸದಸ್ಯರಾದ ಪ್ರಕಾಶ್, ಮಂಜುಳ, ಎಚ್.ಕೆ.ಮಂಜುನಾಥ್, ರವಿ ಮತ್ತಿತರರು ಇದ್ದರು.