NEWS

ಸಿಟಿ ಮಾರುಕಟ್ಟೆ ಬಳಿ ಮೇಲ್ಸೇತುವೆಯ ಎರಡೂ ಬದಿಗಳಲ್ಲಿ ಹಣದ ಮಳೆ ಸುರಿಸಿದ ವ್ಯಕ್ತಿ ಬಂಧನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಧಾನಿಯ ಸಿಟಿ ಮಾರುಕಟ್ಟೆ ಬಳಿ ಮೇಲ್ಸೇತುವೆಯ ಎರಡೂ ಬದಿಗಳಲ್ಲಿ ನಿನ್ನೆ (ಜ.24) ಹಣದ ಮಳೆ ಸುರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಹೌದು! ಮಂಗಳವಾರ ಬೆಳಗ್ಗೆ ಸಿಟಿ ಮಾರ್ಕೆಟ್‌ಗೆ ಬಂದಿದ್ದ ಜನರು ತಾವು ಕಂಡದ್ದನ್ನು ನಂಬಲು ಕೆಲ ನಿಮಿಷಗಳು ಸಾಧ್ಯವಾಗಲಿಲ್ಲ. ಮೇಲ್ಸೇತುವೆಯಿಂದ ಕೆಳಗೆ 10 ರೂಪಾಯಿ ಮೌಲ್ಯದ ನೋಟುಗಳ ಮಳೆ ಸುರಿಯುವುದನ್ನು ಕಂಡು ಆಶ್ಚರ್ಯಚಕಿತರಾದರು. ಮೊದಲಿಗೆ ಇದು ತಮಾಷೆಯಂತೆ ಕಂಡುಬಂದರೂ, ಅದು ನಿಜವಾದ ನೋಟುಗಳು ಎಂದು ತಿಳಿದ ನಂತರ ಅಲ್ಲಿದ್ದ ಮಂದಿ ಆ ನೋಟುಗಳನ್ನು ಸಂಗ್ರಹಿಸಲು ಪರಸ್ಪರ ಮುಗಿ ಬೀಳಲಾರಂಭಿಸಿದರು.

ಫ್ಲೈಓವರ್‌ನಿಂದ ಹಣ ಎಸೆಯುತ್ತಿದ್ದ ವ್ಯಕ್ತಿಯು ಸೂಟ್‌ ಧರಿಸಿದ್ದರು ಮತ್ತು ಆತನ ಕುತ್ತಿಗೆಗೆ ಗೋಡೆ ಗಡಿಯಾರವನ್ನು ನೇತುಹಾಕಿಕೊಂಡಿದ್ದ. ಆತ ಯಾರು ಎಂದು ಮೂಲ ಹುಡುಕಿದ ಪೊಲೀಸರಿಗೆ ಅರುಣ್ ಅಕಾ ಆ್ಯಂಕರ್ ಅರುಣ್ ಎಂದು ತಿಳಿದು  ಬಂದಿದೆ. ಈತ ದ್ವಿಚಕ್ರ ವಾಹನದಲ್ಲಿ ಬಂದು ಬೆಳಗ್ಗೆ 10.45ರ ಸುಮಾರಿಗೆ ಫ್ಲೈ ಓವರ್ ಮೇಲೆ ಬೈಕ್‌ ನಿಲ್ಲಿಸಿ ನಂತರ ತನ್ನ ಬಳಿಯಿದ್ದ ಚೀಲದಿಂದ ನೋಟುಗಳನ್ನು ಫ್ಲೈಓವರ್‌ನಿಂದ ಕೆಳಗೆ ಎಸೆದಿದ್ದಾರೆ.

ಅವರ ಈ ನಡೆಯು ಫ್ಲೈಓವರ್‌ ಮೇಲಿದ್ದ ಪ್ರಯಾಣಿಕರ ಗಮನವನ್ನೂ ಸೆಳೆಯಿತು. ಕೆಲವರು ಅವರನ್ನು ತಡೆದು ನಿಲ್ಲಿಸಿ ನಗದನ್ನು ತಮಗೇ ಕೊಡಿ ಎಂದು ಕೇಳಿದರು. ಅದನ್ನು ಕೇಳಿಸಿಕೊಳ್ಳದ ಅರುಣ್ ಮಾತ್ರ ಫ್ಲೈಓವರ್‌ನ ಎರಡೂ ಬದಿಯಿಂದ ನೋಟುಗಳನ್ನು ಕೆಳಗೆ ಎಸೆದಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ಬೈಕ್ ಸ್ಟಾರ್ಟ್ ಮಾಡಿ ವೇಗವಾಗಿ ಹೊರಟು ಹೋಗಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಿಟಿ ಮಾರ್ಕೆಟ್ ಪೊಲೀಸರು ಕಾರ್ಯಾಚರಣೆಗೆ ಇಳಿದು ಆತನನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ವಿಚಾರಣೆಗೆ ಒಳಪಡಿಸಿದ್ದು, ತಾನು Vdot9events.comನ ಸಂಸ್ಥಾಪಕ ಮತ್ತು ಸಿಇಒ ಎಂದು ಹೇಳಿದ್ದಾರೆ.

ತಾನು ಬಿಸಿನೆಸ್ ಕೋಚ್, ಮೋಟಿವೇಶನಲ್ ಸ್ಪೀಕರ್, ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದೇನೆ ಮತ್ತು ಕರ್ನಾಟಕದ ಮೊದಲ ಈವೆಂಟ್ ಬ್ಲಾಗರ್ ಎಂದು ಅರುಣ್ ಪೊಲೀಸರಿಗೆ ತಿಳಿಸಿದ್ದಾರೆ. ನಾಗರಬಾವಿ ನಿವಾಸಿಯಾದ ಅರುಣ್ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಆದರೆ, ಸರಿಯಾದ ಸಮಯದಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಒಳ್ಳೆಯ ಉದ್ದೇಶದಿಂದಲೇ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಕನಿಷ್ಠ ನಿನ್ನೆ 3 ಸಾವಿರ ಹಣವನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಯಂಪ್ರೇರಿತ ಪ್ರಕರಣವನ್ನು ಅರುಣ್‌ ವಿರುದ್ಧ ದಾಖಲಿಸಿಕೊಂಡಿರುವ ಪೊಲೀಸರು ಸಾರ್ವಜನಿಕ ದಾರಿಯಲ್ಲಿ ಅಪಾಯ ಅಥವಾ ಅಡ್ಡಿಪಡಿಸಿದ ಕಾರಣ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತನು ಏಕೆ ಹೀಗೆ ಮಾಡಿದ ಎಂಬ ಕಾರಣ ತಿಳಿಯಲು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು