ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಶೇ.99ರಷ್ಟು ನೌಕರರಿಗೆ ಇಷ್ಟವಿಲ್ಲದ 4ವರ್ಷಕ್ಕೊಮ್ಮೆ ಅಗ್ರಿಮೆಂಟ್ ಮೂಲಕ ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಇಂದು ಸುಮಾರು 8 ಸಾರಿಗೆ ನೌಕರರ ಪರ ಸಂಘಟನೆಗಳು ಕರೆ ನೀಡಿದ್ದ ಧರಣಿ ಬಹುತೇಕ ವಿಫಲವಾಗಿದೆ.
ಮಂಗಳವಾರ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಗಳ ಬಳಿ ಹಾಗೂ ಬೆಂಗಳೂರಿನ ಫ್ರೀಡಂಪಾರ್ಕ್ ಸೇರಿದಂತೆ ವಿಭಾಗೀಯ ಕಚೇರಿಗಳ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಕರೆ ನೀಡಿದ್ದ ಧರಣಿಗೆ ನೌಕರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ನೌಕರರು ನಮಗೆ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡುವಂತೆ ನಾವು ರಸ್ತೆಗಿಳಿಯುವುದನ್ನು ಶಾಶ್ವತವಾಗಿ ನಿಲ್ಲಿಸುವ ನಿಟ್ಟಿನಲ್ಲಿ ನಮಗೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನವನ್ನು ವೇತನ ಆಯೋಗ ಮಾದರಿಯಲ್ಲಿ ಕೊಡಬೇಕು ಎಂಬ ಬೇಡಿಕೆ ಇಟ್ಟು ಕಳೆದ 2021ರ ಏಪ್ರಿಲ್‌ನಲ್ಲಿ 15ದಿನಗಳ ಕಾಲ ಮುಷ್ಕರ ಮಾಡಿದರು.
ಆ ವೇಳೆ ಅನೇಕ ನೌಕರರನ್ನು ನಾಲ್ಕೂ ನಿಗಮಗಳ ಅಧಿಕಾರಿಗಳು ಏಕಾಏಕಿ ವಜಾ ಮಾಡಿದ್ದಾರೆ. ಅಲ್ಲದೆ ನೌಕರರಿಗೆ ಸರ್ಕಾರವೇ ಲಿಖಿತವಾಗಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸದೆ ಕೊಟ್ಟ ಮಾತನ್ನು ತಪ್ಪಿದ ಭ್ರಷ್ಟ ಸರ್ಕಾರ ಎಂಬ ಅಪಖ್ಯಾತಿಗೆ ಒಳಗಾಗಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೆಲ ಸಂಘಟನೆಗಳ ಮುಖಂಡರ ಮಾತನ್ನು ಕೇಳಿಕೊಂಡು ನೌಕರರಿಗೆ ಕಳೆದ ಮೂರು ವರ್ಷದಿಂದಲೂ ವೇತನ ಹೆಚ್ಚಳ ಮಾಡದೆ ಉದ್ಧಟತನದಿಂದಲೇ ವರ್ತಿಸಿಕೊಂಡು ಬರುತ್ತಿದೆ.
ಹೀಗಾಗಿ ಇಂದು ಮತ್ತೆ ನಮಗೆ ನಾಲ್ಕು ವರ್ಷಕ್ಕೊಮ್ಮೆ ಆಗಬೇಕಿರುವ ಅಗ್ರಿಮೆಂಟ್ ಅದರೆ 2020 ಜನವರಿ 1ರಿಂದಲೇ ಆಗಬೇಕಿದ್ದು ಇನ್ನೂ ಆಗಿಲ್ಲ. ಆದ್ದರಿಂದ ಕೂಡಲೇ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳನ್ನು ಕರೆದು ವೇತನ ಪರಿಷ್ಕರಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಬೃಹತ್ ಮಟ್ಟದಲ್ಲಿ ಕ್ರಿಯಾ ಸಮಿತಿ ಧರಣಿ ಹಮ್ಮಿಕೊಂಡಿತ್ತು.
ಆದರೆ ಈ ಬೃಹತ್ ಧರಣಿಗೆ ಶೇ.1ರಂಷ್ಟು ನೌಕರರು ಕೂಡ ಬೆಂಬಲ ನೀಡದೆ ನಿಮ್ಮ ಅಗ್ರಿಮೆಂಟ್ ಮೂಲಕ ವೇತನ ಪರಿಷ್ಕರಣೆ ಮಾಡುವುದು ನಮಗೆ ಬೇಡ ಎಂಬುದನ್ನು ಬಹಿರಂಗವಾಗಿಯೇ ತಿರಸ್ಕರಿಸುತ್ತಿರುವುದು ಇಂದು ಮತ್ತೊಮ್ಮೆ ಸಾಬೀತಾದಂತಾಗಿದೆ.
ಇನ್ನು ನೌಕರರು ನಮಗೆ ಸರ್ಕಾರಿ ನೌಕರರಿಗೆ ಅಥವಾ ರಾಜ್ಯದ ಎಲ್ಲ ನಿಗಮಗಳಲ್ಲಿ ಇರುವಂತೆ ವೇತನ ಆಯೋಗ ಮಾದರಿಯಲ್ಲೇ ವೇತನ ಕೊಡಬೇಕು ಎಂದು ಕಳೆದ ಮೂರು ವರ್ಷದಿಂದಲೂ ಆಗ್ರಹಿಸುತ್ತಿದ್ದಾರೆ. ಆದರೆ, ಅದನ್ನು ಕೆಲ ಸಂಘಟನೆಗಳು ಒಪ್ಪದೆ ಅಗ್ರಮೆಂಟ್ ಮೂಲಕವೇ ವೇತನ ಪರಿಷ್ಕರಣೆ ಆಗಬೇಕು ಎಂದು ನೌಕರರ ಬೇಡಿಕೆ ವಿರುದ್ಧವಾಗಿಯೇ ಸರ್ಕಾರವನ್ನು ಒತ್ತಾಯಿಸುತ್ತಿವೆ.
ಹೀಗಾಗಿ ಇಂದು ನಡೆದ ಬೃಹತ್ ಧರಣಿಯಲ್ಲಿ ಶೇ.1ರಷ್ಟೂ ನೌಕರರು ಭಾಗವಹಿಸದೆ ಕೇವಲ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳಲ್ಲೂ ಬೆರಳೆಣಿಯಷ್ಟು ಮಂದಿ ಮಾತ್ರ ಧರಣಿ ನಡೆಸಿದ್ದು ಬಹುತೇಕ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಧರಣಿ ವಿಫಲವಾದಂತಾಗಿದೆ.